ಭಾವ ಗೀತೆ- 42

 



🌹 ಸ್ವರ್ಗವೇ ಕರುನಾಡು🌹


ಕನ್ನಡ ನಾಡು ಸ್ವರ್ಗದ ಬೀಡು

ಹಾಡೋಣ ನಾವು ಕನ್ನಡಮ್ಮನ ಹಾಡು

ಬಂಗಾರ ಬೆಳೆವ ಸೋಂಪು ಮಣ್ಣಿದು

ಕಿತ್ತೂರ ರಾಣಿ ಚೆನ್ನಮ್ಮ ಬೆಳೆದ ನಾಡಿದು //ಪಲ್ಲವಿ//


ನೂರು ಕವಿಗಳ ಸಾವಿರ ಕವಿತೆ

ಬೆಳಗಿದ ನಮ್ಮ ಭವ್ಯ ಕನ್ನಡದ ಹಣತೆ

ಕಪ್ಪು ಕೆಂಪು ಜೇಡಿ ಮರಳು ಮಣ್ಣಿನಲ್ಲಿ

ಅಡಿಕೆ ಕಲ್ಪವೃಕ್ಷಗಳು ನಮ್ಮ ಬೀಡಿನಲ್ಲಿ


ಸಂಗೀತದ ಹೊನಲು ಗಾನಸುದೆ ಹ

ಮಾಧುರ್ಯದ ಕಂಠ ಸೀರಿಯಲಿ

ಸರಿಗಮದ ರಾಗ ಹೃದಯದಿ ಮಿಡಿದು

ನಾದಸ್ವರವು ಜನರ ಮನವಾ ಗೆಲ್ಲಲಿ


ಬೇಲೂರು ಹಳೇಬೀಡು ಶಿಲ್ಪ ಕಲೆಯ ತವರು

ಜಕಣಾಚಾರಿ ಕೆತ್ತಿದ ಶಿಲ್ಪಗಳ ನವಿರು

ಗೋಳಗುಮ್ಮಟದ ಬಾಹುಬಲಿಯ ನೋಡು

ಗೊಮ್ಮಟೇಶ್ವರ ವಿಗ್ರಹದ ನಾಡ ಬೀಡು


**********ರಚನೆ ********

ಡಾ. ಚಂದ್ರಶೇಖರ್ ಸಿ.ಹೆ ಚ್

Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ