ಭಾವ ಗೀತೆ -33
🌹 ಕೆಸರಿನ ತಾವರೆ🌹
ಕೆಸರಲ್ಲಿ ಕೊಸರಿ ಮುದುಡಿದ ತಾವರೆ
ಏನಿದು ನಿನ್ನಯ ಮೊಗವು
ಅರಳಿ ನಗುವ ನಿನ್ನಯ ಬದುಕಿಗೆ
ಯಾರಿಟ್ಟರು ತಿರುವು. //ಪಲ್ಲವಿ//
ಸುವಾಸನೆ ಬೀರಿ ನಗುವ ಮಲ್ಲಿಗೆ
ಮಾಸಿದೆ ನಿನ್ನ ಕಂಪು
ನಿನ್ನ ಮುಡಿವ ಜೀವಕ್ಕೆ ನೀನೇ
ಅರಳಿಸುವೆ ತಂಪು
ಕೆಂಪು ಕೆನ್ನೆಯ ಓ ಗುಲಾಬಿ
ಮುಳ್ಳಿನ ನಡುವೆ ನೀ. ಶಾರಭಿ
ಮುಳ್ಳೊಂದು ನಿನ್ನ ಎದೆಯಲ್ಲಿ ಮೂಡಿಸಿತು
ನಗುವ ಸುಂದರಕಾಂತಿ
ಮರದ ಹಸಿರಲಿ ಸಂಪಿಗೆ ಕಂಪು
ನನ್ನ ಹೃದಯ ಬಯಸಿದೆ ಇಂಪು
ನಿನ್ನ ಮುಡಿವ ಮನದಲ್ಲಿ ಏನೋ ಆಸೆ
ಸೌಂದರ್ಯಕ್ಕೆ ನೀನೇ ಸೊಗಸೆ
ಭೂಮಿಯ ಸೀಳಿ ನುಗ್ಗಿದ ಬಿದಿರು
ತಂದಿಹೆ ನೀನು ಇಳೆಗೆ ಅದಿರು
ಬೆಳೆಯುವ ನನ್ನ ತಡೆಯುವರಾರು
ಬೆಳೆಸಿದೆ ನೀನು ಅಕ್ಕಿಯ ತವರು
********ರಚನೆ *********
ಡಾ. ಚಂದ್ರಶೇಖರ್ ಸಿ .ಹೆಚ್
Great word sr
ReplyDelete