ಭಾವಗೀತೆ- 50

 




  🌹 ಕಂಗೊಳಿಸುವ ನೈದಿಲೆ🌹


ಮಾಮರ ಚಿಗುರದೆ

ಕೂಗಿತೆಗೆ ಕೋಗಿಲೆ

ಕೆಸರಿನಲ್ಲಿ ಕಂಗೊಳಿಸಿ

ನಕ್ಕಿದೆ ಸುಂದರ ನೈದಿಲೆ. //ಪಲ್ಲವಿ//


ಕೊಲ್ಲುವ ಭಯ ತಾಕಿದಾಗ

ಓಡುತಿಹುದು ಜಿಂಕೆಯು

ಮರದಿಂದ ಮರಕೆ

ಜಿಗಿಯುತಿಹುದು ಮಂಗವು


ರೆಕ್ಕೆ ಮುರಿದ ಹಕ್ಕಿ

ಹೇಗೆ ಮುಗಿಲಿಗೆ ಹಾರಿತು

ಮಳೆಯು ಹನೀ ಮುತ್ತಿಕ್ಕದೆ

ಹಸಿರು ಎಲ್ಲಿ ಚಿಗುರಿತು


ಗೊಮ್ಮಟ ಹಾಗೂ ಗುಮ್ಮಟವ ನೋಡಿ

ಶಾಂತಿ ಆಯ್ತು ಮನವು

ರಾಜರುಗಳು ಕಡು ಚರಿತ್ರೆ ಕೇಳಿ

ಸಿಡಿಯಿತೆಕೆ ತನವು 


ಕವಿತೆ  ನನ್ನ ಸೆಳೆದಾಗ

ಹೃದಯ ಹಾಡು ಹಾಡಿದೆ

ಕವಿತೆ ಬರೆದ ಕವಿಯನ್ನು 

 ಮನವು ತುಂಬಾ ಹೊಗಳಿದೆ


*********ರಚನೆ ********

ಡಾ. ಚಂದ್ರಶೇಖರ್ ಸಿ. ಹೆ ಚ್

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa