ಭಾವಗೀತೆ -48
🌹 ಕನ್ನಡಕ್ಕೆ ಕೈಮುಗಿದು ಬನ್ನಿ,🌹
ಕನ್ನಡದ ಬಂಧುಗಳೇ ಕೈಮುಗಿದು ಬನ್ನಿ
ಕನ್ನಡಾಂಬೆಯ ಪಾದಚರಣಕೆ ನಮಿಸುವ ಬನ್ನಿ
ನಾಡು ನುಡಿಯ ವನಜಲವು ನಾಡಿನ ಸ್ವರ್ಗ
ಸಹ್ಯಾದ್ರಿಯಾ ಮಲೆಗಳಲ್ಲಿ ನಗುತಿದೆ ನಿಸರ್ಗ. //ಪಲ್ಲವಿ//
ಕನ್ನಡ ಬೀಡಿನಲ್ಲಿ ಕವಿಗಳದೆ ಹಾಡು
ಸಂಗೀತದ ನಾದವ ಗುನುಗುತಿದೆ ನೋಡು
ಶಾರದೆಯ ಬೀಡು ನಮ್ಮ ಶೃಂಗೇರಿಯಲ್ಲಿ
ವಿದ್ಯಾದೇವಿಯ ನೆಲೆ ಭದ್ರಾ ನದಿ ದಡದಲ್ಲಿ
ಮುತ್ತು ರತ್ನಗಳ ಹಳೆದು ತೂಗಿದ ನಾಡು ಕನ್ನಡ
ಶಿಲ್ಪ ಕಲೆಗಳ ತವರು ಬೀಡು ಈ ಸಿರಿಗನ್ನಡ
ಭಾಷೆಗಳ ಭೇದ ಮೀರಿದ ನೆಲೆ ಕನ್ನಡ
ಶಾಂತಿ ಪ್ರಿಯರ ತನು ಮನವು ಕನ್ನಡ
ನಾಡು ನುಡಿಯ ಕಟ್ಟಿ ಬಾಳೋಣ ಬನ್ನಿ
ಸಂಸ್ಕೃತಿಯ ಪ್ರತೀಕ ನಾವಾಗೋಣ ಬನ್ನಿ
ಮಾನವೀಯತೆ ಮೌಲ್ಯಗಳು ಅರಿಹೋಣ ಬನ್ನಿ
ಸರ್ವ ಜನಾಂಗದ ಶಾಂತಿಗೆ ಶ್ರಮಿಸೋಣ ಬನ್ನಿ
********ರಚನೆ *********
ಡಾ.ಚಂದ್ರಶೇಖರ್ ಸಿ.ಹೆಚ್
Comments
Post a Comment