ಭಾವ ಗೀತೆ -43
🌹 ಲವ್ ಲವ್ ಲವ್ ಲವ್ 🌹
ಲವ್ ಲವ್ ಎನ್ನುತ್ತಿದೆ ಹದಿ ಹರೆಯದ
ಈ ಹೃದಯ
ಪ್ರೀತಿ ಪ್ರೇಮದ ಸುಳಿಗೆ ಸಿಲುಕಿ
ತನ್ನವರ ಮರೆತ ನಮ್ಮ ಗೆಳೆಯ. //ಪಲ್ಲವಿ//
ಪ್ರೀತಿಗೆ ರಕ್ತವ ಕೊಡುವ ಈ ಪ್ರೇಮಿ
ಹೆತ್ತ ತಾಯಿಯ ಮರೆತ ಈ ಡಮ್ಮಿ
ಬಂದಿದೆ ಇವನಿಗೆ ಪ್ರೀತಿಯ ಜ್ವರವು
ತನ್ನನ್ನು ತಾನೇ ಮರೆವಂತ ಈ ಒಲವು
ಹೊಟ್ಟೆ ಹಸಿವನ್ನು ಕಾಣದ ಈ ಭೂಪ
ಹುಡುಗಿಯ ಹಿಂದೆ ಅಲೆವಾ ಅಯ್ಯೋ ಪಾಪ
ಏನು ಕಂಡನು ಅವಳಲಿ ನಾಕಾಣೆ
ಕೊಡಿಸಲಿಲ್ಲ ಇವನಲ್ಲಿ ಅವಳಿಗೆ ಮೂರಾಣೆ
ಎದೆಯಾ ಮೇಲೆ ಅಚ್ಚೆ ಹಾಕಿಸಿ
ನೀನೆ ನನ್ನವಳೆಂದು ಚಿತ್ರ ಬಿಡಿಸಿ
ಅವಳ ಹಿಂದೆ ತಿರುಗು ಹುಚ್ಚು ಪ್ರೇಮಿ
ಮೈ ಮೇಲೆ ಬಂದಂತೆ ಆಡುವ ಸುನಾಮಿ
ಇವಳ ಪ್ರೀತಿಗಾಗಿ ಜಗವ ಗೆಲ್ಲೋ ಬಯಕೆ
ಹೆತ್ತವರನ್ನು ಹಾಕಿದ ನೇಣು ಮರಕೆ
ಯಾರು ಬಲ್ಲವರು ಹೇಳು ಪ್ರೀತಿ ಮರ್ಮ
ಬರೆದವನಂತೆ ವಿದಿಯು ಇವರ ಕರ್ಮ
********ರಚನೆ**********
ಡಾ. ಚಂದ್ರಶೇಖರ್ ಸಿ.ಹೆ ಚ್
Comments
Post a Comment