Posts

Showing posts from December, 2023

🌹ಭಾವ ಗೀತೆ -71🌹

Image
🌹 ಅರಳಿತೆ ಯೌವ್ವನ 🌹 ಎಲ್ಲಿ ಹುಡುಕಲಿ ನಾ ಯೌವ್ವನ  ಹದಿಹರೇಯದಿ ದುಃಖ ದುಮ್ಮಾನ ಆಸೆಗಳ ಮಸಣದಿ ಬೆಂದು ಬರಡಾಗಿದೆ ಬದುಕು ನೊಂದು. //ಪಲ್ಲವಿ// ಕನಸುಗಳ ಸಂತೆಯಲ್ಲಿ ಸವಿ ನಿದ್ದೆ ನೆನಪುಗಳ ಚಿಂತೆಯಲ್ಲಿ ನಾ ಬಿದ್ದೆ ವಯಸ್ಸಿನ ತಳಮಳದಿ ಮೈ ಒದ್ದೆ ಹುಚ್ಚು ಮನಸ್ಸಿನ ಸಿಹಿ ಮುದ್ದೆ ಬೆಳಕಿನ ಕಿರಣದಿ ದೇಹ ಹೊಳಪು ಮಣ್ಣಿನ ಮಡಿಲಲ್ಲಿ ಮಾಗದ ಉರುಪು ಪುಸ್ತಕದ ಜ್ಞಾನ ಏಕೋ ನುಣುಪು ದೇವರೇ ಬರೆದಿಟ್ಟ ಶಿಕ್ಷೆಯ ಮುಡಿಪು ಮಾಡುವ ಕೆಲಸದಿ ಮನಸ್ಸಿಲ್ಲ ಶಾಲೆಯಲ್ಲಿ ಗೆಳತಿಯದೆ ಕನಸೆಲ್ಲ ಮನೆಯಲ್ಲಿ ಅಪ್ಪ ಅಮ್ಮ ಬೇಕಿಲ್ಲ ಯೌವ್ವನದ ಬಯಕೆಗೆ ಕೊನೆಯಿಲ್ಲ ಕಾಡಿದೆ ಇವರ ನೋಡಿ ದೆವ್ವಕ್ಕೂ ಭಯ ದೇವರು ಸೋತು ಹೋದ ನೋಡಿ ಇವರ ಲಯ ಚಂದ್ರನು ನಾಚುವನು ನೋಡಿ ಇವರ ನಯ ಮಾತಿನಲ್ಲಿ ವಯಸ್ಸು ಕಾಣದಂತೆ ಮಾಯ ********ರಚನೆ**********  ಡಾ. ಚಂದ್ರಶೇಖರ್ ಸಿ.ಹೆಚ್

ಭಾವಗೀತೆ-70

Image
  🌹 ಮುಟ್ಟ ಬೇಡವೋ ಮನುಜ🌹 ಮುಟ್ಟಬಿಡುವೊ ಮನುಜ ನೀ ನನ್ನ ತಟ್ಟಿದರೆ ಸಿಗುವುದು ನಿನಗೆ ಚಿನ್ನ ಮುಟ್ಟಿ ತಟ್ಟುವ ಆಟ ಬಲು ಚೆನ್ನ ಉಸಿರುಗಟ್ಟಿತು ನನ್ನ ಜೀವ ರನ್ನ. //ಪಲ್ಲವಿ// ಇಟ್ಟಿಗಾಗಿ ಬೆವರು ಸುರಿಸುವವರು ಬುದ್ಧಿ ಬಂದ ಮೇಲೆ ಮೆಟ್ಟಿ ಕುಂತವರು ಬುದ್ಧಿಯಿಂದ ಇಟ್ಟು ಉಂಡು ಹಸಿದ ಹೊಟ್ಟೆಯ ಒದ್ದು ನಿಂತವರು ಮಾತಲ್ಲಿ ಮನೆಯ ಕಟ್ಟುವವರು ಅಕ್ಷರದಲ್ಲಿ ಆಕಾಶ ಆಳುವವರು ಮಾತಿನ ಅಕ್ಷರದಿಂದ ಹಕ್ಕು ಕಸಿದವರು ಖಾಲಿ ತಟ್ಟೆಯ ನೋಡಿ ಬಿಕ್ಕಿ ಅತ್ತವರು ಮೇಲು ಕೀಳು ಎಂಬ ಭಾವ ಜಗದಲ್ಲಿ ಬಡವ ಬಲ್ಲಿದನೆಂಬ ಒಡಕು ಮನದಲ್ಲಿ ಈ ಸುಳ್ಳು ಭಾವದ ಬದುಕ ಸಂತೆಯಲ್ಲಿ ಸತ್ಯಕ್ಕೆ ನಿಜಕ್ಕೂ ಸಾವು ಕೊನೆಯಿಲ್ಲಿ ಇದ್ದವರು ದಾನ ಧರ್ಮದ ಗತ್ತು ಹಸಿದವರ ಹೊಟ್ಟೆಗೆ ತುತ್ತಿನ ಕುತ್ತು ಆದರೂ ನಮ್ಮ ದೇಶ ಮಹಾನ್ ಅಹಂಕಾರದ ಮದವೇರಿದ ಜನಕೆ ಸಮಾನ್ *********ರಚನೆ*********  ಡಾ. ಚಂದ್ರಶೇಖರ್ ಸಿ ಹೆಚ್

ಭಾವಗೀತೆ -69

Image
  🌹 ನರ ಮಾನವ🌹 ನರ ಮಾನವ ದೈವ ಕಾಣ ಹೊರಟ ದೈವನಾಗಲಿಲ್ಲ  ದಾನಮಾಡ ಹೊರಟ  ದೇವನಾದನಲ್ಲ //ಪಲ್ಲವಿ// ಮನುಷ್ಯತ್ವ ಒಂಚೂರು ಇಲ್ಲ ಮನುಜನಾದನಲ್ಲ ಯುದ್ಧ ಮಾಡಲಿಲ್ಲ ಕತ್ತಿ ಗುರಾಣಿ ಹಿಡಿದನಲ್ಲ ದ್ವೇಷ ಅಸೂಯೆ ಮರೆತು ನಡೆದ ಶತ್ರು ಕಾಣಲಿಲ್ಲ ಪುಸ್ತಕಗಳ ಓದಲಿಲ್ಲ ಜ್ಞಾನ ಉಟ್ಟಿತಲ್ಲ ಬೋಧಿವೃಕ್ಷದ ಕೆಳಗೆ ಕುಳಿತ ಜ್ಞಾನೋದಯವಾಯಿತಲ್ಲ ಊರೂರು ಸುತ್ತಿ ಬಂದ ತಿಳಿದ ಯಾರೂ ನನ್ನವರಲ್ಲ ವಿದ್ಯೆಯನ್ನು ಮರೆತ ಅಕ್ಷರದ ಬೆಳಕು ಮೂಡಲಿಲ್ಲ ಪ್ರಕೃತಿಯೊಡನೆ ಬೆರೆತ ಆದರು ದೈವ ಕಾಣಲಿಲ್ಲ ಮಾನವೀಯತೆ ತಿಳಿಯ ಹೋಗಿ ಮೌಲ್ಯ ಸತ್ತಿತ್ತಲ್ಲ ಮಾತು ಮೌನಿಯಾದ ಜ್ಞಾನದ ಚಿಲುಮೆ ಹುಟ್ಟಿತಲ್ಲ ********ರಚನೆ ********* ಡಾ. ಚಂದ್ರಶೇಖರ್ ಸಿ.ಹೆಚ್

ಭಾವಗೀತೆ-68

Image
  🌹 ಪ್ರಕೃತಿ ಮಾತೆ🌹 ಪ್ರಕೃತಿಯ ಮಾತೆ ಒಮ್ಮೆ ನಕ್ಕರೆ ಹಸಿರು ತುಂಬಿ ಪೈರಿನ ಸಕ್ಕರೆ ಪ್ರಕೃತಿ ಮಾತೆ ಒಮ್ಮೆ ಮುನಿದರೆ ಸಕಲ ಜೀವಿಗಳ ಸುತ್ತುವ ಬಂಧು ನೆರೆ // ಪಲ್ಲವಿ// ಇರಲಿ ತಾಯಿ ಸ್ವಲ್ಪ ಕೊಂಚ ಕರುಣೆ ನಾವು ನಿನ್ನ ಮಕ್ಕಳು ತಾಯಿ ನೀನು ತಾನೆ ನಮ್ಮ ಸಾಕಿ ಸಲಹುವಳು ನೋವಾಗದಂತೆ ನಮ್ಮ ಕಾಯುವವಳು ನರರು ಮೆರೆವರು ನಿನ್ನ ಮೇಲೆ ಕ್ರೌರ್ಯ ನೀನು ಮುನೀದರೆ ತೋರುವೇ ಸುನಾಮಿ ಶೌರ್ಯ ಆಸೆಪಟ್ಟು ನಾವು ಹಿಡಿದೆವು ಕೊಡಲಿ ದುರಾಸೆ ನಮ್ಮ ಕಿತ್ತು ತಿನ್ನದಿರಲಿ ಪ್ರಕೃತಿಯ ಮಾತೆ ತುಂಬಿಸುವಳು ಹೊಟ್ಟೆ ಹೆಚ್ಚು ಎಗರಿದರೆ ಕಾಯಂ ತಾನೆ ತಣ್ಣೀರ ಬಟ್ಟೆ ನಿನ್ನ ಮುಂದೆ ಎಂದು ಮರುಗಬೇಕು ನಾವು ಇಲ್ಲದಿದ್ರೆ ನಮಗೆ ನಿಜವು ತಾನೆ ಸಾವು ಬೆಟ್ಟಗುಡ್ಡ ಕಡಿದು ಫೈರು ಬೆಳೆದಿಹೇವು ನೆರೆಬಂದು ಬೆಳೆದ ಪೈರಾ ಕಳೆದಿಹೇವು ಪ್ರಕೃತಿಯೇ ನಮ್ಮ ಪ್ರೀತಿಯ ದೈವ ಪ್ರಕೃತಿಯೇ ನಮ್ಮ ಭಾವದಲ್ಲಿ ಜೀವ ********ರಚನೆ ******** ಡಾ.ಚಂದ್ರಶೇಖರ್ ಸಿ ಹೆಚ್

ಭಾವಗೀತೆ -67

Image
🌹 ದೇವರ ಗುಡಿ🌹 ದೇವರು ಇಲ್ಲದ ಮನೆ ಏನ್ ಚೆಂದ ಪುಸ್ತಕವಿಲ್ಲದ ಗ್ರಂಥಾಲಯವು ಏನ್ ಚಂದ ದೇವರು ಕಾಪಾಡುವನು ಈ ಮಾನವರನ್ನು ಇವರ ಕರ್ಮವನ್ನು ನೋಡಿ ರೇಗಾಡುವನು //ಪಲ್ಲವಿ// ಊರಿಗೆ ಒಬ್ಬ ದೇವರು ಗುಡಿಯಲ್ಲಿ ಜನಗಳು ನೀತಿ ಮರೆತರು ನುಡಿಯಲ್ಲಿ ಮೋಸ ದ್ರೋಹ ಮಾಡಿದ ಜನರು ಗುಡಿಯ ದೇವರ ಬೇಡುತಲಿಹರು ಕಲ್ಲು ಎಡವಿದರೆ ದೇವರು ಇಲ್ಲಿ ಅರಿಶಿನ ಕುಂಕುಮ ಭಕ್ತಿಯ ಚೆಲ್ಲಿ ಆದಿ ಬೀದಿಯಲ್ಲಿ ದೇವರ ವಾಸ ಮನೆಮನೆಯಲ್ಲೂ ದೇವರ ಪ್ರಾಸ ದೇವರ ಸಂಖ್ಯೆ ಜಾಸ್ತಿ ಆಯಿತು ಮನುಷ್ಯರಲ್ಲಿ ಮನುಷ್ಯತ್ವ ಕಡಿಮೆಯಾಯಿತು ಮೈ ಮೇಲೆ ಬಂದನು ದೇವರು ಮಾಟ ಮಂತ್ರಗಳನ್ನು ಸುಟ್ಟುಬಿಟ್ಟ ದೇವರು ಮನುಷ್ಯನ ನೋಡಿ ಸೋತ ದೇವರು ಈ ಯುಗದಲ್ಲಿ ಮನುಷ್ಯರೇ ದೇವರು ನ್ಯಾಯ ನೀತಿಗೆ ಬೆಲೆ ಇಲ್ಲಿ ಇಲ್ಲ ದೇವರ ಭಜನೆ ಇನ್ನು ತಪ್ಪಿಲ್ಲ *********ರಚನೆ**********  ಡಾ. ಚಂದ್ರಶೇಖರ್ ಸಿ.ಹೆಚ್

ಭಾವಗೀತೆ-66

Image
  🌹 ನರಭಕ್ಷಕ🌹 ಮಾನವರೆಲ್ಲ ದಾನವರಾದರೆ ರಾಕ್ಷಸರ ಎಲ್ಲ ನರಭಕ್ಷಕರಾದರೆ ಕೋರೆ ಹಲ್ಲು ಬಂದಂತೆ ಪ್ರಾಣಿಗೆ ಕೊಡು ಬಂದಂತೆ       ನಂಬಿದರೆ ನಂಬಿ       ಬಿಟ್ಟರೆ ಬಿಟ್ಟುಬಿಡಿ //ಪಲ್ಲವಿ// ದೆವ್ವದಂತೆ ನಿಶಾಚರಿಯಾಗಿ ದೈವದಂತೆ ದರ್ಶನವಾಗಿ ದೆವ್ವವು ಮನುಜನ ಬಿಟ್ಟಂತೆ ದೈವವು ನಮಗೆ ಅರಸಿದಂತೆ        ನಂಬಿದರೆ ನಂಬಿ       ಬಿಟ್ಟರೆ ಬಿಟ್ಟುಬಿಡಿ //ಪ// ಉರಿವ ಬೆಂಕಿಯ ರೂಪ ವಿಕಾರ ಹರಿವ ನದಿಯ ರೂಪ ಪ್ರಹಾರ ಬೆಂಕಿಯಲ್ಲಿ ಎಲ್ಲಾ ಬೆಯಲೇಬೇಕು ನದಿಯ ನೀರನ್ನು ಕುಡಿಯಲೇ ಬೇಕು         ನಂಬಿದರೆ ನಂಬಿ         ಬಿಟ್ಟರೆ ಬಿಟ್ಟುಬಿಡಿ //ಪ// ಕಥೆಯು ಸಿನಿಮಾ ಆದಂತೆ ಸಿನಿಮಾ ಜನಮನ ಗೆದ್ದಂತೆ ಏನಿದು ಸುಂದರ ಕಥೆ ಕೇಳಲು ನೋವಿನ ವ್ಯಥೆ          ಹೃದಯವ ಕಲಕಿತೆ?         ಮನವು ಮಿಡಿಯಿತೆ?                        ನಂಬಿದರೆ ನಂಬಿ                        ಬಿಟ್ಟರೆ ಬಿಟ್ಟುಬಿಡಿ //ಪಲ್ಲವಿ// **********ರಚನೆ*********  ಡಾ. ಚಂದ್ರಶೇಖರ್ ಸಿ ಹೆಚ್

ಒಲವೇ ನೀನು

Image
  ನನ್ನ ಒಲವೇ ನೀನು ನನ್ನ ಚೆಲುವೇ ನೀನು ನನಗಾಗಿ ಬಂದ  ನವ ಗೆಲುವೇ ನೀನು  ಮೌನದಿ ಮೂಕನ ಮಾಡಿ ನನ್ನಾ ಕಾಡಿದೆ ಪ್ರೀತಿಯ ಕಣ್ಗಳಲ್ಲಿ ಸನ್ನೆ ನೀಡಿದೆ ಹೃದಯದ ಅರಮನೆಗೆ ದಾರಿ ತೋರಿದೆ ಬದುಕಿನ ಪಯಣದಲಿ ನಿನ್ನ   ನೆನಪು ಕಾಡಿದೆ ಯಾವ ಊರ ರಾಣಿಯೋ ನೀನು ನನ್ನಾ ಕಾಡುವ ಬೇಳೋಕೋ ನೀನು ರಾತ್ರಿಯಲಿ ಮೂಡಿದ ನಕ್ಷತ್ರವೇ ನೀನು ಗುಡುಗದೆ ಮಿಂಚುವ ಹೊಳಪು ನೀನು ತಣ್ಣನೆ ಸುರಿದ ಮಳೆ ಹನಿಯೋ ನೀನು ದೇವರೂ ಕೊಟ್ಟ ಭಾಗ್ಯವೂ ನೀನು ನೋವಲು ಸಂತೈಸಿದ ಕರುಣೆ ಕತ್ತಲಲಿ ಬೆಳಕಾದ ತರುಣೆ ಮುಂಗಾರನಲ್ಲಿ ಕಂಡ ಹಸಿರು ನನ್ನೆದೆಯಲಿ ನುಸಿಳಿದ ಉಸಿರು  *********ರಚನೆ********* ಡಾ.ಚಂದ್ರಶೇಖರ್ ಸಿ ಹೆಚ್

ಭಾವಗೀತೆ -65🌹

Image
🌹 ತಿನ್ನುವ ಅನ್ನ🌹 ತಿನ್ನುವ ಅನ್ನವ ಬೀದಿಗೆ ಎಸೆದರೆ ಹಸಿದ ಹೊಟ್ಟೆಗೆ ಬರವಿಲ್ಲಿ ಹಸಿದ ಹೊಟ್ಟೆಯ ಕಂಡರೆ ಅನ್ಯರಂತೆ ನೂಕುವರು ಎಲ್ಲಾ ಇಲ್ಲಿ //ಪಲ್ಲವಿ// ಮಹಡಿಯ ಮೇಲೆ ಮಹಡಿಯ ಕಟ್ಟಿ ಉಳುವರು ನಿಮ್ಮ ಆರು ಮುರಡಿ ಕಾರು ಬೈಕು ಇದ್ದರೆ ಏನು ಕಾಲಲ್ಲಿ ನಡೆದರೆ ದೇಹ ಗಟ್ಟಿ ತಡಿ  ಹತ್ತಾರು ಎಕರೆ ಭೂಮಿ ಇದ್ದರೆ ನಿನ್ನ ಕರೆವರು ಜಮೀನ್ದಾರ ಪರರ ಜಮೀನಲ್ಲಿ ಕೆಲಸ ಮಾಡಿದರೆ ನೀನು ಒಬ್ಬ ಕಾರ್ಮಿಕ ನೌಕರ ಮನುಷ್ಯ ರೂಪದಿ ಮುಖವಾಡ ಪಡೆದು ಮಾಡುತ್ತಿರುವುದು ಅನ್ಯಾಯ ಇಲ್ಲಿ ನ್ಯಾಯವೊ ಮಾಡು ಅನ್ಯಾಯವ ಮಾಡು ಬದುಕು ನೂಕ ಬೇಕು ಈ ನೆಲದಲ್ಲಿ ಹಂಚಿ ಉಣ್ಣುವ ಅಭ್ಯಾಸ ನಾವು ಸುಮ್ಮನೆ ಹಾಗೆ ಮರೆತಿರುವವೆ ಹಂಚಿ ತಿಂದರೆ ತಿನ್ನುವ ಊಟ ಅಮೃತದಂತೆ ಸವಿಯಲ್ಲವೇ ಎಲ್ಲರೂ ಇಲ್ಲಿ ಸೋದರರು ನಮಗೆ ಏಕೆ ಬೇಕು ಜಗಳ ಶಾಂತಿಯಲ್ಲಿ ಸಾಗಿ ನೋಡಿ ಬದುಕು ಒಂದು ಸುಂದರ ಸರಳ *********ರಚನೆ********* ಡಾ. ಚಂದ್ರಶೇಖರ್ ಸಿ.ಹೆಚ್

ಭಾವ ಗೀತೆ -64

Image
  🌹 ಯಾರದೋ ಶಾಪ ಯಾರಿಗೋ 🌹 ಅಂಧಕಾರದಲ್ಲಿ ಮುಳುಗಿದ ಜನಕೆ ಅಸ್ಪೃಶ್ಯತೆ ಒಂದು ಶಾಪ ಬಡತನವು ಬೆನ್ನಟ್ಟಿ ಕಿತ್ತಿದೆ. ಹೊಟ್ಟೆಯ ಚರ್ಮದ ರೂಪ. //ಪಲ್ಲವಿ// ಅವಮಾನಗಳು ಬೆನ್ನಟ್ಟಿ ಬಂದಿವೆ ಆಸ್ಪೃಶ್ಯರಿಗೆ ಅಪಮಾನಗಳು ಕಾದು ಕುಂತಿವೆ ಬದುಕ ದೂಡಿವೆ ಗುಂಡಿಗೆ ಯಾವ ತಪ್ಪಿಗೆ ಅಸ್ಪೃಶ್ಯತೆಯ ಶಾಪ ಯಾರೋ ನೀಡಿದ ಶಿಕ್ಷೆ ಇದರ ರೂಪ ಹಣೆಯ ಚಚ್ಚಿ ಶಪಿಸಿದರೆ ಹೋಗುವುದೇ ಕೋಪ ಇದುವೇನು ಅಸ್ಪೃಶ್ಯ ರೂ ಮಾಡಿದ ಪಾಪ ಬದಲಾವಣೆಯ ಬೆಳಕು ಮೂಡುವುದೇ ಅಸ್ಪೃಶ್ಯರಿಗೆ ಹೊಂಗೆಯ ನೆರಳು ಬರುವುದೇ ಬದುಕಿನ ಜೀವದ ಈ ಮಾನವರಿಗೆ ಮಾಡದ ತಪ್ಪಿಗೆ ಶಿಕ್ಷೆ ಏಕೆ ಬಡತನದ ಬೇಗೆಗೆ ಸಾಯಬೇಕೇ ಕಣ್ಣನು ಒರೆಸಿ ಜಿಗಿಟುವ ತಂತ್ರಾವೇಕೆ ಜಾಗೃತಿ ನೆಪದಲ್ಲಿ ಕುತಂತ್ರವೇಕೆ ಅಸ್ಪೃಶ್ಯರಿಗೆ ಸಿಗುವುದೇ ನ್ಯಾಯ ಹುಟ್ಟಿದ ಜೀವವು ನೋಡಿದ ಗಾಯ ಹೊಟ್ಟೆಯ ಕುಳಿಗೆ ನಲುಗುವ ಪ್ರಾಯ ನೀವೇ ಹೇಳಿ ಸ್ಪೃಶ್ಯ ರೆ ಇದುವೇ ನ್ಯಾಯ ಅಸ್ಪೃಶ್ಯತೆ ಅಂದಕಾರಕೆ ಕೊನೆ ಎಲ್ಲಿ ಮೂಡುವುದೇ ಸೋದರತೆಗೆ ನೆಲೆ ಇಲ್ಲಿ ಶೋಷಿತ ವರ್ಗದ ಕಳಂಕ ತೊಲಗಿ ಬರೆಯಲಿ ಹೊಸ ಚರಿತೆ ಗುಡುಗಿ  *********ರಚನೆ*********  ಡಾ. ಚಂದ್ರಶೇಖರ್ ಸಿ.ಹೆಚ್

🌹 ಭಾವಗೀತೆ-63🌹

Image
🌹 ಮನುಷ್ಯತ್ವ ಹುಡುಕು🌹 ಮಾತಿನಲ್ಲಿ ಮನುಷ್ಯತ್ವ ಹುಡುಕಲು ಸಾಧ್ಯವೇ ನೀತಿ ಸಹಬಾಳ್ವೆ ನಡೆಸಿ ಬದುಕಲು ಸಾಧ್ಯವೇ. //ಪಲ್ಲವಿ// ಸ್ನೇಹ ಪ್ರೀತಿಯಿಂದ ನಾವು ಮನುಜರಾಗಬೇಕೆ ಮೋಸ ವಂಚನೆಯಿಂದ  ಬದುಕಿಬಾಳು ಸವೆಸಬೇಕೆ ಜಾತಿಯ ವ್ಯವಸ್ಥೆಯಲ್ಲಿ ಬದುಕು ಕಟ್ಟಿದ ಶರಣರು ನಾಡು ನುಡಿ ಮತಗಳನ್ನು ಮೀರಿ ಬೆಳೆದ ದಾಸರು ವಚನಗಳನ್ನು ಕೇಳಿದರೆ ಜೀವನವಾಯಿತು ಪಾವನ ದಾಸರ ಕೀರ್ತನೆಗಳು ಸೀಮಿತವೆ ಗಾಯನ ಸರ್ವಜ್ಞ ನುಡಿದ ತ್ರಿಪದಿಗಳು ಅಳಿಸಿ ಹೋಯಿತೇನೂ ಸಂತ ಶಿಶುನಾಳ ಶರೀಫರ ಕೋಳಿ ಕೂಗಲಿಲ್ಲವೆನು ಸಂತ ದಾಸರ ಹಾಡು ಕೇಳಲು ಎಷ್ಟು ಚೆಂದ ಹಾಡು ಕೇಳಿ ನಮಗೆ ಮನರಂಜನೆ ಆಯ್ತು ಕಂದ ಕುವೆಂಪು ಬರೆದ ಅನಿಕೇತನ ಹಾಡು ಕೇಳದವರು ಯಾರು ಬೇಂದ್ರೆ ಬರೆದ ರಾಯರು ಬಂದರು ಗುನುಗದವರು ಯಾರು ಗಣ್ಯರಹೆಸರಿನಲ್ಲಿಜಯಂತಿಗಳು ಪಡೆದವು ರಾಷ್ಟ್ರೀಯತೆ ಸಂವಿಧಾನದ ಹೆಸರಿನಲ್ಲಿ ನಾವು ಮರೆತೆವೆ ಮಾನವೀಯತೆ ನಿಜವು ನಮಗೆ ಲಭಿಸಿದೆಯೆ ಮಹಾತ್ಮಗಾಂಧಿ ಕಂಡ ಸ್ವಾತಂತ್ರ್ಯ ಅರ್ಧ ರಾತ್ರಿ ಪಡೆದಸ್ವಾತಂತ್ರ್ಯವೇ ನಮ್ಮ ಮಂತ್ರ ತಂತ್ರತೆ  ಪ್ರಜಾಪ್ರಭುತ್ವದ ಹೆಸರಲ್ಲಿ ನಮ್ಮಯ ಜನತಂತ್ರ ಭಾವನೆಗಳಿಗೆ ಬೆಲೆ ಕೊಡದೆ ಬದುಕು ಏಕೋ ಅತಂತ್ರ *********ರಚನೆ********  ಡಾ.ಚಂದ್ರಶೇಖರ್ ಸಿ.ಹೆಚ್

ಚುಟುಕು ಕವನ-24

Image
      🌹ನನ್ನ ನಲ್ಲೆ 🌹 ಓ ನನ್ನ ಮುದ್ದು ಪ್ರೀತಿ ನಲ್ಲೆ ನಾ ನಿನ್ನ ಸರಿಯಾಗಿ ಬಲ್ಲೆ ನೋಟದಿ ಹಾಗೆ ಕೊಲ್ಲತಿಯಲ್ಲೆ ಮಾತಲ್ಲಿ ಪಟಾಕಿ ಹಚ್ಚಿದೆಯಲ್ಲೆ            🌹ನನ್ನ ಮೈನಾ 🌹 ಇವಳು ನನ್ನ ತುಂಟ ಮೈನಾ ಇಡಿದೆ ನಾನು ಪ್ರೀತಿ ಕೈನಾ ಬಂದೆ ಬಿಟ್ಟಿತು ಹನಿ ಹನಿ ರೈನ್ ಕುಡಿದಂಗೆ ಹಾಯ್ತು ವೈನ್           🌹ಬಂಗಾರ🌹 ಬಂದ್ಲು ನೋಡಿ ನನ್ನ ಬಂಗಾರ ಮಾಡ್ಕೊಂಡವಳೆ ಸಿಂಗಾರ ಮೈಯ ತುಂಬಾ ಅಹಂಕಾರ ನೋಡಿ ಸುಸ್ತು ಇವಳ ಅವತಾರ *********ರಚನೆ******* ಡಾ. ಚಂದ್ರಶೇಖರ. ಸಿ.ಹೆಚ್

ಭಾವಗೀತೆ -62

Image
🌹 ಪ್ರೀತಿ ಹಂಚು ಮಾನವ🌹 ಪ್ರೀತಿ ಅಂಚು ನೀನು ಎಲೆ ಮಾನವ ಹಸಿರು ಸುಟ್ಟು ಬರಡು ಬೇಡ ಈ ಜೀವನವ ಹಕ್ಕಿಗಳ ಆಸರೆ ಹಣ್ಣುಗಳು ತಾನೆ ಅನ್ನ ತಿನ್ನಲು ನಿನಗೆ ಮಣ್ಣು ಜೀವ ತಾನೆ //ಪಲ್ಲವಿ// ಹಣವಿರುವ ತನಕ ನೆಂಟರೆ ಎಲ್ಲಾ ಹಸಿದ ಹೊಟ್ಟೆ ನೋಡಲು ಓಡುವರು ಎಲ್ಲಾ ನೀ ನಗಲು ಜೀವನವು ಎಷ್ಟು ಚಂದ ಕಣ್ಣೀರಿಡಲು ನೀ ಈ ಜಗವೇ ಕುರುಡು ಕಂದ ದುಂಬಿಯೊಂದು ಹಾರಿ ಹೂವ ಮುತ್ತಿಟ್ಟಂತೆ ಸಂಜೆ ಬಾಡುವ ಹೂವು ಅತ್ತು ಕರೆದಿತ್ತಂತೆ ಚಂದದ ಹುಡುಗಿ ನೋಡಿ ಕವನ ನಾಚಿತ್ತಂತೆ ಅಂದವಿಲ್ಲದ ಹೆಣ್ಣ ನೋಡಿ ಕವಿತೆ ಸೋತಿತ್ತಂತೆ ಹಚ್ಚಾ ಹಸಿರ ಸೊಬಗು ನೋಡಿ ನವಿಲು ಕುಣಿದಿತ್ತಂತೆ ಪ್ರಕೃತಿಯ ವಿಕೋಪ ನೋಡಿ ಜಗವು ಬಿರಿದಿತ್ತಂತೆ ಮುಪ್ಪಾದ ಅಂದ ಕಂಡು ಹಾಡು ನೋವ ನುಡಿದಿತ್ತಂತೆ ಸುಡುವ ಬದುಕ ನೋಡಿ ಸಾಹಿತ್ಯ ಸತ್ತಿತ್ತಂತೆ  **********ರಚನೆ**********  ಡಾ. ಚಂದ್ರಶೇಖರ್ ಸಿ.ಹೆಚ್

ಭಾವಗೀತೆ- 61

Image
  🌹 ಚಾಟಿಯ ಬೀಸದಿರಿ🌹  ಎತ್ತಿನ ಬಂಡಿಯ ಎಳೆಯುವ ಓರಿಗೆ ಚಾಟಿಯ ಬೀಸದಿರಿ//ಪಲ್ಲವಿ// ಓಡುವ ಎತ್ತಿಗೆ ಲಗಾಮು ಹಾಕಿ ಓಟವ ತಡೆಯದಿರಿ//ಪಲ್ಲವಿ// ಇಟ್ಟ ಹಿಟ್ಟನ್ನು ತಿಂದು ತಂಗಳು ಮುಸರೆಯ ಕುಡಿದು ನೆಟ್ಟ ಹಸಿರನ್ನು ಮೇಯ್ದು ನಿಮ್ಮ ಹೊಟ್ಟೆಯ ತುಂಬಿಸುತ್ತಿರುವ ಆಕಳು ಮರೆಯದಿರಿ ಅಂಬಾ ಎನ್ನುತನೇಗಿಲೆಗೆ ಹೆಗಲನ್ನು ಕೊಟ್ಟ ಅನ್ನದಾತನ ದಿನ  ನೆನೆಯಿರಿ //ಚಾಟಿಯ ಬೀಸದಿರಿ// ತೊಡಲು  ಬಟ್ಟೆಯ ನೀಡಿಲ್ಲ ಹಂಗಿನ ಅರಮನೆ ಬೇಕಿಲ್ಲ ಎದೆ ತಟ್ಟಿ ನಿನ್ನ ಮುಂದೆ ನಿಂತಿಲ್ಲ ಮಾತು ಬಾರದೆ ನೋವನ್ನು ನುಂಗಿ ಅಂಬ ಎನ್ನುವ ದನಕರುಗಳ ಋಣವ ನೆನಪಿಸಿರಿ //ಚಾಟಿಯ ಬೀಸದಿರಿ// ಗಂಟೆಯ ಕಟ್ಟಿ ಮೂಗುದಾರ ಹಾಕಿ ಕೊಂಬನು ಸವರಿ ಹಾರವಾ ಹಾಕಲು ನಿಮ್ಮಯ ಬಳಿ ಮಾತಾಡುವುದೇ ಕೊಂಬಲಿ ಚುಚ್ಚಿ ಇರಿಯುವುದೇ  ತನ್ನಯಪಾಡಿಗೆ ತಾನು ಇರುವ ಎತ್ತನು ಒಡೆಯದಿರಿ //ಚಾಟಿಯ ಬೀಸದಿರಿ// *********ರಚನೆ*******  ಡಾ.ಚಂದ್ರಶೇಖರ್ ಸಿ .ಹೆಚ್

ಭಾವಗೀತೆ -60

Image
  🌹ನೆಮ್ಮದಿ ಹುಡುಕಿ🌹 ನೆಮ್ಮದಿ ಹುಡುಕು ಗುರುವೇ ನೀನು ಜೀವನ ಸುಂದರ ಹಾಲು ಜೇನು ಮಳೆಯಾ ಹನಿಗೆ ಮರ ಬೀಳುವುದೇ ಕೈಲಿ ಕಲ್ಲು ಹಿಡಿದರೆ ಹಣ್ಣು ಉದುರುವದೆ. //ಪಲ್ಲವಿ// ಸಾವಿನ ಮನೆಯಲ್ಲಿ ಸವಿ ಊಟ ಮಸಣದ ಬೆಂಕಿಗೆ ಬೀಡಿ ಕಾಟ ಕಂಡವರ ಮನೆಯ ಮುರಿದು ಬೆಳೆ ಬೇಯಿಸುವ ಈ ಜನಗಳಿಗೆ ಒಬ್ಬರನ್ನೊಬ್ಬರು ಕಾಲು ಎಳೆದು ನಡೆವ ದಾರಿಗೆ ಮುಳ್ಳು ಸುರಿದು ಪರ ಮಕ್ಕಳ ಚರಂಡಿಗೆ ತಳ್ಳಿ ಕೆಸರಲು ನಗುವ ನಾಜುಕು ಮಂದಿಗೆ ಕೊಬ್ಬಿದ ಕುರಿಯು ಕಟುಕನಿಗೆ ಲಾಭ ಉಪ್ಪನ್ನು ತಿಂದವನಿಗೆ ನೀರಿನ ಲೋಭ ಮಾಡದ ಕರ್ಮ ವಿಕ್ರಂ ಬೇತಾಳ ಯಾರಿಗೆ ಹೇಳಲಿ ನೋವಿನ ತಳಮಳ ********ರಚನೆ********* ಡಾ. ಚಂದ್ರಶೇಖರ್ ಸಿ.ಹೆಚ್

ಭಾವಗೀತೆ -59

Image
  🌹ನಾವು ದೊಡ್ಡವರು🌹 ಮನದಲ್ಲಿ ಮೋಸವು ತುಂಬಿದರೆ ದೊಡ್ಡವರಾಗುವೆವೆ ಖಜಾನೆ ಲೂಟಿ ಮಾಡಿ ಇಷ್ಟನ್ನು ಚಾಚಿ ನಾವು ಸಮಾಜದಿ ದೊಡ್ಡವರಾಗುವವೆ. //ಪಲ್ಲವಿ// ಬಾಯಿಯಲ್ಲಿ ಅಭಿವೃದ್ಧಿಯ ಮಂತ್ರ ಓಟನ್ನು ಕೊಳ್ಳುವ ತಂತ್ರ ದೋಚಲು ಸಾಲದು ನಮಗೆ ಐದು ವರ್ಷ ಸಮಯ ಮುಗಿದ ಮೇಲೂ ಹಣದ ಹೆಂಡದ ಹರ್ಷ ಬಿಳಿ ಟೋಪಿ ಪಂಚೆ ಪೈಜಾಮಾಕಿ ಸ್ವಾತಂತ್ರ್ಯ ಪಡೆದಿಹೆವು ಬಿಳಿಯ ಉಡುಪನು ರಾಜಕಾರಣಿಗೆ ಹಾಕಿ ಪ್ರಜೆಗಳೇ ನಾವು ದೇಶದ ಗೆಲುವು ಏನುತಿಹೇವು  ನಡೆದು ಬಂದ ದಾರಿಯ ಮರೆತೆವು ಗದ್ದುಗೆಯಾ ಏರಿ ಜಿದ್ದಿಗೆ ಬಿದ್ದಿಹೆವು ನಾವು ಹಣದ  ಅಮಲೇರಿ ಸ್ವರ್ಗವು ಬಳಿ ಇರುವಾಗ ನರಕವು ಹಿನ್ನೇಕೆ ಧರ್ಮದ ಹೆಸರಲ್ಲಿ ಕರ್ಮವ ಮಾಡಿ ಹಸಿದಿಹ ಜನರನ್ನು ಅನಾಥ ಮಾಡಿ ಗುಡಿಯ ದೇವರ ತೋರಿ, ಸರಿದಿಹೆವು ನಾವು ಜಾರಿ ನೋಟಲಿ ಓಟನ್ನು ಕೊಂಡು ಹೆಣ್ಣು ಹೆಂಡವ ತಿಂದು ಉಂಡು ಮೂರನ್ನು ಬಿಟ್ಟವ ತಂಬಿ ಊರಿಗೆ ದೊಡ್ಡವ ನಂಬಿ ಮಾತಲಿ ಸವಿಯ ಮುತ್ತು ಜೀವವ ತೆಗೆವಾ ಕುತ್ತು ತಲೆ ಇದ್ದರೆ ತಾನೆ ತಲೆಯ ನೋವು ತಲೆಯಲ್ಲಿ ಬುದ್ಧಿ ಇದ್ದರೆ ತಾನೆ, ಜೀವನ ಗೆಲುವು ತಲೆಗೆ ಟೋಪಿ ಹಾಕಿ ನ್ಯಾಯವ ಬೀದಿಗೆ ನೂಕಿ ಇದುವೆ ನಮ್ಮಯ ನೆಚ್ಚಿನ ಜನತಂತ್ರ *********ರಚನೆ******** ಡಾ. ಚಂದ್ರಶೇಖರ್ ಸಿ.ಎಚ್

ಭಾವ ಗೀತೆ -58

Image
   🌹ಮನದ ಕತ್ತಲೆ ತೊಳೆ🌹 ಕತ್ತಲೆ ತೊಳೆಯಲು ಹಣತೆಯ ದೀಪ ಭಕ್ತಿಯ ಬೆಳಗಲು ಉರಿದಿದೆ  ದೂಪ ಬದುಕಲ್ಲಿ ಸಾವು ನೋವುಗಳ ರೂಪ ಯಾರಿಟ್ಟರು ಮನುಜನಿಗೆ ಇಂತಹ ಶಾಪ. //ಪಲ್ಲವಿ// ದೇಹದ ತುಂಬಾ ಮುಳ್ಳು ಅರಳಿದ ಗುಲಾಬಿ ಯಾರನ್ನು ಬಿಟ್ಟಿಲ್ಲ ಸಾವೆಂಬ ನಶೆ ಶರಾಭಿ ಗದ್ದಲದ ಗೂಡಲ್ಲಿ ಸಂತೆಯ ಸಂಭ್ರಮ ಜಟಕಾ ಬಂಡಿಯಲ್ಲಿ ಸಾಗುವ ಅನುಪಮ ಬಾಯಿಯಲ್ಲಿನ ಹಲ್ಲು ತಿನ್ನುವುದು ಹುಲ್ಲು ಸುರಿಸದೆ ನಾಲಿಗೆಯು ಆಹಾರ ಜೀರ್ಣಿಸುವ ಜೊಲ್ಲು ನಾಲಗೆಯ ನುಡಿಯುವ ಮಾತು ಮುತ್ತು ಯಾಮಾರಿದರೆ ವಸಡಿನ ಹಲ್ಲಿಗೆ ಬರುವುದು ಕುತ್ತು ಎಳ್ಳು ಬೆಲ್ಲ ಬೀರಿದರೆ ಸಂಕ್ರಾಂತಿಯಂತೆ ಬೇವು ಬೆಲ್ಲ ತಿಂದರೆ ಯುಗಾದಿಯಂತೆ ಯಾರು ಹಚ್ಚಿದರೇನು ಸುಡುವುದು ಬೆಂಕಿ ತನ್ನಯ ಕಿಚ್ಚು ತನ್ನೇ ಸುಡುವುದು ಚುಚ್ಚಿ *********ರಚನೆ********** ಡಾ. ಚಂದ್ರಶೇಖರ್ ಸಿ.ಹೆಚ್

ಭಾವ ಗೀತೆ -57

Image
     🌹🌹ನಮ್ಮ ಭಾರತ 🌹🌹 ಆಗಸದಿ ಹಾರಾಡುವ ಹಕ್ಕಿಯೇ ಹೇಳು ಎತ್ತ ಸಾಗಿದೆ ನಮ್ಮ ಭಾರತ ದೇಶ ಜಾತಿಗಳ ನೂರೆಂಟು, ಧರ್ಮದ ಬೆಳಕು ವಿಧವಿಧ ಬಣ್ಣದ ಬದುಕು ವೇಷ. //ಪಲ್ಲವಿ// ಹೇಳುವರು ಎಲ್ಲಾ ನಾವು ಜಾತ್ಯತೀತ ಎಂದು ಮಾಡುವರು ಇಲ್ಲಿ ಜಾತಿಗಳ ಬೇರಿನ ತವರು  ಜಾತಿಗಳ  ಹೆಸರಲ್ಲಿ ಜಾಹೀರಾತು ನೀಡಿ ವೈಶಮ್ಯದ ಮತಗಳ ಬೇಳೆ ಬೆಂದಿದೆ ನೋಡಿ ನೋಟಿನಿಂದ ಜನರ ಓಟನ್ನು ಕೊಂಡು ಗದ್ದುಗೆ ಏರಿರುವರು ತಿಂದು ಉಂಡು ಬಾಯಿಯ ತುಂಬಾ ಸಂವಿಧಾನದ ಮಾತು ಪ್ರಜಾಪ್ರಭುತ್ವವು ಒಡೆದ ಮಡಿಕೆಯಂತೆ ತೂತು ಬಡವ ಬಲ್ಲಿದರೆಂಬ ಅಸ್ಪೃಶ್ಯತೆ ಇಲ್ಲಿ ಭಾರತವು ಬೆಳಗುವುದೇ ಈ ಬೆಳಕಿನಲ್ಲಿ ನ್ಯಾಯ ಸ್ವತಂತ್ರವೂ ಸಮಾನತೆಗಳು ಸತ್ತಿವೆ ಅದಕ್ಕೆ ಇರಬೇಕು ನಮ್ಮ ದೇಶ ಭಾರತ ಎನಿಸಿದೆ ಮೇಲು-ಕೀಳು ಎಂಬ ಭಾವ ಬಿತ್ತಿರುವಾಗ ಎಲ್ಲಿ ಕಾಣಬೇಕು ನಾವು, ಸಮಾನತೆಯ ಮಂತ್ರ ಇದುವೇ ನಾವು ಬ್ರಿಟಿಷರಿಂದ ಪಡೆದ ಸ್ವಾತಂತ್ರ್ಯ ಎತ್ತ ಸಾಗುತ್ತಿದೆ ನಮ್ಮ ಭಾರತದ ಜನತಂತ್ರ ***********ರಚನೆ******** ಡಾ.ಚಂದ್ರಶೇಖರ್ ಸಿ.ಹೆಚ್