ಭಾವ ಗೀತೆ -32
🌹 ನನ್ನವಳ ಪೂಜೆ🌹
ಪೂಜೆಯ ಮಾಡಿ ಪಡೆದೆ ನಾನು ನನ್ನವಳ
ಬೇಡಿದರು ಮತ್ತೆ ಸಿಗದ ಮಲ್ಲಿಗೆ ಅಂತವಳ //ಪಲ್ಲವಿ//
ಕಣ್ಣ ರೆಪ್ಪೆಯ ಕಾಡಿಗೆಯಲ್ಲಿ ಮೋಹಕ ನೋಟ
ಕೆಂಪು ಕೆನ್ನೆಯು ಹೇಳಿದೆ ಚಂದುಳ್ಳಿ ಮಾಟ
ಮೈಮಾಟವ ನೋಡಿ ಬೆಳದಿಂಗಳ ಚಂದಿರ ನಕ್ಕಾನು
ಬೆವರ ಹನಿಯ ಕಂಡು ಸೂರ್ಯನು ಸುಟ್ಟಾನು
ಸಂಗೀತದ ಸ್ವರದ ಮಾತು ಕೇಳಲು ಇಂಪಂತೆ
ಸೀರೆ ಸೆರಗಿನ ಗಾಳಿ ಬೀಸಿತು ತಂಪಂತೆ
ಗೆಜ್ಜೆಯನಾದಕೆ ಹೆಜ್ಜೆಯೂ ಕುಣಿದಿದೆ ನವಿಲ್ಲಂತೆ
ಮುಂಜಾನೆದ್ದು ನೋಡಲು ನನ್ನವಳು ಅಪ್ಸರೆಯಂತೆ
ನಿನ್ನ ಸೊಬಗನು ಬಣ್ಣಿಸಲು ಪದಗಳು ನೂರೆಂಟು
ಹುಡುಕುತ್ತಾ ಹೊರಟರೆ ಚಿಂತೆಗೆ ಉತ್ತರ ಎಲ್ಲುಂಟು
**********ರಚನೆ********
ಡಾ. ಚಂದ್ರಶೇಖರ್ ಸಿ ಹೆಚ್
S sir u r lucky
ReplyDelete