ಭಾವಗೀತೆ -51

 



 🌹 ಕನ್ನಡವೇ ನಮ್ಮಮ್ಮ🌹


ಕನ್ನಡಮ್ಮನ ಕರುಳಿನ 

ಓ ಮುದ್ದಿನ ಕುಡಿ

ಕನ್ನಡ ಮಾತಾಡುವ

ಮುದ್ದು ಗಿಳಿಯಾಗಲಿ ನುಡಿ. //ಪಲ್ಲವಿ//


ಬಸವಣ್ಣ ಸರ್ವಜ್ಞ ಅಕ್ಕಮಹಾದೇವಿ

ವಚನಗಳು ಮನೆ ಬೆಳಗುತಾ 

ಅಜ್ಞಾನದ ಅಂಧಕಾರವಾ ತೊಳೆಯುತ

ಹಚ್ಚಿವೆ ನಮ್ಮ ಮನದ ಹಣತೆ


ಚಾಲುಕ್ಯ ಹೊಯ್ಸಳ ಕದಂಬ

ರಾಜರುಗಳು ಆಳಿದರು ನಮ್ಮನ್ನು

ನಾಲ್ವಡಿ ಕೃಷ್ಣರಾಜರು

ಕಟ್ಟಿದರು ಕನ್ನಂಬಾಡಿಯನ್ನು


ಜಗದಲ್ಲೆಡೆ ಕುಣಿಯಲಿ ನಲಿಯಲಿ

ನಮ್ಮಯ ಕನ್ನಡ ನುಡಿಯು

ಸಾಗುವ ನೋವು ಉಳಿಸುತ

ಬೆಳೆಸಿದ ಸಿಹಿ ಕನ್ನಡ ಭಾಷೆಯು


*******ರಚನೆ*********

ಡಾ. ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa