Posts

Showing posts from October, 2023

ಭಾವ ಗೀತೆ -40

Image
      🌹 ಕನ್ನಡ ನುಡಿ ನಮನ🌹 ತಿರುಪತಿಯಲ್ಲಿ ತಿಮ್ಮಪ್ಪನ ವೈಕುಂಠ ಕರ್ನಾಟಕದಲ್ಲಿ ಕನ್ನಡ ನುಡಿ ಸವಿಕಂಠ ಬಸವಣ್ಣನವರು ಸಾರಿದರು ಕಾಯಕವೇ ಕೈಲಾಸ ದ್ವೇಷ ಅಸೂಯೆ ಮನೆ ಮಾಡಿರೆ ಎಲ್ಲಿಹುದು ಮಂದಹಾಸ //ಪಲ್ಲವಿ// ಕನ್ನಡ ಕನ್ನಡ ಕನ್ನಡ ವೆನವುದೇ ಶಕ್ತಿ ಕನ್ನಡಮ್ಮನ ಪಾದಕ್ಕೆ ಕೈಮುಗಿ ಸಿಗುವುದು ಮುಕ್ತಿ ಪೂಜಿಸು ಕನ್ನಡಮ್ಮನ ತೋರಿ ನೀ ಭಕ್ತಿ ಕನ್ನಡಾಂಬೆ ಕೊಡುವಳು ನಿನಗೆ ಮೆರೆವಾ ಯುಕ್ತಿ ರಾಜರು ಕವಿಗಳು ದಾಸರು ಸಂತರು ಹುಟ್ಟಿ ಬೆಳೆದ ನಾಡು ಕನ್ನಡ ರನ್ನ ಪಂಪ ಲಕ್ಷ್ಮೀಶ ಜನ್ನಾರ ಸಾಹಿತ್ಯದ ಒನಲು ಕನ್ನಡ ನಮ್ಮಯ ನುಡಿಗೆ ಎಲ್ಲಿದೆ ಮಿಗಿಲು ಸಿರಿಯ ನಾಡಿಗೆ ಏತಕೆ ದಿಗಿಲು ವೈಜ್ಞಾನಿಕವಾಗಿ ನಾಡು ಮುಂದಿರಲು ಅಜ್ಞಾನದ ಕೇಡು ಹಿಂದೆ ಸರಿದಿರಲು ಕೃಷಿ ಕೈಗಾರಿಕೆ ಅಣೆಕಟ್ಟುಗಳು ನಾಡಲ್ಲಿ ತುಂಬಿ ಜ್ಞಾನವ ಬೆಳೆದಿರಲು ಏತಕೆ ನಮಗೆ ಭಯವು ಕನ್ನಡ ನಾಡ ನುಡಿಯು ನಮ್ಮಯ ಗೆಲುವು ********ರಚನೆ******** ಡಾ. ಚಂದ್ರಶೇಖರ್ ಸಿ.ಹೆಚ್

ಭಾವ ಗೀತೆ -39

Image
  🌹 ಭಾರತವೆ ಮಂದಿರ🌹 ಕನ್ನಡ ನುಡಿಯ ನುಡಿವ ಕರ್ನಾಟಕವು ಸುಂದರ ಭಾರತದ ಹೆಮ್ಮೆಯ ಪ್ರತಿಕ ನಮ್ಮ ರಾಮ ಮಂದಿರ. //ಪಲ್ಲವಿ)// ವಿಶ್ವದೆಲ್ಲಡೆ ಭಾರತದ ದೇವರುಗಳ ಗುಡಿ ಗೋಪುರ ದೇವನೊಬ್ಬ ನಾಮ ಹಲವು ಎಂಬ ಪದವೇ ನಮ್ಮ ಮಂತ್ರ ಭಾಷೆಗಳು ಹಲವು ಇದೇ ಗೆಲುವು ಜಾತಿಗಳು ನೂರು ಬಿಟ್ಟಿವೆ ಬೇರು ಭವ್ಯ ನಾಡು ಭಾರತವು ಸುಂದರ ನಾಡು ನುಡಿಗಳು ಹಬ್ಬಿವೆ ಜಗದ ವಿಸ್ತಾರ ಮನುಜ ಮತ ವಿಶ್ವಪಥ ಭಾರತದ ಒಲವ ನಿಲುವು ಪ್ರಜಾಪ್ರಭುತ್ವದ ಮೆರೆವು ಭಾರತದ ಜನರ ಗೆಲುವು ತಾಯಿ ಭಾರತಾಂಬೆಯ ಕರುಳ ಕುಡಿಗಳು ನಾವು ದೇಶಕ್ಕಾಗಿ ಭೇದ ಭಾವ ಎಂದು ಮಾಡದ ಬಾಳುವೆವು ಮಾತು ಒಂದು ಮುತ್ತಂತೆ  ನುಡಿವ ಭಾಷೆ ತುತ್ತಂತೆ ಮಾತಿಗಿಲ್ಲಿ ಬೆಲೆ ಉಂಟು ಅನ್ಯಾಯಕಿಲ್ಲಿ ಸಾವುಂಟು ಜೈ ಜೈ ಭಾರತಾಂಬೆ ಎನಲು ತುಂಬುವುದು ತಾಯಿ ಮಡಿಲು ನಗುತನಲಿವ ತಾಯಿಯ ನಲಿಯುವುದು ಒಡಲು ವೀರ ಯೋಧರಿಗಾಗಿ ನಮ್ಮ ಕಣ್ಣೀರು ದೇಶ ಕಾಯುವ ಯೋಧನಿಗೆ ಸಿಗಲಿ ಸವಿ ನೀರು ನೆತ್ತರ ಹರಿದರು ಸಾವೇ ಬಂದರೂ ದೇಶವೇ ನಮ್ಮ ಹೆಸರು ಉಸಿರು **********ರಚನೆ*******  ಡಾ.ಚಂದ್ರಶೇಖರ್ ಸಿ.ಹೆ ಚ್

ಭಾವ ಗೀತೆ -38

Image
       🌹 ಕನ್ನಡದ ಮರ🌹 ಕನ್ನಡವೆಂಬ ಅಲದ ಮರವು ಸುಂಟರಗಾಳಿಗೆ ನಲುಗೀತೆ ಕನ್ನಡ ತಾಯಿಯ ಎದೆ ಹಾಲುಂಡು ಮಕ್ಕಳು ಮರದಡಿ ಮಲಗೀವೆ //ಪಲ್ಲವಿ// ಅಮ್ಮನ ತುತ್ತು ಅಮೃತದಂತೆ ಸಂಜೀವಿನಿಯಾಗಿ ತಾಗಿತೆ ನೂರು ಮಂದಿಯ ಹಸಿವು ತಿನ್ನುವ ಅನ್ನವ ಬಯಸಿತೆ ಉಂಡಾ ಮನೆಗೆ ದ್ರೋಹವು ತರವೇ ಒಂದೇ ತಟ್ಟೆಯಲ್ಲಿ ತಿಂದು ಚಾಕು ಇರಿವುದು ಒಲವೆ ನಾಟಕವಾಡತ ವಂಚಿಹರು ಜನರು ನರಿಯಂತೆ ಧೈರ್ಯದಿ ಬಾಳಲಿ ಮುಂದೆ ಸಾಗು ನೀ ಹುಲಿಯಂತೆ ಕಾಯಕವನ್ನು ಮಾಡದ ಮನುಜನಿಗೆ ಅಂಗೈ ಲಿಂಗವ ಹಿಡಿದರೆ ಸಿಗುವುದೇ ಕೈಲಾಸ ಕನ್ನಡವನ್ನು ನುಡಿಯದ ಮನುಜಗೆ ಕನ್ನಡಾಂಬೆ ಕೊಡುತಿಹಳು ಕೈಕಾಸ ಹಣದ ಕೊರತೆ ನೀಗಲೂ ಬೇಕು ನಮಗೆ ಇಂಗ್ಲೀಷ ಚಿನ್ನದ ಗಡಿಗೆಯಲ್ಲಿ ತುಂಬಿದರು ಕನ್ನಡ ಬಾರದ ಜನರ ಮಾತು ಕಂಗ್ಲೀಷು *********ರಚನೆ******* ಡಾ.ಚಂದ್ರಶೇಖರ್ ಸಿ.ಹೆಚ್

ಭಾವ ಗೀತೆ -37

Image
  🌹 ನೋಡಿರಣ್ಣ ಕನ್ನಡದ ಜಾತ್ರೆ🌹 ಹೊರಟಿಹರು ನಮ್ಮವರು ಮಾಡಲು ಯಾತ್ರೆಯ ನೋಡಿರಣ್ಣ ನಮ್ಮ ಕನ್ನಡಾಂಬೆಯ ಜಾತ್ರೆಯ ಸಾಗಿದೆ ನಮ್ಮಯ ಕನ್ನಡದ ತೇರು ಕನ್ನಡಿಗರ ಅಭಿಮಾನವು ಬಹಳ ಜೋರು //ಪಲ್ಲವಿ// ಜ್ಞಾನಪೀಠಗಳು ಎಂಟು ನಮ್ಮ ಕನ್ನಡದ ನಂಟು ಕವಿ ಸಾಹಿತಿಗಳು ಕನ್ನಡದಲ್ಲಿ ಬಹಳ ಉಂಟು ಕವಿತೆಗಳು ಬಿಡಿಸಿವೆ ಕನ್ನಡದ ಚಿತ್ರ ಸುಂದರ ಸೊಗಸಿನ ನಾಡು ಇದು ಮಿತ್ರ ಕನ್ನಡ ಕಟ್ಟಲು ಸಂಸ್ಕೃತ ಮುಟ್ಟಲು ಬೆಂದವರು ಎಷ್ಟೋ ಆಂಗ್ಲರ ದಬ್ಬಾಳಿಕೆಗೆ ನೆತ್ತರು ಕೊಟ್ಟವರು ಎಷ್ಟೋ ಹೊರದೇಶಗಳ  ನಾಣ್ಯಕ್ಕೆ ನಾಟ್ಯಾಕೆ ಕುಣಿದಿದೇ ಕನ್ನಡವು ಸಂಸ್ಕೃತಿ ಇತಿಹಾಸವು ಮರೆತು ಸೊರಗಿದೆ ಈ ಜಗವು ಆಟೋರಿಕ್ಷಗಳ ಮೇಲೆ ಬರೆದದಿಹುದು  ಕನ್ನಡದ ಕವಿಬರಹ ಹುಡುಕುತ ಹೊರಟರೆ, ಬೆಂಗಳೂರಿನಲ್ಲಿ  ಕನ್ನಡಕ್ಕೆ ವಿರಹ ಕನ್ನಡ ಉಳಿಸಿರಿ ಕನ್ನಡ ಬೆಳಸಿರಿ  ಕನ್ನಡ ನಾಡಲ್ಲಿ ಹುಡುಕಲು ಬೇಡಿರಿ ಮುಂದೆ  ಕನ್ನಡವನ್ನು  ಶಾಸನಗಳಲ್ಲಿ ********ರಚನೆ*********  ಡಾ. ಚಂದ್ರಶೇಖರ್ ಸಿ.ಹೆಚ್

ಭಾವ ಗೀತೆ -36

Image
       🌹 ಕನ್ನಡದ ಹಣತೆ🌹 ಒತ್ತಿದ ಹಣತೆಯು ಹಾರುತಿದೆ ನೋಡು ಕನ್ನಡಿಗ ತಾಯ್ನಾಡು ಕತ್ತಲಲ್ಲಿ ಸೋರಗುತಿದೆ ನೀಡು ಬೆಳಕಿಗ. // ಪಲ್ಲವಿ// ಖಾಲಿ ಹಾಳೆಯ ಪುಟದಲ್ಲಿ ಇತಿಹಾಸದ ನೆನಪು ಆಳಿ ಹೋದವರ ನಡೆಯಲ್ಲಿ ಪುಟವಿಗ ಹೊಳಪು ಹರಿವ ಕಾವೇರಿಯ ನೊಂದು ನೆಮ್ಮದಿ ಹುಡುಕಿಹಳು ನಮ್ಮಯ ಮನವ ಇಂಗಿತ ಕಂಡು ಪಕ್ಕದ ರಾಜ್ಯಕ್ಕೆ ಹೊರಟಿಹಳು ಕನ್ನಡ ನೆಲದಲ್ಲಿ ಕನ್ನಡವನ್ನು ಹುಡುಕಬೇಕು ನಾವು ಇಂಗ್ಲೀಷ್ ಹಿಂದಿ ಬೇರೆ ಭಾಷೆಗಳ ಮಧ್ಯೆ ಕನ್ನಡಕ್ಕೆ ಸಾವು ಕನ್ನಡಾಂಬೆಯ ಬಾವುಟ ಹಾರಲಿ ಕನ್ನಡ ನೆಲದಲ್ಲಿ ಕನ್ನಡಿಗರ ಎಲ್ಲರೂ ಕನ್ನಡ ಬಳಸಲಿ ಕನ್ನಡಾಂಬೆಯ ಋಣದಲ್ಲಿ ********ರಚನೆ********  ಡಾ.ಚಂದ್ರಶೇಖರ್ ಸಿ.ಹೆಚ್

ಭಾವ ಗೀತೆ -35

Image
      🌹 ಕನ್ನಡ ಕೋಗಿಲೆ🌹 ಮಾಮರ ಚಿಗುರಿದೆ ಕೋಗಿಲೆ ಕೂಗಿದೆ ವಸಂತ ಮಾಸದಲ್ಲಿ ನವಿಲುಗರಿ ಬಿಚ್ಚಿ ಕುಣಿದಿದೆ ಕನ್ನಡ ನಾಡಿನಲ್ಲಿ  //ಪಲ್ಲವಿ// ಅರಳುವ ಹೂವಿಗೆ ಹೃದಯವು ಮಿಡಿದಿದೆ ಕನ್ನಡ ಭಾವದಲ್ಲಿ ನಗುವ ಮೊಗ್ಗು ದುಂಬಿಯ ಮುತ್ತಿಗೆ ನಾಚಿದೆ ಒಲುಮೆಯಲ್ಲಿ ನೀಲಿಯ ಗಗನದಿ ಮೋಡದ ಚುಂಬನಕೆ ಅರಳಿದೆ ಮೈಮನವು ಸಹ್ಯಾದ್ರಿ ತಪ್ಪಲಲಿ ಮಳೆ ಸುರಿದಿದೆ ಭಾನು ಹಗುರಾಗಿ ಬೆಳದಿಂಗಳ ಚಂದ್ರನ ಹೊಳಪು ಕಂಡು ನಾಚಿದಳು ರತಿಯು ಅರಳಿದ ಕೆಂದಾವರೆಯು ನೀರಲ್ಲಿ ಮಿಂದು ಬಾಗಿದಳು ಕೆಸರಾಗಿ ಕನ್ನಡ ಮರೆಸಲು ಕವನವು ಬರೆದೆ ನಾಡು ನುಡಿಯ ಸೊಬಗ ಬಣ್ಣಿಹೆ ಹೃದಯದ ಮಾತಿಗೆ ಪದಗಳ ಹೂಡಿಹೆ ಕವಿತೆ ರಾರಾಜಿಸಲಿ *********ರಚನೆ ******* ಡಾ. ಚಂದ್ರಶೇಖರ್ ಸಿ.ಹೆಚ್

ಭಾವ ಗೀತೆ -34

Image
         🌹ಕನ್ನಡ ನುಡಿ 🌹 ಕನ್ನಡ ಒಂದು ಅರಳುವ ನುಡಿಮುತ್ತು ಬಯಸಿ ಬಂದವಗೆ ನೀಡುವುದು ಸಿಹಿತುತ್ತು ಕನ್ನಡವೆನ್ನುಲು ಕುಣಿಯುವುದು ಈ ದೇಹ ಕನ್ನಡ ನುಡಿಯೊ ತೀರಿಸುವುದು ಸಂಗೀತದ ದಾಹ  //ಪಲ್ಲವಿ// ಕನ್ನಡ ಪದವು ನಮ್ಮ ಉಸಿರಿನ ಸೆಲೆ ಬಯಸಿ ಬಂದವನಿಗೆ ನೀಡುವುದು ನೆಲೆ ಕನ್ನಡ ಭಾಷೆ ನಾಡು ಬೀಡು ಸ್ವರ್ಗ ಕಲಿತು ಬಾಳುವವಗೆ ತೋರುವುದು ಮಾರ್ಗ ಕವಿಗಳು ಋಷಿಗಳು ನುಡಿದ ನುಡಿ ಕನ್ನಡ ಹೃದಯದಿ ಅರಳುವ ಮಾತು ಸವಿಗನ್ನಡ ಗಾನ ಕೋಗಿಲೆಗಳ ಕಂಠದಿ ನುಡಿ ಕನ್ನಡ ಕೇಳಲು ಮನ ಸೋಲುವುದು ನಾದ ಸಿರಿಗನ್ನಡ ದೈವದ ಸ್ವರ್ಗ ಬಾಳಿನ ಮಾರ್ಗವೇ ಕನ್ನಡ ಕಾಡಿನ ತವರು ನದಿ ಜರಿಗಳ ನಾಡು ಕನ್ನಡ ಭಾಷೆಗಳ ನಡುವೆ ಬೆಳೆದು ನಿಂತ ಸಿಹಿ ಕನ್ನಡ ಮನಮನದಲಿ ಮಿಡಿದು ಚಿಗುರಿದ ಕನ್ನಡ ಹುಟ್ಟಿದ ಊರು ಮೆಟ್ಟಿದ ನಾಡೆ ಕನ್ನಡ ರಾಜರುಗಳು ಆಳಿದ ಶಿಲ್ಪ ಕಲೆಯ ನೆಲೆ ಕನ್ನಡ ಕುಡಿವ ಜಲಕೆ ಚಿನ್ನ ಬೆಳವ ನೆಲಕ್ಕೆ ಸರಿಸಾಟಿ ಇಲ್ಲದ ನಾಡು ನುಡಿಯೇ  ಕನ್ನಡ *********ರಚನೆ ******** ಡಾ. ಚಂದ್ರಶೇಖರ್ ಸಿ. ಹೆಚ್

ಭಾವ ಗೀತೆ -33

Image
        🌹 ಕೆಸರಿನ ತಾವರೆ🌹 ಕೆಸರಲ್ಲಿ ಕೊಸರಿ ಮುದುಡಿದ ತಾವರೆ ಏನಿದು ನಿನ್ನಯ ಮೊಗವು ಅರಳಿ ನಗುವ ನಿನ್ನಯ ಬದುಕಿಗೆ ಯಾರಿಟ್ಟರು ತಿರುವು. //ಪಲ್ಲವಿ// ಸುವಾಸನೆ ಬೀರಿ ನಗುವ ಮಲ್ಲಿಗೆ ಮಾಸಿದೆ ನಿನ್ನ ಕಂಪು ನಿನ್ನ ಮುಡಿವ ಜೀವಕ್ಕೆ ನೀನೇ ಅರಳಿಸುವೆ ತಂಪು ಕೆಂಪು ಕೆನ್ನೆಯ ಓ ಗುಲಾಬಿ ಮುಳ್ಳಿನ ನಡುವೆ ನೀ. ಶಾರಭಿ ಮುಳ್ಳೊಂದು ನಿನ್ನ ಎದೆಯಲ್ಲಿ ಮೂಡಿಸಿತು ನಗುವ ಸುಂದರಕಾಂತಿ ಮರದ ಹಸಿರಲಿ ಸಂಪಿಗೆ ಕಂಪು ನನ್ನ ಹೃದಯ ಬಯಸಿದೆ ಇಂಪು ನಿನ್ನ ಮುಡಿವ ಮನದಲ್ಲಿ ಏನೋ ಆಸೆ ಸೌಂದರ್ಯಕ್ಕೆ ನೀನೇ ಸೊಗಸೆ ಭೂಮಿಯ ಸೀಳಿ ನುಗ್ಗಿದ ಬಿದಿರು ತಂದಿಹೆ ನೀನು ಇಳೆಗೆ ಅದಿರು ಬೆಳೆಯುವ ನನ್ನ ತಡೆಯುವರಾರು ಬೆಳೆಸಿದೆ ನೀನು ಅಕ್ಕಿಯ ತವರು ********ರಚನೆ ********* ಡಾ. ಚಂದ್ರಶೇಖರ್ ಸಿ .ಹೆಚ್

ಭಾವ ಗೀತೆ -32

Image
       🌹 ನನ್ನವಳ ಪೂಜೆ🌹 ಪೂಜೆಯ ಮಾಡಿ ಪಡೆದೆ ನಾನು ನನ್ನವಳ ಬೇಡಿದರು ಮತ್ತೆ ಸಿಗದ ಮಲ್ಲಿಗೆ ಅಂತವಳ //ಪಲ್ಲವಿ// ಕಣ್ಣ ರೆಪ್ಪೆಯ ಕಾಡಿಗೆಯಲ್ಲಿ ಮೋಹಕ ನೋಟ ಕೆಂಪು ಕೆನ್ನೆಯು ಹೇಳಿದೆ ಚಂದುಳ್ಳಿ ಮಾಟ ಮೈಮಾಟವ ನೋಡಿ ಬೆಳದಿಂಗಳ ಚಂದಿರ ನಕ್ಕಾನು ಬೆವರ ಹನಿಯ ಕಂಡು ಸೂರ್ಯನು ಸುಟ್ಟಾನು ಸಂಗೀತದ ಸ್ವರದ ಮಾತು ಕೇಳಲು ಇಂಪಂತೆ ಸೀರೆ ಸೆರಗಿನ ಗಾಳಿ ಬೀಸಿತು ತಂಪಂತೆ ಗೆಜ್ಜೆಯನಾದಕೆ ಹೆಜ್ಜೆಯೂ ಕುಣಿದಿದೆ ನವಿಲ್ಲಂತೆ ಮುಂಜಾನೆದ್ದು ನೋಡಲು ನನ್ನವಳು ಅಪ್ಸರೆಯಂತೆ ನಿನ್ನ ಸೊಬಗನು ಬಣ್ಣಿಸಲು ಪದಗಳು ನೂರೆಂಟು ಹುಡುಕುತ್ತಾ ಹೊರಟರೆ ಚಿಂತೆಗೆ ಉತ್ತರ ಎಲ್ಲುಂಟು **********ರಚನೆ********  ಡಾ. ಚಂದ್ರಶೇಖರ್ ಸಿ ಹೆಚ್

ಭಾವಗೀತೆ -31

Image
  🌹ದಮ್ಮಯ್ಯ ಅಂತೀನೀ 🌹 ದಮ್ಮಯ್ಯ ಏನುತಿನಿ ಬಿಡು ನೀನು ಅಮ್ಮ್ಮಯ್ಯ ನಕ್ಕರೆ ನಗಲಿ ನನ್ನವಳ ಮೊಗವು // ಪಲ್ಲವಿ// ಬೊಗಸೆಯ ತುಂಬಾ ನೊರೆ ಹಾಲು ಮೋಗೆದಿವ್ನಿ ಕುಡಿದು ಕುಣಿಯಲಿ  ನೋವಾ ಮರೆತೂ ಜಗವ  ಭೂ ಒಡಲ ರಮಿಸಿ ಕಾಡು ಕತ್ತಲೆ ಬೆಳೆದು ಹನಿ ನೀರು ಇಳೆಯನ್ನು ತೊಳೆದು ಹಸಿರು ಹುಡಿಸಯ್ತಿ ಹಸನ ಮಾಡಯ್ತಿ  ದಮ್ಮಯ್ಯ ಏನುತಿನಿ ಬಿಡು ನೀನು ಅಮ್ಮ್ಮಯ್ಯ ನಕ್ಕರೆ ನಗಲಿ ನನ್ನವಳ ಮೊಗವು ಮಾತೆಲ್ಲ ಮುತ್ತಾಗಿ ಹೋವಂತೆ  ಊದುರಲಿ ಮಲ್ಲಿಗೆಯೂ  ಮುಡಿಯೇರಿ ಕುಣಿಯಲಿ ಮನವು ಮಂದಹಾಸ ಬೀರಲಿ  ತೆನೆ ಕೊಯ್ಲು ಭತ್ತವು ರಾಗಿಯ  ಕಣ ತುಂಬಿ ಸುಗ್ಗಿಯ ಪಸಲು  ಮನೆತುಂಬೀ ಕಣಜವು ಬೆಳಗಿ ಸಂಕ್ರಾಂತಿ ಸಡಗರವ ತೋರಲಿ ದಮ್ಮಯ್ಯ ಏನುತಿನಿ ಬಿಡು ನೀನು ಅಮ್ಮ್ಮಯ್ಯ ನಕ್ಕರೆ ನಗಲಿ ನನ್ನವಳ ಮೊಗವು *********ರಚನೆ*********       ಡಾ.ಚಂದ್ರಶೇಖರ್ ಸಿ.ಹೆಚ್ 

ಭಾವ ಗೀತೆ -30

Image
  🌹 ಕವಿತೆಗಳ ಪುಸ್ತಕ🌹 ಬರೆದ ಕವಿತೆಗಳ ಪುಸ್ತಕದ ಉರಣ ನಿನ್ನ ಕಣ್ಣಿನ ನೋಟ ಬಾಳಿನ ತೋರಣ ನನ್ನೆದೆಯ ಮೇಲೆ ಗೀಚಿದೆ ನಿನ್ನ ಅಚ್ಚೆ ನನ್ನುಸಿರ ಮರೆಸಿ ಹಿಡಿಸಿತು ನಿನ್ನ ಕೆನ್ನೆಯ ಮಚ್ಚೆ // ಪಲ್ಲವಿ// ನೂರು ಹಾಡು ಬಂದರೇನು ಹೋದರೇನು ನಿನ್ನ ಮಾತು ತಾನೆ ನನ್ನ ಕವನ ನೂರು ನಾಟ್ಯವನ್ನು ನೋಡಿದರೆನು ನಿನ್ನ ನಾಟ್ಯಾಕೆ ಸೋತಿತು ನಯನ                ನಂಬು ಗೆಳತಿ ನಿನ್ನ   ನೋಡಿ ನಾ ಮರೆತೇ       ಬರೆಯಲೆಗೆ ಬಾಳ ಪಯಣದ ಭವ್ಯ ಕವಿತೆ ನೋಟದಲ್ಲಿ ಕೊಲ್ಲಬೇಡ ಮಾತಿನಲ್ಲಿ ಗೆಲ್ಲಬೇಡ ಓದು ಒಮ್ಮೆ ಮೌನದ ಕವಿತೆ ನನ್ನ ಎದೆಯ ಮೇಲೆ ನಿನ್ನ ಹೆಸರು ವನಿತೆ            ಪ್ರೀತಿ ಒಂದು ಗಾಯನ          ಮನಸು ಮಾಗಿದ ಹೂಬನ  ********ರಚನೆ ******** ಡಾ. ಚಂದ್ರಶೇಖರ್ ಸಿ ಹೆಚ್

ಭಾವ ಗೀತೆ -29

Image
        🌹 ನಿನ್ನ ಗುಳಿ ಕೆನ್ನೆ🌹 ಆ ನಿನ್ನ ಗುಳಿ ಬಿದ್ದ ಕೆನ್ನೆ ನೋಡಿ ಸುಳಿಯಲಿ ಬಿದ್ದು ನಾ ಸೊನ್ನೆ ಪ್ರೀತಿಯ ಕಡಲ ಆ ಗುಳಿಯಲಿ ಈಜಿ ಬದುಕಬಲ್ಲೆನೆ // ಪಲ್ಲವಿ// ನಿನ್ನ ಕಣ್ಣ ಕಡಲಲಿ ಮುಳುಗಿರುವೆ ಓ ನನ್ನ ಚಿನ್ನ ಆಳ ಹಗಲ ಅದರ ತಳ ಕಾಣುವುದೇ ನಾ ಆಗಲು ತಳಮಳ ಮೂಕನಾದೆ ನಿನ್ನ ಮೌನದ ಹಾಡಿಗೆ ಸಂಗೀತದ ಸ್ವರದ ಮಧುರ ಗಾನಕೆ ಜಗವ ಮರೆಸಿದೆ ಆ ನಿನ್ನ ಹಾಡು ನೀ ಇರದ ನನ್ನ ಬದುಕು ಒಂಟಿ ಪಾಡು ನೀ ಇರಲು ನೀನೇ ನನ್ನ ತಂಗುದಾಣ ಎಲ್ಲಿಗೆ ಮತ್ತೆ ಹೊರಡಲಿ ಮರು ಪ್ರಯಾಣ ಇಷ್ಟವಿಲ್ಲದೆ ಇದ್ದರೆ ಇರಿದುಬಿಡು ಇಲ್ಲ ನಿನ್ನೆ ಪ್ರೀತಿಸುವೆ ನಾ ಎಂದು ಬಿಡು *********ರಚನೆ ******* ಡಾ. ಚಂದ್ರಶೇಖರ್ ಸಿ.ಹೆಚ್

ಭಾವ ಗೀತೆ -28

Image
  🌹 ನನ್ನ ಪ್ರೀತಿ ಹೇಳಲೆ 🌹 ಹೃದಯದ ಪ್ರೀತಿ ನಾ ಹೇಳಲೇ ನಿನಗೆ ನನ್ನ ಹೃದಯವ ಚುಚ್ಚಿ ಕೊಲ ಬೇಡ ಕೊನೆಗೆ //ಪಲ್ಲವಿ// ಕಾಮನಬಿಲ್ಲಂತೆ ಬಳುಕುವ  ಬಳ್ಳಿ ನನ್ನವಳು ಬಣ್ಣಗಳು ಸಾರಿವೆ ಅವಳೇ ನಿನ್ನವಳು ಬರೆವ ಕವನವು ನನ್ನವಳ ಹೆಸರ ಹೇಳಿದೆ ನನ್ನ ಮನಸ್ಸು ನನ್ನವಳ ಬಯಸಿದೆ        ಕಣ್ಣ ನೋಟದಿ ಪ್ರೀತಿ ಓದುವ ಜಾಣೆ        ನನ್ನ ಬದುಕ ಖಾಲಿ ಪುಟ ಓದಲು ತಡವೇಕೊ ಕಾಣೆ ನಿನ್ನ ಹೆಜ್ಜೆ ಸೋಕಿದರೆ ಹೂವೊಂದು  ನಗುವುದು ಗಮ್ಮನೆಯ ಪರಿಮಳ ಬೀರಿ ನೋವು ಮರೆತು ಕುಣಿವುದು     ನನ್ನ ಜೀವದ ಸಂಗಾತಿ ಬಾಳೋಣ ಬಾ ಬದುಕು ಬೆರಗಿನ ರೀತಿ? **********ರಚನೆ*******  ಡಾ. ಚಂದ್ರಶೇಖರ್ ಸಿ. ಹೆಚ್

ಭಾವ ಗೀತೆ -27

Image
  🌹ಸಿಟ್ಟ್ಯಾಯಕೆ ನನ್ನ ಓಡತಿ 🌹 ಸಿಟ್ಟಯಾಕೆ ಓ ಗೆಳತಿ ಸಿಡುಕಬೇಡ ನನ್ನ ಒಡತಿ ನೀ ನಕ್ಕರೆ ಓ ನನ್ನ ಚಿನ್ನ ಬೆಳದಿಂಗಳ ಚಂದ್ರನು ನೂರೆ ಹಾಲ ಬಣ್ಣ //ಪಲ್ಲವಿ// ಮಾತೊಂದು ಮುತ್ತು ಓ  ಗೆಳತಿ ಮುತ್ತು ತರಬಾರದು ಕುತ್ತು ಒಡತಿ ನನ್ನವಳು ಅಪರೂಪದ ಗುಣದ ಜಾಣೆ ದೇವರು ನನಗಾಗಿ ಏಕೆ ನೀಡಿದ ನಾ ಕಾಣೆ ತನ್ನಯ ಹೊಟ್ಟೆ ಕಿಚ್ಚು ತನ್ನ ತಾನೇ ಸುಡುವುದು ಪ್ರೀತಿಯ ಹಣತೆಯ ಹಚ್ಚು ಬೆಳಕು ಸುರಿವುದು ಕಪ್ಪನೆಯ ಕಾಡಿಗೆಯು ನಿನ್ನ ಕಣ್ಣ ರೆಪ್ಪೆಗೆ ಅಂದ ಕೆಂಪು ಕೆನ್ನೆಯು ನಿನಗೆ ನೋಡಲೆಷ್ಟು ಚಂದ ಓ ಗೆಳತಿ ಬದುಕಿನಲ್ಲಿ ನೋವು ನಲಿವು ಸಾಗಿಸುವುದು ಬಾಳ ಬಂಡಿ ಗೆಲ್ಲಬೇಕು ನಾವು ಪ್ರೀತಿ ಅಂಚಿ ಗಂಡಾ ಗುಂಡಿ *********ರಚನೆ ******* ಡಾ. ಚಂದ್ರಶೇಖರ್ ಸಿ.ಹೆ ಚ್

ಭಾವಗೀತೆ -26

Image
  🌹 ತುಟಿಯಂಚಲೆ ಕವನ🌹 ತುಟಿಯಂಚಲೆ ಮಿನುಗುತಿದೆ ಪ್ರೇಮದ ಕವನ ಮುತ್ತಿಕಲೆ ಸವಿ ಇರಲಿ ಅಲುಗಾಡದೆ ನಯನ ಹೃದಯದಿ ಹರಿಯಲಿ ಪ್ರೀತಿಯ ಹೊಸ ಕಾವ್ಯ ಮನದಲ್ಲಿ ಮೂಡಿದೆ ಜೀವನದ ಸೃಷ್ಟಿಯ ಭವ್ಯ //ಪಲ್ಲವಿ// ನಿನ್ನ ಹಾಡಿನ ಸ್ವರಕೆ ಮನದಲ್ಲಿ ಮಿಂಚು ನಿನ್ನ ನವೀಲ ನರ್ತನ ಮಾಡಿದೆ ಬಲು ಸಂಚು ಆಕಾಶವೇ ಖಾಲಿ ಹಾಳೆ ನಿ ಇರುವಾಗ ಚಂದ್ರನೇ ಮರೆಯಾದಂತೆ ನೀ ಕಣ್ಣ ತೆರೆದಾಗ ಕಾಮನಬಿಲ್ಲು ನಾಚಿದೆ ನಿನ್ನ ಹುಬ್ಬ ಅಂದಕ್ಕೆ ರೆಪ್ಪೆಗಳು ಗರಿಬಿಚ್ಚಿ ಹಾರಾಡಿವೆ ಹಕ್ಕಿ ರಕ್ಕೆಯಂತೆ ತುಟಿ ಬಿಚ್ಚಿ ನೀ ನಗಲು ನಕ್ಷತ್ರ ಮಿನುಗಿದಂತೆ ಸವಿ ಮಾತು ಪ್ರಕೃತಿಯ ಜಲ ಹರಿದಂತೆ ವರ್ಣಿಸಲು ಸಾಲದು  ಈ ಕವನಗಳ ಸಾಲು ರಸ ಕಾವ್ಯದ ಸವಿ ಹೊನಲು ನೀ ಬಳಿ ಇರಲು ಕವಿಯಾಟವ ಬಣ್ಣಿಸಲು ಪದಗಳ ಮೋಡಿ ಪ್ರೀತಿಯಲ್ಲಿ ಮನ ಕೂಗಿತು ನೀನೇ ನನ್ನ ಜೋಡಿ *********ರಚನೆ******** ಡಾ. ಚಂದ್ರಶೇಖರ್ ಸಿ. ಹೆಚ್