ಭಾವ ಗೀತೆ -44

 



   🌹 ಕನ್ನಡವೇ ಅಮೃತ🌹


ಬ್ರಾಂದಿಯನ್ನು ಕುಡಿಯುವವಗೆ

ಎದೆ ಹಾಲು ಕೂಡ ವಿಷದಂತೆ

ಕರ್ನಾಟಕದ ಕನ್ನಡ ಬಾರದವಗೆ

ಕನ್ನಡವು ಅಮೃತ ಕುಡಿದಂತೆ. //ಪಲ್ಲವಿ//


ಓಡುವ ಕಾಲವ ತಡೆಯುವರಾರು

ನಿಂತರ ನಿಲ್ಲುವುದೇ ಕಾಲ

ಸಂಸ್ಕೃತಿ ಆಚಾರ ವಿಚಾರ ಮರೆತವಗೆ

ಭಗವದ್ಗೀತೆಯ ಪಟಣೆಯ ಸ್ತೋತ್ರ ಸಾಲ


ಆಳುವ ದೊರೆಗಳ ಕೆಳಗೆ  ಬದುಕಿದವಗೆ

ಗುಲಾಮಗಿರಿಯನ್ನು ಹೊಸತಲ್ಲ

ಸ್ವಾತಂತ್ರವೂ ನಮಗೆ ಬಂದರೂ ಕೂಡ

ಭಾಷೆಯ ಗುಲಾಮಗಿರಿ ನಮ್ಮನ್ನು ಬಿಟ್ಟಿಲ್ಲ


ಕರುನಾಡು ಕರ್ನಾಟಕವಾಯಿತು ಎಂದೋ

ಆದರೆ ಕನ್ನಡ ಚಾರಿತ್ಯ ಉಳಿದಿಲ್ಲ

ಪಠ್ಯಪುಸ್ತಕದಿ ಓದಿದ ಬದನೆಕಾಯಿ

ಬದುಕಲು ಕೊನೆತನಕ ಮುಟ್ಸಿಲ್ಲ


ಕನ್ನಡದಲ್ಲಿ ಸಾಧನೆಗೆ ಇಲ್ಲ ಇತಿ ಮಿತಿ

ಕನ್ನಡ ಬಲ್ಲವ ಗೆಲ್ಲಬಲ್ಲ ಎಲ್ಲಾ ಮತಿ

ಕರ್ಮಗಳು ಕಾಡಿ ಬೇಡಿದರೇನು

ನಮ್ಮಯ ಧರ್ಮ ನಮಗೆ ಮೇಲು


*********ರಚನೆ******** 

ಡಾ. ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35