ಭಾವ ಗೀತೆ -52

 



🌹 ಕನ್ನಡ ಸಾಹಿತ್ಯದ ಜಾತ್ರೆ🌹


ಕನ್ನಡವೆಂದರೆ ಮನ ಕುಣಿಯುತಿದೆ

ಸಾಹಿತ್ಯದ ಜಾತ್ರೆಯಲಿ

ಕನ್ನಡವೆಂದರೆ ಹೃದಯ ಬಡಿಯುತ್ತಿದೆ

ಕೋಗಿಲೆ ಕುಹೂ ಸವಿಗಾನದಲಿ //ಪಲ್ಲವಿ//


ಪ್ರಕೃತಿಯು ಹಸಿರು ತೋರಣ

ಪಂಪ ಭಾರತ ಅರಳುವಲಿ

ಸಮಾಜವಾಯಿತು ಸುಂದರ

ಬಸವಣ್ಣನ ಕಾಯಕ ಕೈಲಾಸ ಆಗುವಲಿ


ವಿರೂಪಾಕ್ಷನಾದನು ಪುನೀತ

ಹರಿಹರನ ರಗಳೆಯ ಭಕ್ತಿಯಲಿ

ಕರ್ನಾಟಕದ ಏಕೀಕರಣ

ಕನ್ನಡ ಭಾಷೆ ನಗುವಿನಲಿ


ಕುಮಾರವ್ಯಾಸನು ಗುಡುಗಿದನು

ವ್ಯಾಸರ ಮಹಾಭಾರತ ಚಿಗುರುತಲಿ

ಲಕ್ಷ್ಮೀಶನ ಅಲಂಕಾರಗಳ ಶೃಂಗಾರ

ಜೈಮಿನಿ ಭಾರತ ಮೆರೆಯುವಲಿ


ಬದುಕು ಆಯಿತು ಬೆತ್ತಲೆ

ಸರ್ವಜ್ಞನ ತ್ರಿಪದಿಗಳ ನುಡಿಯಲಿ

ದಾಸರು ಸಂತರ ಹಾಡಿನಲಿ

ಮನಸುಗಳು ನಕ್ಕವು ಶುಭ್ರತೆಯಲಿ


ವರಕವಿ ಯುಗ ಕವಿ ಹಾಡಲು

ಸಾಹಿತ್ಯದ ನುಡಿ ಮಿಡಿಯುತಲಿ

ಜೋಗದ ಸಿರಿ ಬೆಳಕಿನಲಿ

ನಿಸಾರ್ ಅಹ್ಮದರ ನಿತ್ಯೋತ್ಸವದಲಿ


ಹಳ್ಳಿಯ ಸಂಗೀತದ ಸೊಬಗು

ಜನಪದ ಗೀತೆಯು ಜನಗಳ ಬಾಯಿಯಲಿ

ಹೊಸ ಕವಿಗಳು ಕನ್ನಡದಿ ಉದಯಿಸಿ

ಕುಣಿಯದೆ ಜೀವನ ಕನ್ನಡಮ್ಮನ ನೆರಳಿನಲಿ


***********ರಚನೆ*******

ಡಾ.ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35