ಭಾವ ಗೀತೆ -53
🌹 ಶಾಂತಿ ಭಜನೆ🌹
ಗಾಂಧಿ ಮಾಡಿದ ಶಾಂತಿ ಭಜನೆ
ಮಾಡಿತು ಭಾರತ ಪಾಕ್ ವಿಭಜನೆ
ದೇಶಗಳು ನಮ್ಮವು ದ್ವೇಷಗಳು ನಮ್ಮವು
ಯಾಕೆ ನಮಗೆ ಸಮರ. //ಪಲ್ಲವಿ//
ಆಲದ ಮರ ಒಂದೇ
ಗೊಂಬೆಗಳ ಅದಕ್ಕೆ ನೂರು
ನಮಗೆ ಏಕೆ ದ್ವೇಷ
ಕಟ್ಟೋಣ ನಾವು ದೇಶ
ಕೊಂಡೆವು ನಾವು ಟಿಕೆಟ್
ನೋಡಲು ಭಾರತ ಪಾಕ್ ಕ್ರಿಕೆಟ್
ಗೆದ್ದರೆ ನಾವು ನಕ್ಕಂತೆ
ಬಿದ್ದರೆ ಅವರು ಸೋತಂತೆ
ಆಟದಿ ಸಹಜ ಸೋಲು ಗೆಲುವು
ಸಾಮರಸ್ಯಧಿ ಬಾಳಬೇಕು ನಾವು
ಕೆಡಿಸಿಕೊಂಡರೆ ನಾವು ಹೆಸರು
ಮಲಿನವಾದಂತೆ ನಮ್ಮ ಉಸಿರು
ಮನುಜ ನೀಡು ಪ್ರೇಮ
ಬಜಿಸು ದೇವರ ನಾಮ
ಬೇಡ ಯುದ್ಧದ ಛಾಯೆ
ಜೀವನ ತಿಳಿಯದ ಮಾಯೆ
**********ರಚನೆ*******
ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment