ಭಾವಗೀತೆ- 61
🌹 ಚಾಟಿಯ ಬೀಸದಿರಿ🌹
ಎತ್ತಿನ ಬಂಡಿಯ ಎಳೆಯುವ ಓರಿಗೆ ಚಾಟಿಯ ಬೀಸದಿರಿ//ಪಲ್ಲವಿ//
ಓಡುವ ಎತ್ತಿಗೆ ಲಗಾಮು ಹಾಕಿ ಓಟವ ತಡೆಯದಿರಿ//ಪಲ್ಲವಿ//
ಇಟ್ಟ ಹಿಟ್ಟನ್ನು ತಿಂದು
ತಂಗಳು ಮುಸರೆಯ ಕುಡಿದು
ನೆಟ್ಟ ಹಸಿರನ್ನು ಮೇಯ್ದು
ನಿಮ್ಮ ಹೊಟ್ಟೆಯ ತುಂಬಿಸುತ್ತಿರುವ
ಆಕಳು ಮರೆಯದಿರಿ
ಅಂಬಾ ಎನ್ನುತನೇಗಿಲೆಗೆ ಹೆಗಲನ್ನು ಕೊಟ್ಟ ಅನ್ನದಾತನ ದಿನ ನೆನೆಯಿರಿ
//ಚಾಟಿಯ ಬೀಸದಿರಿ//
ತೊಡಲು ಬಟ್ಟೆಯ ನೀಡಿಲ್ಲ
ಹಂಗಿನ ಅರಮನೆ ಬೇಕಿಲ್ಲ
ಎದೆ ತಟ್ಟಿ ನಿನ್ನ ಮುಂದೆ ನಿಂತಿಲ್ಲ
ಮಾತು ಬಾರದೆ ನೋವನ್ನು ನುಂಗಿ
ಅಂಬ ಎನ್ನುವ ದನಕರುಗಳ
ಋಣವ ನೆನಪಿಸಿರಿ
//ಚಾಟಿಯ ಬೀಸದಿರಿ//
ಗಂಟೆಯ ಕಟ್ಟಿ ಮೂಗುದಾರ ಹಾಕಿ
ಕೊಂಬನು ಸವರಿ ಹಾರವಾ ಹಾಕಲು
ನಿಮ್ಮಯ ಬಳಿ ಮಾತಾಡುವುದೇ
ಕೊಂಬಲಿ ಚುಚ್ಚಿ ಇರಿಯುವುದೇ
ತನ್ನಯಪಾಡಿಗೆ ತಾನು ಇರುವ ಎತ್ತನು ಒಡೆಯದಿರಿ
//ಚಾಟಿಯ ಬೀಸದಿರಿ//
*********ರಚನೆ*******
ಡಾ.ಚಂದ್ರಶೇಖರ್ ಸಿ .ಹೆಚ್
Comments
Post a Comment