ಭಾವ ಗೀತೆ -56
🌹 ಬಾಳ ಬಂಡಿ ಸಂತೆ🌹
ಬಾಳ ಬಂಡಿಯ ಸಂತೆಯಲ್ಲಿ
ನೋವುಗಳು ನೂರೆಂಟು
ನೆಮ್ಮದಿ ಹುಡುಕುತ ಮನೆಯಲ್ಲಿ
ದಿಂಬಿಗೂ ಗೊರಕೆ ಉಂಟು //ಪಲ್ಲವಿ//
ಬದುಕಿನ ಗಂಡ ಗುಂಡಿಯಲ್ಲಿ
ತೊಳೆ ಕಲ್ಮಶ ಪೊರಕೆ ಇಡಿದು
ನಿಜ ಜೀವನದ ನಡಿಗೆಯಲ್ಲಿ
ಕಂಡೆ ಬಾಚಿ ದೋಚಿದವರನ್ನು ಅಳೆದು
ಕಣ್ಣಿನ ನೋಟಕ್ಕೆ ಮಾವು ಉದುರೀತೆ
ಮಂತ್ರ ತಂತ್ರಕ್ಕೆ ದೇವರ ದರ್ಶನವಾಯಿತೆ
ನೂಕುವಿರೇಕೆ ಟಿವಿಯ ನೋಡುತ ಕಾಲ
ಕಳೆದ ಸಮಯ ಮತ್ತೆ ಜಯ ತರುವುದಿಲ್ಲ
ಬಾಳ ನೋಗಕೆ ಹೆಗಲು ಕೊಡು
ಹೆಜ್ಜೆ ಹೆಜ್ಜೆಯ ತುಸು ಮುಂದಾನೀಡು
ಭಯಜಯಗಳನ್ನು ನೂಕಿ ಬಿಡು
ನಾಚಿಕೆಯ ಲಜ್ಜೆ ತೊರೆದು ಬಿಡು
ನ್ಯಾಯಕ್ಕೆ ಮೋಡಗಳು ಡಿಕ್ಕಿ ಹೊಡೆದು
ನಮ್ಮ ಧ್ವನಿಯು ಸಿಡಿಲಂತೆ ಸಿಡಿದು
ಮಳೆ ಹನಿಗಳು ಉದರಲ್ಲಿ ಪ್ರೀತಿ ತಿಳಿದು
ಬದುಕು ಹಸಿರಾಗಲಿ ಕಷ್ಟವ ತೊಳೆದು
ಹಾಗಿದ್ದು ಹಾಗಿ ಹೋಯಿತು ಚಿಂತೆ ಏಕೆ
ನಾಳೆಯೂ ಬರುವುದು ಆತಂಕವೆಕೆ
ನೆನ್ನೆ ನಾಳೆಗಳ ಮಧ್ಯೆ ಗೋಣಗಾಟವೇಕೆ
ಮನಸ್ಸು ಇದ್ದರೆ ಜೀವನ ಖುಷಿಯ ನೌಕೆ
***********ರಚನೆ*********
ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment