ಭಾವಗೀತೆ -60
🌹ನೆಮ್ಮದಿ ಹುಡುಕಿ🌹
ನೆಮ್ಮದಿ ಹುಡುಕು ಗುರುವೇ ನೀನು
ಜೀವನ ಸುಂದರ ಹಾಲು ಜೇನು
ಮಳೆಯಾ ಹನಿಗೆ ಮರ ಬೀಳುವುದೇ
ಕೈಲಿ ಕಲ್ಲು ಹಿಡಿದರೆ ಹಣ್ಣು ಉದುರುವದೆ. //ಪಲ್ಲವಿ//
ಸಾವಿನ ಮನೆಯಲ್ಲಿ ಸವಿ ಊಟ
ಮಸಣದ ಬೆಂಕಿಗೆ ಬೀಡಿ ಕಾಟ
ಕಂಡವರ ಮನೆಯ ಮುರಿದು
ಬೆಳೆ ಬೇಯಿಸುವ ಈ ಜನಗಳಿಗೆ
ಒಬ್ಬರನ್ನೊಬ್ಬರು ಕಾಲು ಎಳೆದು
ನಡೆವ ದಾರಿಗೆ ಮುಳ್ಳು ಸುರಿದು
ಪರ ಮಕ್ಕಳ ಚರಂಡಿಗೆ ತಳ್ಳಿ
ಕೆಸರಲು ನಗುವ ನಾಜುಕು ಮಂದಿಗೆ
ಕೊಬ್ಬಿದ ಕುರಿಯು ಕಟುಕನಿಗೆ ಲಾಭ
ಉಪ್ಪನ್ನು ತಿಂದವನಿಗೆ ನೀರಿನ ಲೋಭ
ಮಾಡದ ಕರ್ಮ ವಿಕ್ರಂ ಬೇತಾಳ
ಯಾರಿಗೆ ಹೇಳಲಿ ನೋವಿನ ತಳಮಳ
********ರಚನೆ*********
ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment