🌹 ಭಾವಗೀತೆ-63🌹
🌹 ಮನುಷ್ಯತ್ವ ಹುಡುಕು🌹
ಮಾತಿನಲ್ಲಿ ಮನುಷ್ಯತ್ವ
ಹುಡುಕಲು ಸಾಧ್ಯವೇ
ನೀತಿ ಸಹಬಾಳ್ವೆ ನಡೆಸಿ
ಬದುಕಲು ಸಾಧ್ಯವೇ. //ಪಲ್ಲವಿ//
ಸ್ನೇಹ ಪ್ರೀತಿಯಿಂದ ನಾವು
ಮನುಜರಾಗಬೇಕೆ
ಮೋಸ ವಂಚನೆಯಿಂದ
ಬದುಕಿಬಾಳು ಸವೆಸಬೇಕೆ
ಜಾತಿಯ ವ್ಯವಸ್ಥೆಯಲ್ಲಿ
ಬದುಕು ಕಟ್ಟಿದ ಶರಣರು
ನಾಡು ನುಡಿ ಮತಗಳನ್ನು
ಮೀರಿ ಬೆಳೆದ ದಾಸರು
ವಚನಗಳನ್ನು ಕೇಳಿದರೆ
ಜೀವನವಾಯಿತು ಪಾವನ
ದಾಸರ ಕೀರ್ತನೆಗಳು
ಸೀಮಿತವೆ ಗಾಯನ
ಸರ್ವಜ್ಞ ನುಡಿದ ತ್ರಿಪದಿಗಳು
ಅಳಿಸಿ ಹೋಯಿತೇನೂ
ಸಂತ ಶಿಶುನಾಳ ಶರೀಫರ
ಕೋಳಿ ಕೂಗಲಿಲ್ಲವೆನು
ಸಂತ ದಾಸರ ಹಾಡು
ಕೇಳಲು ಎಷ್ಟು ಚೆಂದ
ಹಾಡು ಕೇಳಿ ನಮಗೆ
ಮನರಂಜನೆ ಆಯ್ತು ಕಂದ
ಕುವೆಂಪು ಬರೆದ ಅನಿಕೇತನ
ಹಾಡು ಕೇಳದವರು ಯಾರು
ಬೇಂದ್ರೆ ಬರೆದ ರಾಯರು
ಬಂದರು ಗುನುಗದವರು ಯಾರು
ಗಣ್ಯರಹೆಸರಿನಲ್ಲಿಜಯಂತಿಗಳು
ಪಡೆದವು ರಾಷ್ಟ್ರೀಯತೆ
ಸಂವಿಧಾನದ ಹೆಸರಿನಲ್ಲಿ
ನಾವು ಮರೆತೆವೆ ಮಾನವೀಯತೆ
ನಿಜವು ನಮಗೆ ಲಭಿಸಿದೆಯೆ
ಮಹಾತ್ಮಗಾಂಧಿ ಕಂಡ ಸ್ವಾತಂತ್ರ್ಯ
ಅರ್ಧ ರಾತ್ರಿ ಪಡೆದಸ್ವಾತಂತ್ರ್ಯವೇ
ನಮ್ಮ ಮಂತ್ರ ತಂತ್ರತೆ
ಪ್ರಜಾಪ್ರಭುತ್ವದ ಹೆಸರಲ್ಲಿ
ನಮ್ಮಯ ಜನತಂತ್ರ
ಭಾವನೆಗಳಿಗೆ ಬೆಲೆ ಕೊಡದೆ
ಬದುಕು ಏಕೋ ಅತಂತ್ರ
*********ರಚನೆ********
ಡಾ.ಚಂದ್ರಶೇಖರ್ ಸಿ.ಹೆಚ್
Comments
Post a Comment