ಭಾವ ಗೀತೆ -72
🌹🌹ಮಳೆ ಹನಿ🌹🌹
ಮಳೆಯಾ ಹನಿಯೊಂದು
ಮನವ ತಾಕಿ ಕಣ್ಣಿರಾಗಿದೆ
ಪ್ರೀತಿಯ ಬೆಸುಗೆಯು
ಹೃದಯವ ತಾಕಿ
ನಿನ್ನ ಕೂಗಿ ಕರೆದಿದೆ
ಹಸಿರು ಎಲೆಯ ಮೇಲೆ
ಸ್ವಾತಿ ಮುತ್ತೊಂದು
ತಬ್ಬಿ ಕೂತಿದೆ
ನನ್ನ ನಿನ್ನ ಬೆಸುಗೆ
ಅಮರ ಕಾವ್ಯದ
ಕತೆಯ ಹೇಳಿದೆ
ಓಡುವ ಮೋಡಕೆ
ಮೊಡವು ತಾಗಿ
ಮಳೆ ಹನಿ ಸುರಿದಿದೆ
ನಿನ್ನ ಬಂಧನದಲ್ಲಿ
ನನ್ನ ಬದುಕು
ಬಿಗಿದಪ್ಪಿದೆ
ಚೆಲುವೆ ನೀನು
ಕಾಡುವೆ ಏಕೆ
ಕನಸ್ಸಿಗೆ ಸುಂಕವ
ಕಟ್ಟಬೇಕೆ
ನಿನ್ನ ಮಡಿಲಲಿ
ಜಾರುವೆ ನಾನು
ಮೋಡದ ಮಳೆ ಹನಿ
ಸೆರೆ ಇಡಿಯಲೆ ಏನು
*********ರಚನೆ**********
ಡಾ. ಚಂದ್ರಶೇಖರ್ ಸಿ.ಹೆಚ್
👍
ReplyDelete