ಭಾವ ಗೀತೆ -47
🌹 ಕನ್ನಡ ಕಲರವ🌹
ಜುಳು ಜುಳು ಎಂದು ಓಡುವ ನದಿಯು
ಕನ್ನಡವನ್ನು ಹಾಡುತಿದೆ
ಜೋಗದ ಸಿರಿ ಬೆಳಕಿನಲ್ಲಿ ಸಹ್ಯಾದ್ರಿ ಮಲೆಯ
ಶರಾವತಿ ಕನ್ನಡದಲ್ಲಿ ಧುಮುಕುತಿದೆ // ಪಲ್ಲವಿ//
ಕೋಗಿಲೆ ಮಾಮರದಿ ಕೂತು ಕುಹು ಕುಹು
ಕನ್ನಡ ಸ್ವರ ಕೂಗುತಿದೆ
ಚಿವ್ ಚೀವ್ ಎನ್ನುವ ಹಕ್ಕಿಯು
ಕನ್ನಡ ನುಡಿ ನುಡಿಯುತಿದೆ
ಹಸುವಿನ ಮುದ್ದಿನ ಕರು ಅಂಬಾ ಎನುತ
ಕನ್ನಡವನು ಕೊಸರುತಿದೆ
ಅಂಬೆಗಾಲಿಡುವ ಮಗು ಅಮ್ಮ ಎನ್ನುತ
ಕನ್ನಡವನ್ನು ಕೂಗುತಿದೆ
ಕಾಕಾ ಎನ್ನುವ ಕಾಗೆಯೂ ಕೂಡ
ಕನ್ನಡ ಕಾಗುಣಿತ ಹೇಳುತಿದೆ
ಸಿಹಿ ಜೇನಿನ ಜೇನನೊಣದಲಿ
ಕನ್ನಡದ ಸಿಹಿ ಇರುತಿದೆ
ಬೀಸುವ ತಂಗಾಳಿಯು ಸುಯ್ಯಾ ಎನ್ನುತ
ಸುಂಟರಗಾಳಿ ಆಗಿದೆ
ಬೆಟ್ಟಗುಡ್ಡದ ಬಯಲುಗಳು
ಕನ್ನಡ ಕನ್ನಡ ಎನ್ನುತ್ತಿದೆ
ಎಲ್ಲಿದೆ ಕನ್ನಡಕ್ಕೆ ಸರಿಸಾಟಿ
ನಮ್ಮದೇ ಆ ಕನ್ನಡ ಮೇಟಿ
*********ರಚನೆ ********
ಡಾ. ಚಂದ್ರಶೇಖರ್ ಸಿ.ಹೆಚ್
ಸೊಗಸಾಗಿದೆ
ReplyDelete