ಭಾವ ಗೀತೆ -41

 




  🌹 ದೇಹವು ಮಣ್ಣಾಗಲಿ🌹


ದೇಹವು ಮಣ್ಣಾಗಲಿ 

ಕನ್ನಡದ ನಾಡು ನುಡಿಗೆ 

ಉಸಿರು ಹಸಿರಾಗಲಿ

ನಮ್ಮ ಕನ್ನಡ ಬೀಡಿಗೆ // ಪಲ್ಲವಿ//


ಅಕ್ಷರಗಳು ನುಡಿದಿವೆ

ಮಾಧುರ್ಯದ ಮುತ್ತು

ರನ್ನ ಪಂಪ ಜನ್ನರಾ

ಕಾವ್ಯವು ನಮ್ಮಯ ಸ್ವತ್ತು


ಕುವೆಂಪು ಮಾಸ್ತಿ ಬೆಂದ್ರೆ

ನಮ್ಮ ಕನ್ನಡ ಕಿರೀಟ

ಹಾರಾಡಲಿ ಕರ್ನಾಟಕದಲ್ಲಿ

ಕನ್ನಡದ ಬಾವುಟ


ಮಂತ್ರ ವೇದ ಘೋಷಗಳು

ನಮ್ಮಯ ಮಾತಾಗಲಿ

ಅಂಬೆಗಾಲು ಇಡುವ ಮಗು

ಜ್ಞಾನದ ಕುಡಿಯಾಗಲಿ


ಕನ್ನಡವೇ ನಮ್ಮ ಪ್ರೀತಿ ಪ್ರಾಣ

ಸೋತ ಮಳೆ ತಂದ ವರುಣ

ಮೇಲು-ಕೀಳು ಭೇದವಿಲ್ಲ

ಹಿರಿಯ ಕಿರಿಯ ಒಂದೇ ಎಲ್ಲ



*******ರಚನೆ*********

ಡಾ.ಚಂದ್ರಶೇಖರ್ ಸಿ.ಹೆಚ್

Comments