ಭಾವಗೀತೆ-68

 



🌹 ಪ್ರಕೃತಿ ಮಾತೆ🌹


ಪ್ರಕೃತಿಯ ಮಾತೆ ಒಮ್ಮೆ ನಕ್ಕರೆ

ಹಸಿರು ತುಂಬಿ ಪೈರಿನ ಸಕ್ಕರೆ

ಪ್ರಕೃತಿ ಮಾತೆ ಒಮ್ಮೆ ಮುನಿದರೆ

ಸಕಲ ಜೀವಿಗಳ ಸುತ್ತುವ ಬಂಧು ನೆರೆ // ಪಲ್ಲವಿ//


ಇರಲಿ ತಾಯಿ ಸ್ವಲ್ಪ ಕೊಂಚ ಕರುಣೆ

ನಾವು ನಿನ್ನ ಮಕ್ಕಳು ತಾಯಿ

ನೀನು ತಾನೆ ನಮ್ಮ ಸಾಕಿ ಸಲಹುವಳು

ನೋವಾಗದಂತೆ ನಮ್ಮ ಕಾಯುವವಳು


ನರರು ಮೆರೆವರು ನಿನ್ನ ಮೇಲೆ ಕ್ರೌರ್ಯ

ನೀನು ಮುನೀದರೆ ತೋರುವೇ ಸುನಾಮಿ ಶೌರ್ಯ

ಆಸೆಪಟ್ಟು ನಾವು ಹಿಡಿದೆವು ಕೊಡಲಿ

ದುರಾಸೆ ನಮ್ಮ ಕಿತ್ತು ತಿನ್ನದಿರಲಿ


ಪ್ರಕೃತಿಯ ಮಾತೆ ತುಂಬಿಸುವಳು ಹೊಟ್ಟೆ

ಹೆಚ್ಚು ಎಗರಿದರೆ ಕಾಯಂ ತಾನೆ ತಣ್ಣೀರ ಬಟ್ಟೆ

ನಿನ್ನ ಮುಂದೆ ಎಂದು ಮರುಗಬೇಕು ನಾವು

ಇಲ್ಲದಿದ್ರೆ ನಮಗೆ ನಿಜವು ತಾನೆ ಸಾವು


ಬೆಟ್ಟಗುಡ್ಡ ಕಡಿದು ಫೈರು ಬೆಳೆದಿಹೇವು

ನೆರೆಬಂದು ಬೆಳೆದ ಪೈರಾ ಕಳೆದಿಹೇವು

ಪ್ರಕೃತಿಯೇ ನಮ್ಮ ಪ್ರೀತಿಯ ದೈವ

ಪ್ರಕೃತಿಯೇ ನಮ್ಮ ಭಾವದಲ್ಲಿ ಜೀವ


********ರಚನೆ ********

ಡಾ.ಚಂದ್ರಶೇಖರ್ ಸಿ ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20