ಒಲವೇ ನೀನು
ನನ್ನ ಒಲವೇ ನೀನು
ನನ್ನ ಚೆಲುವೇ ನೀನು
ನನಗಾಗಿ ಬಂದ
ನವ ಗೆಲುವೇ ನೀನು
ಮೌನದಿ ಮೂಕನ ಮಾಡಿ
ನನ್ನಾ ಕಾಡಿದೆ
ಪ್ರೀತಿಯ ಕಣ್ಗಳಲ್ಲಿ
ಸನ್ನೆ ನೀಡಿದೆ
ಹೃದಯದ ಅರಮನೆಗೆ
ದಾರಿ ತೋರಿದೆ
ಬದುಕಿನ ಪಯಣದಲಿ
ನಿನ್ನ ನೆನಪು ಕಾಡಿದೆ
ಯಾವ ಊರ ರಾಣಿಯೋ ನೀನು
ನನ್ನಾ ಕಾಡುವ ಬೇಳೋಕೋ ನೀನು
ರಾತ್ರಿಯಲಿ ಮೂಡಿದ ನಕ್ಷತ್ರವೇ ನೀನು
ಗುಡುಗದೆ ಮಿಂಚುವ ಹೊಳಪು ನೀನು
ತಣ್ಣನೆ ಸುರಿದ ಮಳೆ ಹನಿಯೋ ನೀನು
ದೇವರೂ ಕೊಟ್ಟ ಭಾಗ್ಯವೂ ನೀನು
ನೋವಲು ಸಂತೈಸಿದ ಕರುಣೆ
ಕತ್ತಲಲಿ ಬೆಳಕಾದ ತರುಣೆ
ಮುಂಗಾರನಲ್ಲಿ ಕಂಡ ಹಸಿರು
ನನ್ನೆದೆಯಲಿ ನುಸಿಳಿದ ಉಸಿರು
*********ರಚನೆ*********
ಡಾ.ಚಂದ್ರಶೇಖರ್ ಸಿ ಹೆಚ್
Comments
Post a Comment