ಭಾವಗೀತೆ-70

 



🌹 ಮುಟ್ಟ ಬೇಡವೋ ಮನುಜ🌹


ಮುಟ್ಟಬಿಡುವೊ ಮನುಜ ನೀ ನನ್ನ

ತಟ್ಟಿದರೆ ಸಿಗುವುದು ನಿನಗೆ ಚಿನ್ನ

ಮುಟ್ಟಿ ತಟ್ಟುವ ಆಟ ಬಲು ಚೆನ್ನ

ಉಸಿರುಗಟ್ಟಿತು ನನ್ನ ಜೀವ ರನ್ನ. //ಪಲ್ಲವಿ//


ಇಟ್ಟಿಗಾಗಿ ಬೆವರು ಸುರಿಸುವವರು

ಬುದ್ಧಿ ಬಂದ ಮೇಲೆ ಮೆಟ್ಟಿ ಕುಂತವರು

ಬುದ್ಧಿಯಿಂದ ಇಟ್ಟು ಉಂಡು

ಹಸಿದ ಹೊಟ್ಟೆಯ ಒದ್ದು ನಿಂತವರು


ಮಾತಲ್ಲಿ ಮನೆಯ ಕಟ್ಟುವವರು

ಅಕ್ಷರದಲ್ಲಿ ಆಕಾಶ ಆಳುವವರು

ಮಾತಿನ ಅಕ್ಷರದಿಂದ ಹಕ್ಕು ಕಸಿದವರು

ಖಾಲಿ ತಟ್ಟೆಯ ನೋಡಿ ಬಿಕ್ಕಿ ಅತ್ತವರು


ಮೇಲು ಕೀಳು ಎಂಬ ಭಾವ ಜಗದಲ್ಲಿ

ಬಡವ ಬಲ್ಲಿದನೆಂಬ ಒಡಕು ಮನದಲ್ಲಿ

ಈ ಸುಳ್ಳು ಭಾವದ ಬದುಕ ಸಂತೆಯಲ್ಲಿ

ಸತ್ಯಕ್ಕೆ ನಿಜಕ್ಕೂ ಸಾವು ಕೊನೆಯಿಲ್ಲಿ


ಇದ್ದವರು ದಾನ ಧರ್ಮದ ಗತ್ತು

ಹಸಿದವರ ಹೊಟ್ಟೆಗೆ ತುತ್ತಿನ ಕುತ್ತು

ಆದರೂ ನಮ್ಮ ದೇಶ ಮಹಾನ್

ಅಹಂಕಾರದ ಮದವೇರಿದ ಜನಕೆ ಸಮಾನ್


*********ರಚನೆ********* 

ಡಾ. ಚಂದ್ರಶೇಖರ್ ಸಿ ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35