ಭಾವಗೀತೆ -67




🌹 ದೇವರ ಗುಡಿ🌹


ದೇವರು ಇಲ್ಲದ ಮನೆ ಏನ್ ಚೆಂದ

ಪುಸ್ತಕವಿಲ್ಲದ ಗ್ರಂಥಾಲಯವು ಏನ್ ಚಂದ

ದೇವರು ಕಾಪಾಡುವನು ಈ ಮಾನವರನ್ನು

ಇವರ ಕರ್ಮವನ್ನು ನೋಡಿ ರೇಗಾಡುವನು //ಪಲ್ಲವಿ//


ಊರಿಗೆ ಒಬ್ಬ ದೇವರು ಗುಡಿಯಲ್ಲಿ

ಜನಗಳು ನೀತಿ ಮರೆತರು ನುಡಿಯಲ್ಲಿ

ಮೋಸ ದ್ರೋಹ ಮಾಡಿದ ಜನರು

ಗುಡಿಯ ದೇವರ ಬೇಡುತಲಿಹರು


ಕಲ್ಲು ಎಡವಿದರೆ ದೇವರು ಇಲ್ಲಿ

ಅರಿಶಿನ ಕುಂಕುಮ ಭಕ್ತಿಯ ಚೆಲ್ಲಿ

ಆದಿ ಬೀದಿಯಲ್ಲಿ ದೇವರ ವಾಸ

ಮನೆಮನೆಯಲ್ಲೂ ದೇವರ ಪ್ರಾಸ


ದೇವರ ಸಂಖ್ಯೆ ಜಾಸ್ತಿ ಆಯಿತು

ಮನುಷ್ಯರಲ್ಲಿ ಮನುಷ್ಯತ್ವ ಕಡಿಮೆಯಾಯಿತು

ಮೈ ಮೇಲೆ ಬಂದನು ದೇವರು

ಮಾಟ ಮಂತ್ರಗಳನ್ನು ಸುಟ್ಟುಬಿಟ್ಟ ದೇವರು


ಮನುಷ್ಯನ ನೋಡಿ ಸೋತ ದೇವರು

ಈ ಯುಗದಲ್ಲಿ ಮನುಷ್ಯರೇ ದೇವರು

ನ್ಯಾಯ ನೀತಿಗೆ ಬೆಲೆ ಇಲ್ಲಿ ಇಲ್ಲ

ದೇವರ ಭಜನೆ ಇನ್ನು ತಪ್ಪಿಲ್ಲ



*********ರಚನೆ********** 

ಡಾ. ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35