ಭಾವಗೀತೆ-66

 


🌹 ನರಭಕ್ಷಕ🌹


ಮಾನವರೆಲ್ಲ ದಾನವರಾದರೆ

ರಾಕ್ಷಸರ ಎಲ್ಲ ನರಭಕ್ಷಕರಾದರೆ

ಕೋರೆ ಹಲ್ಲು ಬಂದಂತೆ

ಪ್ರಾಣಿಗೆ ಕೊಡು ಬಂದಂತೆ

      ನಂಬಿದರೆ ನಂಬಿ

      ಬಿಟ್ಟರೆ ಬಿಟ್ಟುಬಿಡಿ //ಪಲ್ಲವಿ//


ದೆವ್ವದಂತೆ ನಿಶಾಚರಿಯಾಗಿ

ದೈವದಂತೆ ದರ್ಶನವಾಗಿ

ದೆವ್ವವು ಮನುಜನ ಬಿಟ್ಟಂತೆ

ದೈವವು ನಮಗೆ ಅರಸಿದಂತೆ


       ನಂಬಿದರೆ ನಂಬಿ

      ಬಿಟ್ಟರೆ ಬಿಟ್ಟುಬಿಡಿ //ಪ//


ಉರಿವ ಬೆಂಕಿಯ ರೂಪ ವಿಕಾರ

ಹರಿವ ನದಿಯ ರೂಪ ಪ್ರಹಾರ

ಬೆಂಕಿಯಲ್ಲಿ ಎಲ್ಲಾ ಬೆಯಲೇಬೇಕು

ನದಿಯ ನೀರನ್ನು ಕುಡಿಯಲೇ ಬೇಕು

        ನಂಬಿದರೆ ನಂಬಿ

        ಬಿಟ್ಟರೆ ಬಿಟ್ಟುಬಿಡಿ //ಪ//


ಕಥೆಯು ಸಿನಿಮಾ ಆದಂತೆ

ಸಿನಿಮಾ ಜನಮನ ಗೆದ್ದಂತೆ

ಏನಿದು ಸುಂದರ ಕಥೆ

ಕೇಳಲು ನೋವಿನ ವ್ಯಥೆ 

        ಹೃದಯವ ಕಲಕಿತೆ?

        ಮನವು ಮಿಡಿಯಿತೆ?

                       ನಂಬಿದರೆ ನಂಬಿ

                       ಬಿಟ್ಟರೆ ಬಿಟ್ಟುಬಿಡಿ //ಪಲ್ಲವಿ//


**********ರಚನೆ*********

 ಡಾ. ಚಂದ್ರಶೇಖರ್ ಸಿ ಹೆಚ್

Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ