ಭಾವ ಗೀತೆ -45
🌹 ನೇಸರ ಮೂಡಿ🌹
ಮೂಡಣದಾಗ ನೇಸರ
ಮೂಡಿ ಬಂದಾನೋ
ಪಡುವಣದಾಗ ಮುಳುಗಿ
ಬೆಟ್ಟದ ಹಿಂದೆ ಸರಿದಾನು. //ಪಲ್ಲವಿ//
ಹಾರುವಾ ಹಕ್ಕಿಗೆ ರೆಕ್ಕೆ ಬಂದು
ಆಕಾಶಕ್ಕೆ ಜಿಗಿದಾವ
ನದಿಗಳು ಜುಜುಳು ಎಂದು
ಕೂಗುತ ಓಡ್ಯಾವ
ಹಚ್ಚಾ ಹಸಿರಿನ ಪೈರು
ನೆಲಚಾಚಿ ಒದೆದೈತಿ
ಸಹ್ಯಾದ್ರಿಯ ಮಲೆಗಳು
ಕಾಡುಮೆಡಲಿ ತುಂಬೈತಿ
ಮೋಡದ ನರ್ತನಕ್ಕೆ
ಮಳೆಯೂ ಸುರಿದೈತಿ
ಎಲ್ಲೆಡೆ ಭತ್ತ ರಾಗಿಯ
ಪೈರು ಬೆಳೆದೈತಿ
ಆಗಸದಿ ನಕ್ಷತ್ರಗಳ
ಗೂಡು ಮಿನುಗೈತಿ
ಬೆಳದಿಂಗಳ ಚಂದ್ರನು
ಬೆಳ್ಳಗೆ ನಗುತೈತಿ
ಚುಕ್ಕಿ ತಾರೆಗಳ ಮಧ್ಯೆ
ಉಲ್ಕೆ ಉರಿದು ಬಿದ್ದೈತಿ
ಕತ್ತಲ ಕೋಣೆಯೊಳಗೆ ಹಚ್ಚಿದ
ಹಣತೆ ನಗುತೈತಿ
********ರಚನೆ********
ಡಾ.ಚಂದ್ರಶೇಖರ್ ಸಿ.ಹೆ ಚ್
Comments
Post a Comment