ಭಾವಗೀತೆ -69
🌹 ನರ ಮಾನವ🌹
ನರ ಮಾನವ ದೈವ ಕಾಣ ಹೊರಟ
ದೈವನಾಗಲಿಲ್ಲ
ದಾನಮಾಡ ಹೊರಟ
ದೇವನಾದನಲ್ಲ //ಪಲ್ಲವಿ//
ಮನುಷ್ಯತ್ವ ಒಂಚೂರು ಇಲ್ಲ
ಮನುಜನಾದನಲ್ಲ
ಯುದ್ಧ ಮಾಡಲಿಲ್ಲ
ಕತ್ತಿ ಗುರಾಣಿ ಹಿಡಿದನಲ್ಲ
ದ್ವೇಷ ಅಸೂಯೆ ಮರೆತು ನಡೆದ
ಶತ್ರು ಕಾಣಲಿಲ್ಲ
ಪುಸ್ತಕಗಳ ಓದಲಿಲ್ಲ
ಜ್ಞಾನ ಉಟ್ಟಿತಲ್ಲ
ಬೋಧಿವೃಕ್ಷದ ಕೆಳಗೆ ಕುಳಿತ
ಜ್ಞಾನೋದಯವಾಯಿತಲ್ಲ
ಊರೂರು ಸುತ್ತಿ ಬಂದ
ತಿಳಿದ ಯಾರೂ ನನ್ನವರಲ್ಲ
ವಿದ್ಯೆಯನ್ನು ಮರೆತ
ಅಕ್ಷರದ ಬೆಳಕು ಮೂಡಲಿಲ್ಲ
ಪ್ರಕೃತಿಯೊಡನೆ ಬೆರೆತ
ಆದರು ದೈವ ಕಾಣಲಿಲ್ಲ
ಮಾನವೀಯತೆ ತಿಳಿಯ ಹೋಗಿ
ಮೌಲ್ಯ ಸತ್ತಿತ್ತಲ್ಲ
ಮಾತು ಮೌನಿಯಾದ
ಜ್ಞಾನದ ಚಿಲುಮೆ ಹುಟ್ಟಿತಲ್ಲ
********ರಚನೆ *********
ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment