ಭಾವ ಗೀತೆ -64
🌹 ಯಾರದೋ ಶಾಪ ಯಾರಿಗೋ 🌹
ಅಂಧಕಾರದಲ್ಲಿ ಮುಳುಗಿದ ಜನಕೆ
ಅಸ್ಪೃಶ್ಯತೆ ಒಂದು ಶಾಪ
ಬಡತನವು ಬೆನ್ನಟ್ಟಿ ಕಿತ್ತಿದೆ.
ಹೊಟ್ಟೆಯ ಚರ್ಮದ ರೂಪ. //ಪಲ್ಲವಿ//
ಅವಮಾನಗಳು ಬೆನ್ನಟ್ಟಿ
ಬಂದಿವೆ ಆಸ್ಪೃಶ್ಯರಿಗೆ
ಅಪಮಾನಗಳು ಕಾದು ಕುಂತಿವೆ
ಬದುಕ ದೂಡಿವೆ ಗುಂಡಿಗೆ
ಯಾವ ತಪ್ಪಿಗೆ ಅಸ್ಪೃಶ್ಯತೆಯ ಶಾಪ
ಯಾರೋ ನೀಡಿದ ಶಿಕ್ಷೆ ಇದರ ರೂಪ
ಹಣೆಯ ಚಚ್ಚಿ ಶಪಿಸಿದರೆ ಹೋಗುವುದೇ ಕೋಪ
ಇದುವೇನು ಅಸ್ಪೃಶ್ಯ ರೂ ಮಾಡಿದ ಪಾಪ
ಬದಲಾವಣೆಯ ಬೆಳಕು
ಮೂಡುವುದೇ ಅಸ್ಪೃಶ್ಯರಿಗೆ
ಹೊಂಗೆಯ ನೆರಳು ಬರುವುದೇ
ಬದುಕಿನ ಜೀವದ ಈ ಮಾನವರಿಗೆ
ಮಾಡದ ತಪ್ಪಿಗೆ ಶಿಕ್ಷೆ ಏಕೆ
ಬಡತನದ ಬೇಗೆಗೆ ಸಾಯಬೇಕೇ
ಕಣ್ಣನು ಒರೆಸಿ ಜಿಗಿಟುವ ತಂತ್ರಾವೇಕೆ
ಜಾಗೃತಿ ನೆಪದಲ್ಲಿ ಕುತಂತ್ರವೇಕೆ
ಅಸ್ಪೃಶ್ಯರಿಗೆ ಸಿಗುವುದೇ ನ್ಯಾಯ
ಹುಟ್ಟಿದ ಜೀವವು ನೋಡಿದ ಗಾಯ
ಹೊಟ್ಟೆಯ ಕುಳಿಗೆ ನಲುಗುವ ಪ್ರಾಯ
ನೀವೇ ಹೇಳಿ ಸ್ಪೃಶ್ಯ ರೆ ಇದುವೇ ನ್ಯಾಯ
ಅಸ್ಪೃಶ್ಯತೆ ಅಂದಕಾರಕೆ ಕೊನೆ ಎಲ್ಲಿ
ಮೂಡುವುದೇ ಸೋದರತೆಗೆ ನೆಲೆ ಇಲ್ಲಿ
ಶೋಷಿತ ವರ್ಗದ ಕಳಂಕ ತೊಲಗಿ
ಬರೆಯಲಿ ಹೊಸ ಚರಿತೆ ಗುಡುಗಿ
*********ರಚನೆ*********
ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment