ಭಾವಗೀತೆ -65🌹
🌹 ತಿನ್ನುವ ಅನ್ನ🌹
ತಿನ್ನುವ ಅನ್ನವ ಬೀದಿಗೆ ಎಸೆದರೆ
ಹಸಿದ ಹೊಟ್ಟೆಗೆ ಬರವಿಲ್ಲಿ
ಹಸಿದ ಹೊಟ್ಟೆಯ ಕಂಡರೆ
ಅನ್ಯರಂತೆ ನೂಕುವರು ಎಲ್ಲಾ ಇಲ್ಲಿ //ಪಲ್ಲವಿ//
ಮಹಡಿಯ ಮೇಲೆ ಮಹಡಿಯ ಕಟ್ಟಿ
ಉಳುವರು ನಿಮ್ಮ ಆರು ಮುರಡಿ
ಕಾರು ಬೈಕು ಇದ್ದರೆ ಏನು
ಕಾಲಲ್ಲಿ ನಡೆದರೆ ದೇಹ ಗಟ್ಟಿ ತಡಿ
ಹತ್ತಾರು ಎಕರೆ ಭೂಮಿ ಇದ್ದರೆ
ನಿನ್ನ ಕರೆವರು ಜಮೀನ್ದಾರ
ಪರರ ಜಮೀನಲ್ಲಿ ಕೆಲಸ ಮಾಡಿದರೆ
ನೀನು ಒಬ್ಬ ಕಾರ್ಮಿಕ ನೌಕರ
ಮನುಷ್ಯ ರೂಪದಿ ಮುಖವಾಡ ಪಡೆದು
ಮಾಡುತ್ತಿರುವುದು ಅನ್ಯಾಯ ಇಲ್ಲಿ
ನ್ಯಾಯವೊ ಮಾಡು ಅನ್ಯಾಯವ ಮಾಡು
ಬದುಕು ನೂಕ ಬೇಕು ಈ ನೆಲದಲ್ಲಿ
ಹಂಚಿ ಉಣ್ಣುವ ಅಭ್ಯಾಸ ನಾವು
ಸುಮ್ಮನೆ ಹಾಗೆ ಮರೆತಿರುವವೆ
ಹಂಚಿ ತಿಂದರೆ ತಿನ್ನುವ ಊಟ
ಅಮೃತದಂತೆ ಸವಿಯಲ್ಲವೇ
ಎಲ್ಲರೂ ಇಲ್ಲಿ ಸೋದರರು
ನಮಗೆ ಏಕೆ ಬೇಕು ಜಗಳ
ಶಾಂತಿಯಲ್ಲಿ ಸಾಗಿ ನೋಡಿ
ಬದುಕು ಒಂದು ಸುಂದರ ಸರಳ
*********ರಚನೆ*********
ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment