ಭಾವ ಗೀತೆ -58





   🌹ಮನದ ಕತ್ತಲೆ ತೊಳೆ🌹


ಕತ್ತಲೆ ತೊಳೆಯಲು ಹಣತೆಯ ದೀಪ

ಭಕ್ತಿಯ ಬೆಳಗಲು ಉರಿದಿದೆ  ದೂಪ

ಬದುಕಲ್ಲಿ ಸಾವು ನೋವುಗಳ ರೂಪ

ಯಾರಿಟ್ಟರು ಮನುಜನಿಗೆ ಇಂತಹ ಶಾಪ. //ಪಲ್ಲವಿ//


ದೇಹದ ತುಂಬಾ ಮುಳ್ಳು ಅರಳಿದ ಗುಲಾಬಿ

ಯಾರನ್ನು ಬಿಟ್ಟಿಲ್ಲ ಸಾವೆಂಬ ನಶೆ ಶರಾಭಿ

ಗದ್ದಲದ ಗೂಡಲ್ಲಿ ಸಂತೆಯ ಸಂಭ್ರಮ

ಜಟಕಾ ಬಂಡಿಯಲ್ಲಿ ಸಾಗುವ ಅನುಪಮ


ಬಾಯಿಯಲ್ಲಿನ ಹಲ್ಲು ತಿನ್ನುವುದು ಹುಲ್ಲು

ಸುರಿಸದೆ ನಾಲಿಗೆಯು ಆಹಾರ ಜೀರ್ಣಿಸುವ ಜೊಲ್ಲು

ನಾಲಗೆಯ ನುಡಿಯುವ ಮಾತು ಮುತ್ತು

ಯಾಮಾರಿದರೆ ವಸಡಿನ ಹಲ್ಲಿಗೆ ಬರುವುದು ಕುತ್ತು


ಎಳ್ಳು ಬೆಲ್ಲ ಬೀರಿದರೆ ಸಂಕ್ರಾಂತಿಯಂತೆ

ಬೇವು ಬೆಲ್ಲ ತಿಂದರೆ ಯುಗಾದಿಯಂತೆ

ಯಾರು ಹಚ್ಚಿದರೇನು ಸುಡುವುದು ಬೆಂಕಿ

ತನ್ನಯ ಕಿಚ್ಚು ತನ್ನೇ ಸುಡುವುದು ಚುಚ್ಚಿ



*********ರಚನೆ**********

ಡಾ. ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35