ಭಾವ ಗೀತೆ -49
🌹 ಓ ನನ್ನ ಕನ್ನಡ🌹
ಮನದ ಮಿಡಿತ ಹೃದಯದ ತುಡಿತ
ಓ ನನ್ನ ಕನ್ನಡ
ತಾಯಿಯ ಸಿಂಧೂರವಂತೆ ಆ ನಿನ್ನ ಬಾವುಟ
ಮರೆತು ನಾವು ಕೂಗದಿರೋಣ ಎನ್ನಡ. //ಪಲ್ಲವಿ//
ಕನ್ನಡದ ವರ್ಣಮಾಲೆಯಲ್ಲಿ ನಲ್ವತ್ತ ಎಳು ಅಕ್ಷರ
ಕಲಿತು ನಾವು ಹಾಡೋಣ ಬನ್ನಿ ಬರದಂತೆ ಅಪಸ್ವರ
ಕವಿಗಳ ಸಾಲು ಸಾಲು ಬರೆದಿಹರು ಕನ್ನಡ ಕವಿತೆ
ಹಚ್ಚಬೇಕು ನಾವು ಎಲ್ಲೆಡೆ ಕನ್ನಡದ ಹಣತೆ
ರಾಗ ವೀಣೆ ನುಡಿಸಿದಂತೆ ಕೋಗಿಲೆಯ ಸ್ವರವು
ಶಾಂತಲೆಯನ್ನು ಮೀರಿಸುವ ನವಿಲಿನ ನಾಟ್ಯವು
ಕನ್ನಡ ನುಡಿಯ ನಾವು ಪ್ರೀತಿಸೋಣ ಬನ್ನಿ
ಕನ್ನಡಾಂಬೆಯ ಭಕ್ತಿಯಿಂದ ಪೂಜಿಸೋಣ ಬನ್ನಿ
ಮುತ್ತು ರತ್ನ ವಜ್ರ ವೈಡೂರ್ಯ ಕನ್ನಡ ವಿರದೆ ಶೂನ್ಯ
ರಸ ಋಷಿ ರಾಜ ಕವಿಗಳಿಂದ ಕನ್ನಡವು ಮಾನ್ಯ
ಬೆವರು ಸುರಿಸಿ ಕನ್ನಡಕೆ ದುಡಿಯೋಣ ನಾವು
ಭಾಷೆ ಮರೆತು ಕನ್ನಡಾಂಬೆಗೆ ತರದಿರೋಣ ಸಾವು
**********ರಚನೆ *******
ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment