ಭಾವಗೀತೆ -59
🌹ನಾವು ದೊಡ್ಡವರು🌹
ಮನದಲ್ಲಿ ಮೋಸವು ತುಂಬಿದರೆ ದೊಡ್ಡವರಾಗುವೆವೆ
ಖಜಾನೆ ಲೂಟಿ ಮಾಡಿ ಇಷ್ಟನ್ನು ಚಾಚಿ
ನಾವು ಸಮಾಜದಿ ದೊಡ್ಡವರಾಗುವವೆ. //ಪಲ್ಲವಿ//
ಬಾಯಿಯಲ್ಲಿ ಅಭಿವೃದ್ಧಿಯ ಮಂತ್ರ ಓಟನ್ನು ಕೊಳ್ಳುವ ತಂತ್ರ
ದೋಚಲು ಸಾಲದು ನಮಗೆ ಐದು ವರ್ಷ
ಸಮಯ ಮುಗಿದ ಮೇಲೂ ಹಣದ ಹೆಂಡದ ಹರ್ಷ
ಬಿಳಿ ಟೋಪಿ ಪಂಚೆ ಪೈಜಾಮಾಕಿ ಸ್ವಾತಂತ್ರ್ಯ ಪಡೆದಿಹೆವು
ಬಿಳಿಯ ಉಡುಪನು ರಾಜಕಾರಣಿಗೆ ಹಾಕಿ
ಪ್ರಜೆಗಳೇ ನಾವು ದೇಶದ ಗೆಲುವು ಏನುತಿಹೇವು
ನಡೆದು ಬಂದ ದಾರಿಯ ಮರೆತೆವು ಗದ್ದುಗೆಯಾ ಏರಿ
ಜಿದ್ದಿಗೆ ಬಿದ್ದಿಹೆವು ನಾವು ಹಣದ ಅಮಲೇರಿ
ಸ್ವರ್ಗವು ಬಳಿ ಇರುವಾಗ ನರಕವು ಹಿನ್ನೇಕೆ
ಧರ್ಮದ ಹೆಸರಲ್ಲಿ ಕರ್ಮವ ಮಾಡಿ
ಹಸಿದಿಹ ಜನರನ್ನು ಅನಾಥ ಮಾಡಿ
ಗುಡಿಯ ದೇವರ ತೋರಿ, ಸರಿದಿಹೆವು ನಾವು ಜಾರಿ
ನೋಟಲಿ ಓಟನ್ನು ಕೊಂಡು ಹೆಣ್ಣು ಹೆಂಡವ ತಿಂದು ಉಂಡು
ಮೂರನ್ನು ಬಿಟ್ಟವ ತಂಬಿ ಊರಿಗೆ ದೊಡ್ಡವ ನಂಬಿ
ಮಾತಲಿ ಸವಿಯ ಮುತ್ತು ಜೀವವ ತೆಗೆವಾ ಕುತ್ತು
ತಲೆ ಇದ್ದರೆ ತಾನೆ ತಲೆಯ ನೋವು
ತಲೆಯಲ್ಲಿ ಬುದ್ಧಿ ಇದ್ದರೆ ತಾನೆ, ಜೀವನ ಗೆಲುವು
ತಲೆಗೆ ಟೋಪಿ ಹಾಕಿ ನ್ಯಾಯವ ಬೀದಿಗೆ ನೂಕಿ
ಇದುವೆ ನಮ್ಮಯ ನೆಚ್ಚಿನ ಜನತಂತ್ರ
*********ರಚನೆ********
ಡಾ. ಚಂದ್ರಶೇಖರ್ ಸಿ.ಎಚ್
Comments
Post a Comment