Posts

Showing posts from November, 2023

ಭಾವ ಗೀತೆ -56

Image
    🌹 ಬಾಳ ಬಂಡಿ ಸಂತೆ🌹 ಬಾಳ ಬಂಡಿಯ ಸಂತೆಯಲ್ಲಿ ನೋವುಗಳು ನೂರೆಂಟು ನೆಮ್ಮದಿ ಹುಡುಕುತ ಮನೆಯಲ್ಲಿ ದಿಂಬಿಗೂ ಗೊರಕೆ ಉಂಟು //ಪಲ್ಲವಿ// ಬದುಕಿನ ಗಂಡ ಗುಂಡಿಯಲ್ಲಿ ತೊಳೆ ಕಲ್ಮಶ ಪೊರಕೆ ಇಡಿದು ನಿಜ ಜೀವನದ ನಡಿಗೆಯಲ್ಲಿ ಕಂಡೆ ಬಾಚಿ ದೋಚಿದವರನ್ನು ಅಳೆದು ಕಣ್ಣಿನ ನೋಟಕ್ಕೆ ಮಾವು  ಉದುರೀತೆ ಮಂತ್ರ ತಂತ್ರಕ್ಕೆ ದೇವರ ದರ್ಶನವಾಯಿತೆ ನೂಕುವಿರೇಕೆ ಟಿವಿಯ ನೋಡುತ ಕಾಲ ಕಳೆದ ಸಮಯ ಮತ್ತೆ ಜಯ ತರುವುದಿಲ್ಲ ಬಾಳ ನೋಗಕೆ  ಹೆಗಲು ಕೊಡು ಹೆಜ್ಜೆ ಹೆಜ್ಜೆಯ ತುಸು ಮುಂದಾನೀಡು ಭಯಜಯಗಳನ್ನು ನೂಕಿ ಬಿಡು ನಾಚಿಕೆಯ ಲಜ್ಜೆ ತೊರೆದು ಬಿಡು ನ್ಯಾಯಕ್ಕೆ ಮೋಡಗಳು ಡಿಕ್ಕಿ ಹೊಡೆದು ನಮ್ಮ ಧ್ವನಿಯು ಸಿಡಿಲಂತೆ ಸಿಡಿದು ಮಳೆ ಹನಿಗಳು ಉದರಲ್ಲಿ ಪ್ರೀತಿ ತಿಳಿದು ಬದುಕು ಹಸಿರಾಗಲಿ ಕಷ್ಟವ ತೊಳೆದು ಹಾಗಿದ್ದು ಹಾಗಿ ಹೋಯಿತು ಚಿಂತೆ ಏಕೆ ನಾಳೆಯೂ ಬರುವುದು ಆತಂಕವೆಕೆ ನೆನ್ನೆ ನಾಳೆಗಳ ಮಧ್ಯೆ ಗೋಣಗಾಟವೇಕೆ ಮನಸ್ಸು ಇದ್ದರೆ ಜೀವನ ಖುಷಿಯ ನೌಕೆ ***********ರಚನೆ********* ಡಾ. ಚಂದ್ರಶೇಖರ್ ಸಿ.ಹೆಚ್

ಭಾವಗೀತೆ -55

Image
      🌹ಕೂಡಿ ಬಾಳೋಣ🌹 ಕೂಡಿ ಬಾಳೋಣ ನಾವೆಲ್ಲರೂ ಒಂದು ನಮ್ಮಯ ಧರ್ಮವೇ ಹಿಂದೂ ನಮ್ಮೊಳಗೆ ಏಕೆ ಕಿತ್ತಾಟ ಅಶಾಂತಿಯ ಮನೆಯಲ್ಲಿ ಏಕೆ ಒದ್ದಾಟ //ಪಲ್ಲವಿ// ದೇವರು ಸೃಷ್ಟಿಸಿಲ್ಲ ಜಾತಿ ಮರೆತು ಹೋಗುತ್ತಿದ್ದೇವೆ ನೀತಿ ಗುಡಿಯಾ ಒಳಗೆ ದೇವರು ನೀನು ಮನದ ನುಡಿಯ ಒಳಗೂ ದೇವರು ನೀನು ಧರ್ಮ ಬೇರೆ ಆದರೂ ದೇಶ ಭಾರತ ಭಾಷೆ ವೇಷ ಬೇರೆ ಆದರೂ ದೇಶ ಭಾರತ ನೆಲದಲ್ಲಿ ಹರಿಯುವ ಜಲ ಒಂದೇ ಬಾವಿಯಲ್ಲಿರುವ ನೀರು ಒಂದೇ ಬೇಧ ಭಾವಗಳು ನಮ್ಮಲ್ಲಿ ಬೆರೆತರು ನಾವು ಹೇಳಬೇಕು ತಾಯಿ ಒಂದೇ ಎಂದು ಕಲೆತು ಎದೆ ತಟ್ಟಿ ಹೇಳು ನಾನು ಹಿಂದೂ ಜಾತಿ ಧರ್ಮಗಳ ನಡುವೆಯೂ ಮುಂದು *********ರಚನೆ********** ಡಾ. ಚಂದ್ರಶೇಖರ್ ಸಿ.ಹೆ ಚ್

ಭಾವ ಗೀತೆ -54

Image
         🌹 ಬಿಲ್ಲಿನ ಬಾಣ🌹 ಮನದಲ್ಲಿ ಬಿಲ್ಲಿನ ಬಾಣ ನಡೆದಿದೆ ನೋವಿನ ಕದನ ತನುವಲ್ಲಿ ಹೂವಿನ ಬಾಣ ಕುಣಿಯುವ ಬಾರ ಮದನ  //ಪಲ್ಲವಿ// ಒತ್ತಿದೆ ಓಟು ನಾನು ನೋಟು ಕೊಟ್ಟ ನೀನು ಬ್ಯಾಲೆಟ್ ವೋಟನ್ನು ಕುಕ್ಕಿ  ಬುಲೆಟ್ ಎದೆಯ ಹೋಕ್ಕಿ  ಜೀವನ ಕನಸಿನ ಬ್ರಾಂತಿ ಬದುಕಲಿ ನೂರೆಂಟು ಕ್ರಾಂತಿ ಅಕ್ಷರವ ಬರೆಯಿತು ನೆತ್ತರು ಯಾರು ನಿನ್ನ ಹೊತ್ತವರು ಹೆತ್ತರು ಮೌನವು ಇಂದು ಮಾತನಾಡಿದೆ ಮಾತು ಏಕೋ ಮರೆತು ಹೋಗಿದೆ ಗುಂಡಿಗೆ ಗಟ್ಟಿ ಇದ್ದರೆ ಜೀವ ಕಾಲವು ಕಾಣದ ವಿಷದ ಹಾವ ಜೀವನ ಸುಖ ದುಃಖದ ಕದನ ಮಾಡು ಮೋಸದ ದಮನ ಹೆಸರು ಇದ್ದರೆ ವಿಳಾಸ ಬದುಕಲಿ ಮರೆಯಾದ ವಿಲಾಸ *********ರಚನೆ********** ಡಾ. ಚಂದ್ರಶೇಖರ್ ಸಿ .ಹೆಚ್

ಭಾವ ಗೀತೆ -53

Image
🌹 ಶಾಂತಿ ಭಜನೆ🌹 ಗಾಂಧಿ ಮಾಡಿದ ಶಾಂತಿ ಭಜನೆ ಮಾಡಿತು ಭಾರತ ಪಾಕ್ ವಿಭಜನೆ ದೇಶಗಳು ನಮ್ಮವು ದ್ವೇಷಗಳು ನಮ್ಮವು ಯಾಕೆ ನಮಗೆ ಸಮರ. //ಪಲ್ಲವಿ// ಆಲದ ಮರ ಒಂದೇ ಗೊಂಬೆಗಳ ಅದಕ್ಕೆ ನೂರು ನಮಗೆ ಏಕೆ ದ್ವೇಷ ಕಟ್ಟೋಣ ನಾವು ದೇಶ ಕೊಂಡೆವು ನಾವು ಟಿಕೆಟ್ ನೋಡಲು ಭಾರತ ಪಾಕ್ ಕ್ರಿಕೆಟ್ ಗೆದ್ದರೆ ನಾವು ನಕ್ಕಂತೆ ಬಿದ್ದರೆ ಅವರು ಸೋತಂತೆ ಆಟದಿ ಸಹಜ ಸೋಲು ಗೆಲುವು ಸಾಮರಸ್ಯಧಿ ಬಾಳಬೇಕು ನಾವು ಕೆಡಿಸಿಕೊಂಡರೆ ನಾವು ಹೆಸರು ಮಲಿನವಾದಂತೆ ನಮ್ಮ ಉಸಿರು ಮನುಜ ನೀಡು ಪ್ರೇಮ ಬಜಿಸು ದೇವರ ನಾಮ ಬೇಡ ಯುದ್ಧದ ಛಾಯೆ ಜೀವನ ತಿಳಿಯದ ಮಾಯೆ **********ರಚನೆ******* ಡಾ. ಚಂದ್ರಶೇಖರ್ ಸಿ.ಹೆಚ್

ಭಾವ ಗೀತೆ -52

Image
  🌹 ಕನ್ನಡ ಸಾಹಿತ್ಯದ ಜಾತ್ರೆ🌹 ಕನ್ನಡವೆಂದರೆ ಮನ ಕುಣಿಯುತಿದೆ ಸಾಹಿತ್ಯದ ಜಾತ್ರೆಯಲಿ ಕನ್ನಡವೆಂದರೆ ಹೃದಯ ಬಡಿಯುತ್ತಿದೆ ಕೋಗಿಲೆ ಕುಹೂ ಸವಿಗಾನದಲಿ //ಪಲ್ಲವಿ// ಪ್ರಕೃತಿಯು ಹಸಿರು ತೋರಣ ಪಂಪ ಭಾರತ ಅರಳುವಲಿ ಸಮಾಜವಾಯಿತು ಸುಂದರ ಬಸವಣ್ಣನ ಕಾಯಕ ಕೈಲಾಸ ಆಗುವಲಿ ವಿರೂಪಾಕ್ಷನಾದನು ಪುನೀತ ಹರಿಹರನ ರಗಳೆಯ ಭಕ್ತಿಯಲಿ ಕರ್ನಾಟಕದ ಏಕೀಕರಣ ಕನ್ನಡ ಭಾಷೆ ನಗುವಿನಲಿ ಕುಮಾರವ್ಯಾಸನು ಗುಡುಗಿದನು ವ್ಯಾಸರ ಮಹಾಭಾರತ ಚಿಗುರುತಲಿ ಲಕ್ಷ್ಮೀಶನ ಅಲಂಕಾರಗಳ ಶೃಂಗಾರ ಜೈಮಿನಿ ಭಾರತ ಮೆರೆಯುವಲಿ ಬದುಕು ಆಯಿತು ಬೆತ್ತಲೆ ಸರ್ವಜ್ಞನ ತ್ರಿಪದಿಗಳ ನುಡಿಯಲಿ ದಾಸರು ಸಂತರ ಹಾಡಿನಲಿ ಮನಸುಗಳು ನಕ್ಕವು ಶುಭ್ರತೆಯಲಿ ವರಕವಿ ಯುಗ ಕವಿ ಹಾಡಲು ಸಾಹಿತ್ಯದ ನುಡಿ ಮಿಡಿಯುತಲಿ ಜೋಗದ ಸಿರಿ ಬೆಳಕಿನಲಿ ನಿಸಾರ್ ಅಹ್ಮದರ ನಿತ್ಯೋತ್ಸವದಲಿ ಹಳ್ಳಿಯ ಸಂಗೀತದ ಸೊಬಗು ಜನಪದ ಗೀತೆಯು ಜನಗಳ ಬಾಯಿಯಲಿ ಹೊಸ ಕವಿಗಳು ಕನ್ನಡದಿ ಉದಯಿಸಿ ಕುಣಿಯದೆ ಜೀವನ ಕನ್ನಡಮ್ಮನ ನೆರಳಿನಲಿ ***********ರಚನೆ******* ಡಾ.ಚಂದ್ರಶೇಖರ್ ಸಿ.ಹೆಚ್

ಭಾವಗೀತೆ -51

Image
   🌹 ಕನ್ನಡವೇ ನಮ್ಮಮ್ಮ🌹 ಕನ್ನಡಮ್ಮನ ಕರುಳಿನ  ಓ ಮುದ್ದಿನ ಕುಡಿ ಕನ್ನಡ ಮಾತಾಡುವ ಮುದ್ದು ಗಿಳಿಯಾಗಲಿ ನುಡಿ. //ಪಲ್ಲವಿ// ಬಸವಣ್ಣ ಸರ್ವಜ್ಞ ಅಕ್ಕಮಹಾದೇವಿ ವಚನಗಳು ಮನೆ ಬೆಳಗುತಾ  ಅಜ್ಞಾನದ ಅಂಧಕಾರವಾ ತೊಳೆಯುತ ಹಚ್ಚಿವೆ ನಮ್ಮ ಮನದ ಹಣತೆ ಚಾಲುಕ್ಯ ಹೊಯ್ಸಳ ಕದಂಬ ರಾಜರುಗಳು ಆಳಿದರು ನಮ್ಮನ್ನು ನಾಲ್ವಡಿ ಕೃಷ್ಣರಾಜರು ಕಟ್ಟಿದರು ಕನ್ನಂಬಾಡಿಯನ್ನು ಜಗದಲ್ಲೆಡೆ ಕುಣಿಯಲಿ ನಲಿಯಲಿ ನಮ್ಮಯ ಕನ್ನಡ ನುಡಿಯು ಸಾಗುವ ನೋವು ಉಳಿಸುತ ಬೆಳೆಸಿದ ಸಿಹಿ ಕನ್ನಡ ಭಾಷೆಯು *******ರಚನೆ********* ಡಾ. ಚಂದ್ರಶೇಖರ್ ಸಿ.ಹೆಚ್

ಭಾವಗೀತೆ- 50

Image
    🌹 ಕಂಗೊಳಿಸುವ ನೈದಿಲೆ🌹 ಮಾಮರ ಚಿಗುರದೆ ಕೂಗಿತೆಗೆ ಕೋಗಿಲೆ ಕೆಸರಿನಲ್ಲಿ ಕಂಗೊಳಿಸಿ ನಕ್ಕಿದೆ ಸುಂದರ ನೈದಿಲೆ. //ಪಲ್ಲವಿ// ಕೊಲ್ಲುವ ಭಯ ತಾಕಿದಾಗ ಓಡುತಿಹುದು ಜಿಂಕೆಯು ಮರದಿಂದ ಮರಕೆ ಜಿಗಿಯುತಿಹುದು ಮಂಗವು ರೆಕ್ಕೆ ಮುರಿದ ಹಕ್ಕಿ ಹೇಗೆ ಮುಗಿಲಿಗೆ ಹಾರಿತು ಮಳೆಯು ಹನೀ ಮುತ್ತಿಕ್ಕದೆ ಹಸಿರು ಎಲ್ಲಿ ಚಿಗುರಿತು ಗೊಮ್ಮಟ ಹಾಗೂ ಗುಮ್ಮಟವ ನೋಡಿ ಶಾಂತಿ ಆಯ್ತು ಮನವು ರಾಜರುಗಳು ಕಡು ಚರಿತ್ರೆ ಕೇಳಿ ಸಿಡಿಯಿತೆಕೆ ತನವು  ಕವಿತೆ  ನನ್ನ ಸೆಳೆದಾಗ ಹೃದಯ ಹಾಡು ಹಾಡಿದೆ ಕವಿತೆ ಬರೆದ ಕವಿಯನ್ನು   ಮನವು ತುಂಬಾ ಹೊಗಳಿದೆ *********ರಚನೆ ******** ಡಾ. ಚಂದ್ರಶೇಖರ್ ಸಿ. ಹೆ ಚ್

ಭಾವ ಗೀತೆ -49

Image
        🌹 ಓ ನನ್ನ ಕನ್ನಡ🌹 ಮನದ ಮಿಡಿತ ಹೃದಯದ ತುಡಿತ ಓ ನನ್ನ ಕನ್ನಡ ತಾಯಿಯ ಸಿಂಧೂರವಂತೆ ಆ ನಿನ್ನ ಬಾವುಟ ಮರೆತು ನಾವು ಕೂಗದಿರೋಣ ಎನ್ನಡ. //ಪಲ್ಲವಿ// ಕನ್ನಡದ ವರ್ಣಮಾಲೆಯಲ್ಲಿ ನಲ್ವತ್ತ ಎಳು ಅಕ್ಷರ ಕಲಿತು ನಾವು ಹಾಡೋಣ ಬನ್ನಿ ಬರದಂತೆ ಅಪಸ್ವರ  ಕವಿಗಳ ಸಾಲು ಸಾಲು ಬರೆದಿಹರು ಕನ್ನಡ ಕವಿತೆ ಹಚ್ಚಬೇಕು ನಾವು ಎಲ್ಲೆಡೆ ಕನ್ನಡದ ಹಣತೆ  ರಾಗ ವೀಣೆ ನುಡಿಸಿದಂತೆ ಕೋಗಿಲೆಯ ಸ್ವರವು ಶಾಂತಲೆಯನ್ನು ಮೀರಿಸುವ ನವಿಲಿನ ನಾಟ್ಯವು ಕನ್ನಡ ನುಡಿಯ ನಾವು ಪ್ರೀತಿಸೋಣ ಬನ್ನಿ ಕನ್ನಡಾಂಬೆಯ ಭಕ್ತಿಯಿಂದ ಪೂಜಿಸೋಣ ಬನ್ನಿ ಮುತ್ತು ರತ್ನ ವಜ್ರ ವೈಡೂರ್ಯ ಕನ್ನಡ ವಿರದೆ ಶೂನ್ಯ ರಸ ಋಷಿ ರಾಜ ಕವಿಗಳಿಂದ ಕನ್ನಡವು ಮಾನ್ಯ ಬೆವರು ಸುರಿಸಿ ಕನ್ನಡಕೆ ದುಡಿಯೋಣ ನಾವು ಭಾಷೆ ಮರೆತು ಕನ್ನಡಾಂಬೆಗೆ ತರದಿರೋಣ ಸಾವು **********ರಚನೆ ******* ಡಾ. ಚಂದ್ರಶೇಖರ್ ಸಿ.ಹೆಚ್

ಭಾವಗೀತೆ -48

Image
  🌹 ಕನ್ನಡಕ್ಕೆ ಕೈಮುಗಿದು ಬನ್ನಿ,🌹 ಕನ್ನಡದ ಬಂಧುಗಳೇ ಕೈಮುಗಿದು ಬನ್ನಿ ಕನ್ನಡಾಂಬೆಯ ಪಾದಚರಣಕೆ ನಮಿಸುವ ಬನ್ನಿ ನಾಡು ನುಡಿಯ ವನಜಲವು ನಾಡಿನ ಸ್ವರ್ಗ ಸಹ್ಯಾದ್ರಿಯಾ ಮಲೆಗಳಲ್ಲಿ ನಗುತಿದೆ ನಿಸರ್ಗ. //ಪಲ್ಲವಿ// ಕನ್ನಡ ಬೀಡಿನಲ್ಲಿ ಕವಿಗಳದೆ ಹಾಡು ಸಂಗೀತದ ನಾದವ ಗುನುಗುತಿದೆ ನೋಡು ಶಾರದೆಯ ಬೀಡು ನಮ್ಮ ಶೃಂಗೇರಿಯಲ್ಲಿ ವಿದ್ಯಾದೇವಿಯ ನೆಲೆ ಭದ್ರಾ ನದಿ ದಡದಲ್ಲಿ ಮುತ್ತು ರತ್ನಗಳ ಹಳೆದು ತೂಗಿದ ನಾಡು ಕನ್ನಡ ಶಿಲ್ಪ ಕಲೆಗಳ ತವರು ಬೀಡು ಈ ಸಿರಿಗನ್ನಡ ಭಾಷೆಗಳ ಭೇದ ಮೀರಿದ ನೆಲೆ ಕನ್ನಡ ಶಾಂತಿ ಪ್ರಿಯರ ತನು ಮನವು ಕನ್ನಡ ನಾಡು ನುಡಿಯ ಕಟ್ಟಿ ಬಾಳೋಣ ಬನ್ನಿ ಸಂಸ್ಕೃತಿಯ ಪ್ರತೀಕ ನಾವಾಗೋಣ ಬನ್ನಿ ಮಾನವೀಯತೆ ಮೌಲ್ಯಗಳು ಅರಿಹೋಣ ಬನ್ನಿ ಸರ್ವ ಜನಾಂಗದ ಶಾಂತಿಗೆ ಶ್ರಮಿಸೋಣ ಬನ್ನಿ ********ರಚನೆ ********* ಡಾ.ಚಂದ್ರಶೇಖರ್ ಸಿ.ಹೆಚ್

ಭಾವ ಗೀತೆ -47

Image
        🌹 ಕನ್ನಡ ಕಲರವ🌹 ಜುಳು ಜುಳು ಎಂದು ಓಡುವ ನದಿಯು ಕನ್ನಡವನ್ನು ಹಾಡುತಿದೆ  ಜೋಗದ ಸಿರಿ ಬೆಳಕಿನಲ್ಲಿ ಸಹ್ಯಾದ್ರಿ ಮಲೆಯ ಶರಾವತಿ ಕನ್ನಡದಲ್ಲಿ ಧುಮುಕುತಿದೆ // ಪಲ್ಲವಿ// ಕೋಗಿಲೆ ಮಾಮರದಿ ಕೂತು ಕುಹು ಕುಹು ಕನ್ನಡ ಸ್ವರ ಕೂಗುತಿದೆ ಚಿವ್ ಚೀವ್ ಎನ್ನುವ ಹಕ್ಕಿಯು ಕನ್ನಡ ನುಡಿ ನುಡಿಯುತಿದೆ  ಹಸುವಿನ ಮುದ್ದಿನ ಕರು ಅಂಬಾ ಎನುತ ಕನ್ನಡವನು ಕೊಸರುತಿದೆ  ಅಂಬೆಗಾಲಿಡುವ ಮಗು ಅಮ್ಮ ಎನ್ನುತ ಕನ್ನಡವನ್ನು ಕೂಗುತಿದೆ  ಕಾಕಾ ಎನ್ನುವ ಕಾಗೆಯೂ ಕೂಡ ಕನ್ನಡ ಕಾಗುಣಿತ ಹೇಳುತಿದೆ  ಸಿಹಿ ಜೇನಿನ ಜೇನನೊಣದಲಿ ಕನ್ನಡದ ಸಿಹಿ ಇರುತಿದೆ  ಬೀಸುವ ತಂಗಾಳಿಯು ಸುಯ್ಯಾ ಎನ್ನುತ ಸುಂಟರಗಾಳಿ ಆಗಿದೆ ಬೆಟ್ಟಗುಡ್ಡದ ಬಯಲುಗಳು ಕನ್ನಡ ಕನ್ನಡ ಎನ್ನುತ್ತಿದೆ ಎಲ್ಲಿದೆ ಕನ್ನಡಕ್ಕೆ ಸರಿಸಾಟಿ ನಮ್ಮದೇ ಆ ಕನ್ನಡ ಮೇಟಿ *********ರಚನೆ ******** ಡಾ. ಚಂದ್ರಶೇಖರ್ ಸಿ.ಹೆಚ್

ಭಾವ ಗೀತೆ -46

Image
  🌹ವೀಣೆಯ ಒಲವು 🌹 ನನ್ನ ಎದೆಯ ಒಳಗೆ ನೀ  ಮೀಟಿದ ತಂತಿ ನುಡಿದೈತಿ ತನ್ಮಯ ರಾಗವ ನುಡಿಸಲು ಲಬ ಡಬ್ ಎಂದೈತಿ.  //ಪಲ್ಲವಿ/// ಹಾಡಿನ ನಾದದ ಸ್ವರಕೆ ಮನಸು ಮಿಡಿದೈತಿ ವೀಣೆಯ ನುಡಿಸುವ ಚೆಲುವೆ ನನ್ನ ರಾಣೀ ಅಂತೈತಿ  ವೀಣೆ ತಂತಿ ಮೀಟಿದಾಗ ನಾದ ಹೋಮ್ಮೈತಿ  ಹೃದಯ ನಿನ್ನ ಬಯಸಿದಾಗ ಹಾಡು ಬಂದೈತಿ  ನೂರು ರಾಗ ತಾಳ ಹಾಕಿ ತನುವ ಕಲಕೈತಿ ಬದುಕಿನ ಚಿಂತೆಯ ಸಂತೆ ತುಸು ದೂರ ನೂಕೈತಿ ನುಡಿಯುವ ವೀಣೆಗೆ ಏಕೋ ಪ್ರೀತೀ ಹುಟ್ಟೈತಿ ಸಂಗೀತವೇ ನನ್ನ ಹೆಸರು   ಎಂದು ಉಸಿರು ಕಟ್ಟೈತಿ *********ರಚನೆ ******** ಡಾ. ಚಂದ್ರಶೇಖರ್ ಸಿ. ಹೆಚ್

ಭಾವ ಗೀತೆ -45

Image
      🌹 ನೇಸರ ಮೂಡಿ🌹 ಮೂಡಣದಾಗ ನೇಸರ ಮೂಡಿ ಬಂದಾನೋ ಪಡುವಣದಾಗ ಮುಳುಗಿ ಬೆಟ್ಟದ ಹಿಂದೆ ಸರಿದಾನು. //ಪಲ್ಲವಿ// ಹಾರುವಾ ಹಕ್ಕಿಗೆ ರೆಕ್ಕೆ ಬಂದು ಆಕಾಶಕ್ಕೆ ಜಿಗಿದಾವ ನದಿಗಳು ಜುಜುಳು ಎಂದು  ಕೂಗುತ ಓಡ್ಯಾವ ಹಚ್ಚಾ ಹಸಿರಿನ ಪೈರು ನೆಲಚಾಚಿ ಒದೆದೈತಿ ಸಹ್ಯಾದ್ರಿಯ ಮಲೆಗಳು ಕಾಡುಮೆಡಲಿ ತುಂಬೈತಿ ಮೋಡದ ನರ್ತನಕ್ಕೆ ಮಳೆಯೂ ಸುರಿದೈತಿ ಎಲ್ಲೆಡೆ ಭತ್ತ ರಾಗಿಯ ಪೈರು ಬೆಳೆದೈತಿ ಆಗಸದಿ ನಕ್ಷತ್ರಗಳ ಗೂಡು ಮಿನುಗೈತಿ ಬೆಳದಿಂಗಳ ಚಂದ್ರನು ಬೆಳ್ಳಗೆ ನಗುತೈತಿ ಚುಕ್ಕಿ ತಾರೆಗಳ ಮಧ್ಯೆ ಉಲ್ಕೆ ಉರಿದು ಬಿದ್ದೈತಿ ಕತ್ತಲ ಕೋಣೆಯೊಳಗೆ ಹಚ್ಚಿದ ಹಣತೆ ನಗುತೈತಿ ********ರಚನೆ******** ಡಾ.ಚಂದ್ರಶೇಖರ್ ಸಿ.ಹೆ ಚ್

ಭಾವ ಗೀತೆ -44

Image
     🌹 ಕನ್ನಡವೇ ಅಮೃತ🌹 ಬ್ರಾಂದಿಯನ್ನು ಕುಡಿಯುವವಗೆ ಎದೆ ಹಾಲು ಕೂಡ ವಿಷದಂತೆ ಕರ್ನಾಟಕದ ಕನ್ನಡ ಬಾರದವಗೆ ಕನ್ನಡವು ಅಮೃತ ಕುಡಿದಂತೆ. //ಪಲ್ಲವಿ// ಓಡುವ ಕಾಲವ ತಡೆಯುವರಾರು ನಿಂತರ ನಿಲ್ಲುವುದೇ ಕಾಲ ಸಂಸ್ಕೃತಿ ಆಚಾರ ವಿಚಾರ ಮರೆತವಗೆ ಭಗವದ್ಗೀತೆಯ ಪಟಣೆಯ ಸ್ತೋತ್ರ ಸಾಲ ಆಳುವ ದೊರೆಗಳ ಕೆಳಗೆ  ಬದುಕಿದವಗೆ ಗುಲಾಮಗಿರಿಯನ್ನು ಹೊಸತಲ್ಲ ಸ್ವಾತಂತ್ರವೂ ನಮಗೆ ಬಂದರೂ ಕೂಡ ಭಾಷೆಯ ಗುಲಾಮಗಿರಿ ನಮ್ಮನ್ನು ಬಿಟ್ಟಿಲ್ಲ ಕರುನಾಡು ಕರ್ನಾಟಕವಾಯಿತು ಎಂದೋ ಆದರೆ ಕನ್ನಡ ಚಾರಿತ್ಯ ಉಳಿದಿಲ್ಲ ಪಠ್ಯಪುಸ್ತಕದಿ ಓದಿದ ಬದನೆಕಾಯಿ ಬದುಕಲು ಕೊನೆತನಕ ಮುಟ್ಸಿಲ್ಲ ಕನ್ನಡದಲ್ಲಿ ಸಾಧನೆಗೆ ಇಲ್ಲ ಇತಿ ಮಿತಿ ಕನ್ನಡ ಬಲ್ಲವ ಗೆಲ್ಲಬಲ್ಲ ಎಲ್ಲಾ ಮತಿ ಕರ್ಮಗಳು ಕಾಡಿ ಬೇಡಿದರೇನು ನಮ್ಮಯ ಧರ್ಮ ನಮಗೆ ಮೇಲು *********ರಚನೆ********  ಡಾ. ಚಂದ್ರಶೇಖರ್ ಸಿ.ಹೆಚ್

ಭಾವ ಗೀತೆ -43

Image
  🌹 ಲವ್ ಲವ್ ಲವ್ ಲವ್ 🌹 ಲವ್ ಲವ್ ಎನ್ನುತ್ತಿದೆ ಹದಿ ಹರೆಯದ ಈ ಹೃದಯ ಪ್ರೀತಿ ಪ್ರೇಮದ ಸುಳಿಗೆ ಸಿಲುಕಿ ತನ್ನವರ ಮರೆತ ನಮ್ಮ ಗೆಳೆಯ. //ಪಲ್ಲವಿ// ಪ್ರೀತಿಗೆ ರಕ್ತವ ಕೊಡುವ ಈ ಪ್ರೇಮಿ  ಹೆತ್ತ ತಾಯಿಯ ಮರೆತ ಈ ಡಮ್ಮಿ ಬಂದಿದೆ ಇವನಿಗೆ ಪ್ರೀತಿಯ ಜ್ವರವು ತನ್ನನ್ನು ತಾನೇ ಮರೆವಂತ ಈ ಒಲವು ಹೊಟ್ಟೆ ಹಸಿವನ್ನು ಕಾಣದ ಈ ಭೂಪ ಹುಡುಗಿಯ ಹಿಂದೆ ಅಲೆವಾ ಅಯ್ಯೋ ಪಾಪ ಏನು ಕಂಡನು ಅವಳಲಿ ನಾಕಾಣೆ ಕೊಡಿಸಲಿಲ್ಲ ಇವನಲ್ಲಿ ಅವಳಿಗೆ ಮೂರಾಣೆ ಎದೆಯಾ ಮೇಲೆ ಅಚ್ಚೆ ಹಾಕಿಸಿ ನೀನೆ ನನ್ನವಳೆಂದು ಚಿತ್ರ ಬಿಡಿಸಿ ಅವಳ ಹಿಂದೆ ತಿರುಗು ಹುಚ್ಚು ಪ್ರೇಮಿ ಮೈ ಮೇಲೆ ಬಂದಂತೆ ಆಡುವ ಸುನಾಮಿ ಇವಳ ಪ್ರೀತಿಗಾಗಿ ಜಗವ ಗೆಲ್ಲೋ ಬಯಕೆ ಹೆತ್ತವರನ್ನು ಹಾಕಿದ ನೇಣು ಮರಕೆ ಯಾರು ಬಲ್ಲವರು ಹೇಳು ಪ್ರೀತಿ ಮರ್ಮ ಬರೆದವನಂತೆ ವಿದಿಯು  ಇವರ ಕರ್ಮ ********ರಚನೆ**********  ಡಾ. ಚಂದ್ರಶೇಖರ್ ಸಿ.ಹೆ ಚ್

ಭಾವ ಗೀತೆ- 42

Image
  🌹 ಸ್ವರ್ಗವೇ ಕರುನಾಡು🌹 ಕನ್ನಡ ನಾಡು ಸ್ವರ್ಗದ ಬೀಡು ಹಾಡೋಣ ನಾವು ಕನ್ನಡಮ್ಮನ ಹಾಡು ಬಂಗಾರ ಬೆಳೆವ ಸೋಂಪು ಮಣ್ಣಿದು ಕಿತ್ತೂರ ರಾಣಿ ಚೆನ್ನಮ್ಮ ಬೆಳೆದ ನಾಡಿದು //ಪಲ್ಲವಿ// ನೂರು ಕವಿಗಳ ಸಾವಿರ ಕವಿತೆ ಬೆಳಗಿದ ನಮ್ಮ ಭವ್ಯ ಕನ್ನಡದ ಹಣತೆ ಕಪ್ಪು ಕೆಂಪು ಜೇಡಿ ಮರಳು ಮಣ್ಣಿನಲ್ಲಿ ಅಡಿಕೆ ಕಲ್ಪವೃಕ್ಷಗಳು ನಮ್ಮ ಬೀಡಿನಲ್ಲಿ ಸಂಗೀತದ ಹೊನಲು ಗಾನಸುದೆ ಹ ಮಾಧುರ್ಯದ ಕಂಠ ಸೀರಿಯಲಿ ಸರಿಗಮದ ರಾಗ ಹೃದಯದಿ ಮಿಡಿದು ನಾದಸ್ವರವು ಜನರ ಮನವಾ ಗೆಲ್ಲಲಿ ಬೇಲೂರು ಹಳೇಬೀಡು ಶಿಲ್ಪ ಕಲೆಯ ತವರು ಜಕಣಾಚಾರಿ ಕೆತ್ತಿದ ಶಿಲ್ಪಗಳ ನವಿರು ಗೋಳಗುಮ್ಮಟದ ಬಾಹುಬಲಿಯ ನೋಡು ಗೊಮ್ಮಟೇಶ್ವರ ವಿಗ್ರಹದ ನಾಡ ಬೀಡು **********ರಚನೆ ******** ಡಾ. ಚಂದ್ರಶೇಖರ್ ಸಿ.ಹೆ ಚ್

ಭಾವ ಗೀತೆ -72

Image
🌹🌹ಮಳೆ ಹನಿ🌹🌹 ಮಳೆಯಾ ಹನಿಯೊಂದು  ಮನವ ತಾಕಿ ಕಣ್ಣಿರಾಗಿದೆ ಪ್ರೀತಿಯ ಬೆಸುಗೆಯು ಹೃದಯವ ತಾಕಿ ನಿನ್ನ ಕೂಗಿ ಕರೆದಿದೆ ಹಸಿರು ಎಲೆಯ ಮೇಲೆ ಸ್ವಾತಿ ಮುತ್ತೊಂದು ತಬ್ಬಿ ಕೂತಿದೆ ನನ್ನ ನಿನ್ನ ಬೆಸುಗೆ ಅಮರ ಕಾವ್ಯದ  ಕತೆಯ ಹೇಳಿದೆ ಓಡುವ ಮೋಡಕೆ ಮೊಡವು ತಾಗಿ ಮಳೆ ಹನಿ ಸುರಿದಿದೆ ನಿನ್ನ ಬಂಧನದಲ್ಲಿ ನನ್ನ ಬದುಕು ಬಿಗಿದಪ್ಪಿದೆ ಚೆಲುವೆ ನೀನು  ಕಾಡುವೆ ಏಕೆ ಕನಸ್ಸಿಗೆ ಸುಂಕವ ಕಟ್ಟಬೇಕೆ ನಿನ್ನ ಮಡಿಲಲಿ  ಜಾರುವೆ ನಾನು ಮೋಡದ ಮಳೆ ಹನಿ ಸೆರೆ ಇಡಿಯಲೆ ಏನು *********ರಚನೆ********** ಡಾ. ಚಂದ್ರಶೇಖರ್ ಸಿ.ಹೆಚ್

ಭಾವ ಗೀತೆ -41

Image
    🌹 ದೇಹವು ಮಣ್ಣಾಗಲಿ🌹 ದೇಹವು ಮಣ್ಣಾಗಲಿ  ಕನ್ನಡದ ನಾಡು ನುಡಿಗೆ  ಉಸಿರು ಹಸಿರಾಗಲಿ ನಮ್ಮ ಕನ್ನಡ ಬೀಡಿಗೆ // ಪಲ್ಲವಿ// ಅಕ್ಷರಗಳು ನುಡಿದಿವೆ ಮಾಧುರ್ಯದ ಮುತ್ತು ರನ್ನ ಪಂಪ ಜನ್ನರಾ ಕಾವ್ಯವು ನಮ್ಮಯ ಸ್ವತ್ತು ಕುವೆಂಪು ಮಾಸ್ತಿ ಬೆಂದ್ರೆ ನಮ್ಮ ಕನ್ನಡ ಕಿರೀಟ ಹಾರಾಡಲಿ ಕರ್ನಾಟಕದಲ್ಲಿ ಕನ್ನಡದ ಬಾವುಟ ಮಂತ್ರ ವೇದ ಘೋಷಗಳು ನಮ್ಮಯ ಮಾತಾಗಲಿ ಅಂಬೆಗಾಲು ಇಡುವ ಮಗು ಜ್ಞಾನದ ಕುಡಿಯಾಗಲಿ ಕನ್ನಡವೇ ನಮ್ಮ ಪ್ರೀತಿ ಪ್ರಾಣ ಸೋತ ಮಳೆ ತಂದ ವರುಣ ಮೇಲು-ಕೀಳು ಭೇದವಿಲ್ಲ ಹಿರಿಯ ಕಿರಿಯ ಒಂದೇ ಎಲ್ಲ *******ರಚನೆ********* ಡಾ.ಚಂದ್ರಶೇಖರ್ ಸಿ.ಹೆಚ್