ಭಾವ ಗೀತೆ -57
🌹🌹ನಮ್ಮ ಭಾರತ 🌹🌹
ಆಗಸದಿ ಹಾರಾಡುವ ಹಕ್ಕಿಯೇ ಹೇಳು
ಎತ್ತ ಸಾಗಿದೆ ನಮ್ಮ ಭಾರತ ದೇಶ
ಜಾತಿಗಳ ನೂರೆಂಟು, ಧರ್ಮದ ಬೆಳಕು
ವಿಧವಿಧ ಬಣ್ಣದ ಬದುಕು ವೇಷ. //ಪಲ್ಲವಿ//
ಹೇಳುವರು ಎಲ್ಲಾ ನಾವು ಜಾತ್ಯತೀತ ಎಂದು
ಮಾಡುವರು ಇಲ್ಲಿ ಜಾತಿಗಳ ಬೇರಿನ ತವರು
ಜಾತಿಗಳ ಹೆಸರಲ್ಲಿ ಜಾಹೀರಾತು ನೀಡಿ
ವೈಶಮ್ಯದ ಮತಗಳ ಬೇಳೆ ಬೆಂದಿದೆ ನೋಡಿ
ನೋಟಿನಿಂದ ಜನರ ಓಟನ್ನು ಕೊಂಡು
ಗದ್ದುಗೆ ಏರಿರುವರು ತಿಂದು ಉಂಡು
ಬಾಯಿಯ ತುಂಬಾ ಸಂವಿಧಾನದ ಮಾತು
ಪ್ರಜಾಪ್ರಭುತ್ವವು ಒಡೆದ ಮಡಿಕೆಯಂತೆ ತೂತು
ಬಡವ ಬಲ್ಲಿದರೆಂಬ ಅಸ್ಪೃಶ್ಯತೆ ಇಲ್ಲಿ
ಭಾರತವು ಬೆಳಗುವುದೇ ಈ ಬೆಳಕಿನಲ್ಲಿ
ನ್ಯಾಯ ಸ್ವತಂತ್ರವೂ ಸಮಾನತೆಗಳು ಸತ್ತಿವೆ
ಅದಕ್ಕೆ ಇರಬೇಕು ನಮ್ಮ ದೇಶ ಭಾರತ ಎನಿಸಿದೆ
ಮೇಲು-ಕೀಳು ಎಂಬ ಭಾವ ಬಿತ್ತಿರುವಾಗ
ಎಲ್ಲಿ ಕಾಣಬೇಕು ನಾವು, ಸಮಾನತೆಯ ಮಂತ್ರ
ಇದುವೇ ನಾವು ಬ್ರಿಟಿಷರಿಂದ ಪಡೆದ ಸ್ವಾತಂತ್ರ್ಯ
ಎತ್ತ ಸಾಗುತ್ತಿದೆ ನಮ್ಮ ಭಾರತದ ಜನತಂತ್ರ
***********ರಚನೆ********
ಡಾ.ಚಂದ್ರಶೇಖರ್ ಸಿ.ಹೆಚ್
Super sir
ReplyDelete