ಭಾವ ಗೀತೆ -46
🌹ವೀಣೆಯ ಒಲವು 🌹
ನನ್ನ ಎದೆಯ ಒಳಗೆ ನೀ
ಮೀಟಿದ ತಂತಿ ನುಡಿದೈತಿ
ತನ್ಮಯ ರಾಗವ ನುಡಿಸಲು
ಲಬ ಡಬ್ ಎಂದೈತಿ. //ಪಲ್ಲವಿ///
ಹಾಡಿನ ನಾದದ ಸ್ವರಕೆ
ಮನಸು ಮಿಡಿದೈತಿ
ವೀಣೆಯ ನುಡಿಸುವ ಚೆಲುವೆ
ನನ್ನ ರಾಣೀ ಅಂತೈತಿ
ವೀಣೆ ತಂತಿ ಮೀಟಿದಾಗ
ನಾದ ಹೋಮ್ಮೈತಿ
ಹೃದಯ ನಿನ್ನ ಬಯಸಿದಾಗ
ಹಾಡು ಬಂದೈತಿ
ನೂರು ರಾಗ ತಾಳ ಹಾಕಿ
ತನುವ ಕಲಕೈತಿ
ಬದುಕಿನ ಚಿಂತೆಯ ಸಂತೆ
ತುಸು ದೂರ ನೂಕೈತಿ
ನುಡಿಯುವ ವೀಣೆಗೆ ಏಕೋ
ಪ್ರೀತೀ ಹುಟ್ಟೈತಿ
ಸಂಗೀತವೇ ನನ್ನ ಹೆಸರು
ಎಂದು ಉಸಿರು ಕಟ್ಟೈತಿ
*********ರಚನೆ ********
ಡಾ. ಚಂದ್ರಶೇಖರ್ ಸಿ. ಹೆಚ್
Comments
Post a Comment