🌹ಭಾವ ಗೀತೆ -71🌹




🌹 ಅರಳಿತೆ ಯೌವ್ವನ 🌹


ಎಲ್ಲಿ ಹುಡುಕಲಿ ನಾ ಯೌವ್ವನ 

ಹದಿಹರೇಯದಿ ದುಃಖ ದುಮ್ಮಾನ

ಆಸೆಗಳ ಮಸಣದಿ ಬೆಂದು

ಬರಡಾಗಿದೆ ಬದುಕು ನೊಂದು. //ಪಲ್ಲವಿ//


ಕನಸುಗಳ ಸಂತೆಯಲ್ಲಿ ಸವಿ ನಿದ್ದೆ

ನೆನಪುಗಳ ಚಿಂತೆಯಲ್ಲಿ ನಾ ಬಿದ್ದೆ

ವಯಸ್ಸಿನ ತಳಮಳದಿ ಮೈ ಒದ್ದೆ

ಹುಚ್ಚು ಮನಸ್ಸಿನ ಸಿಹಿ ಮುದ್ದೆ


ಬೆಳಕಿನ ಕಿರಣದಿ ದೇಹ ಹೊಳಪು

ಮಣ್ಣಿನ ಮಡಿಲಲ್ಲಿ ಮಾಗದ ಉರುಪು

ಪುಸ್ತಕದ ಜ್ಞಾನ ಏಕೋ ನುಣುಪು

ದೇವರೇ ಬರೆದಿಟ್ಟ ಶಿಕ್ಷೆಯ ಮುಡಿಪು


ಮಾಡುವ ಕೆಲಸದಿ ಮನಸ್ಸಿಲ್ಲ

ಶಾಲೆಯಲ್ಲಿ ಗೆಳತಿಯದೆ ಕನಸೆಲ್ಲ

ಮನೆಯಲ್ಲಿ ಅಪ್ಪ ಅಮ್ಮ ಬೇಕಿಲ್ಲ

ಯೌವ್ವನದ ಬಯಕೆಗೆ ಕೊನೆಯಿಲ್ಲ


ಕಾಡಿದೆ ಇವರ ನೋಡಿ ದೆವ್ವಕ್ಕೂ ಭಯ

ದೇವರು ಸೋತು ಹೋದ ನೋಡಿ ಇವರ ಲಯ

ಚಂದ್ರನು ನಾಚುವನು ನೋಡಿ ಇವರ ನಯ

ಮಾತಿನಲ್ಲಿ ವಯಸ್ಸು ಕಾಣದಂತೆ ಮಾಯ


********ರಚನೆ********** 

ಡಾ. ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35