ಭಾವಗೀತೆ -62
🌹 ಪ್ರೀತಿ ಹಂಚು ಮಾನವ🌹
ಪ್ರೀತಿ ಅಂಚು ನೀನು ಎಲೆ ಮಾನವ
ಹಸಿರು ಸುಟ್ಟು ಬರಡು ಬೇಡ ಈ ಜೀವನವ
ಹಕ್ಕಿಗಳ ಆಸರೆ ಹಣ್ಣುಗಳು ತಾನೆ
ಅನ್ನ ತಿನ್ನಲು ನಿನಗೆ ಮಣ್ಣು ಜೀವ ತಾನೆ //ಪಲ್ಲವಿ//
ಹಣವಿರುವ ತನಕ ನೆಂಟರೆ ಎಲ್ಲಾ
ಹಸಿದ ಹೊಟ್ಟೆ ನೋಡಲು ಓಡುವರು ಎಲ್ಲಾ
ನೀ ನಗಲು ಜೀವನವು ಎಷ್ಟು ಚಂದ
ಕಣ್ಣೀರಿಡಲು ನೀ ಈ ಜಗವೇ ಕುರುಡು ಕಂದ
ದುಂಬಿಯೊಂದು ಹಾರಿ ಹೂವ ಮುತ್ತಿಟ್ಟಂತೆ
ಸಂಜೆ ಬಾಡುವ ಹೂವು ಅತ್ತು ಕರೆದಿತ್ತಂತೆ
ಚಂದದ ಹುಡುಗಿ ನೋಡಿ ಕವನ ನಾಚಿತ್ತಂತೆ
ಅಂದವಿಲ್ಲದ ಹೆಣ್ಣ ನೋಡಿ ಕವಿತೆ ಸೋತಿತ್ತಂತೆ
ಹಚ್ಚಾ ಹಸಿರ ಸೊಬಗು ನೋಡಿ ನವಿಲು ಕುಣಿದಿತ್ತಂತೆ
ಪ್ರಕೃತಿಯ ವಿಕೋಪ ನೋಡಿ ಜಗವು ಬಿರಿದಿತ್ತಂತೆ
ಮುಪ್ಪಾದ ಅಂದ ಕಂಡು ಹಾಡು ನೋವ ನುಡಿದಿತ್ತಂತೆ
ಸುಡುವ ಬದುಕ ನೋಡಿ ಸಾಹಿತ್ಯ ಸತ್ತಿತ್ತಂತೆ
**********ರಚನೆ**********
ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment