ಭಾವಗೀತೆ -55
🌹ಕೂಡಿ ಬಾಳೋಣ🌹
ಕೂಡಿ ಬಾಳೋಣ ನಾವೆಲ್ಲರೂ ಒಂದು
ನಮ್ಮಯ ಧರ್ಮವೇ ಹಿಂದೂ
ನಮ್ಮೊಳಗೆ ಏಕೆ ಕಿತ್ತಾಟ
ಅಶಾಂತಿಯ ಮನೆಯಲ್ಲಿ ಏಕೆ ಒದ್ದಾಟ //ಪಲ್ಲವಿ//
ದೇವರು ಸೃಷ್ಟಿಸಿಲ್ಲ ಜಾತಿ
ಮರೆತು ಹೋಗುತ್ತಿದ್ದೇವೆ ನೀತಿ
ಗುಡಿಯಾ ಒಳಗೆ ದೇವರು ನೀನು
ಮನದ ನುಡಿಯ ಒಳಗೂ ದೇವರು ನೀನು
ಧರ್ಮ ಬೇರೆ ಆದರೂ ದೇಶ ಭಾರತ
ಭಾಷೆ ವೇಷ ಬೇರೆ ಆದರೂ ದೇಶ ಭಾರತ
ನೆಲದಲ್ಲಿ ಹರಿಯುವ ಜಲ ಒಂದೇ
ಬಾವಿಯಲ್ಲಿರುವ ನೀರು ಒಂದೇ
ಬೇಧ ಭಾವಗಳು ನಮ್ಮಲ್ಲಿ ಬೆರೆತರು
ನಾವು ಹೇಳಬೇಕು ತಾಯಿ ಒಂದೇ ಎಂದು ಕಲೆತು
ಎದೆ ತಟ್ಟಿ ಹೇಳು ನಾನು ಹಿಂದೂ
ಜಾತಿ ಧರ್ಮಗಳ ನಡುವೆಯೂ ಮುಂದು
*********ರಚನೆ**********
ಡಾ. ಚಂದ್ರಶೇಖರ್ ಸಿ.ಹೆ ಚ್
Real truth sir
ReplyDelete