ಭಾವ ಗೀತೆ -54
🌹 ಬಿಲ್ಲಿನ ಬಾಣ🌹
ಮನದಲ್ಲಿ ಬಿಲ್ಲಿನ ಬಾಣ
ನಡೆದಿದೆ ನೋವಿನ ಕದನ
ತನುವಲ್ಲಿ ಹೂವಿನ ಬಾಣ
ಕುಣಿಯುವ ಬಾರ ಮದನ //ಪಲ್ಲವಿ//
ಒತ್ತಿದೆ ಓಟು ನಾನು
ನೋಟು ಕೊಟ್ಟ ನೀನು
ಬ್ಯಾಲೆಟ್ ವೋಟನ್ನು ಕುಕ್ಕಿ
ಬುಲೆಟ್ ಎದೆಯ ಹೋಕ್ಕಿ
ಜೀವನ ಕನಸಿನ ಬ್ರಾಂತಿ
ಬದುಕಲಿ ನೂರೆಂಟು ಕ್ರಾಂತಿ
ಅಕ್ಷರವ ಬರೆಯಿತು ನೆತ್ತರು
ಯಾರು ನಿನ್ನ ಹೊತ್ತವರು ಹೆತ್ತರು
ಮೌನವು ಇಂದು ಮಾತನಾಡಿದೆ
ಮಾತು ಏಕೋ ಮರೆತು ಹೋಗಿದೆ
ಗುಂಡಿಗೆ ಗಟ್ಟಿ ಇದ್ದರೆ ಜೀವ
ಕಾಲವು ಕಾಣದ ವಿಷದ ಹಾವ
ಜೀವನ ಸುಖ ದುಃಖದ ಕದನ
ಮಾಡು ಮೋಸದ ದಮನ
ಹೆಸರು ಇದ್ದರೆ ವಿಳಾಸ
ಬದುಕಲಿ ಮರೆಯಾದ ವಿಲಾಸ
*********ರಚನೆ**********
ಡಾ. ಚಂದ್ರಶೇಖರ್ ಸಿ .ಹೆಚ್
Comments
Post a Comment