ಭಾವ ಗೀತೆ -27
🌹ಸಿಟ್ಟ್ಯಾಯಕೆ ನನ್ನ ಓಡತಿ 🌹
ಸಿಟ್ಟಯಾಕೆ ಓ ಗೆಳತಿ
ಸಿಡುಕಬೇಡ ನನ್ನ ಒಡತಿ
ನೀ ನಕ್ಕರೆ ಓ ನನ್ನ ಚಿನ್ನ
ಬೆಳದಿಂಗಳ ಚಂದ್ರನು ನೂರೆ ಹಾಲ ಬಣ್ಣ //ಪಲ್ಲವಿ//
ಮಾತೊಂದು ಮುತ್ತು ಓ ಗೆಳತಿ
ಮುತ್ತು ತರಬಾರದು ಕುತ್ತು ಒಡತಿ
ನನ್ನವಳು ಅಪರೂಪದ ಗುಣದ ಜಾಣೆ
ದೇವರು ನನಗಾಗಿ ಏಕೆ ನೀಡಿದ ನಾ ಕಾಣೆ
ತನ್ನಯ ಹೊಟ್ಟೆ ಕಿಚ್ಚು
ತನ್ನ ತಾನೇ ಸುಡುವುದು
ಪ್ರೀತಿಯ ಹಣತೆಯ ಹಚ್ಚು
ಬೆಳಕು ಸುರಿವುದು
ಕಪ್ಪನೆಯ ಕಾಡಿಗೆಯು
ನಿನ್ನ ಕಣ್ಣ ರೆಪ್ಪೆಗೆ ಅಂದ
ಕೆಂಪು ಕೆನ್ನೆಯು ನಿನಗೆ
ನೋಡಲೆಷ್ಟು ಚಂದ ಓ ಗೆಳತಿ
ಬದುಕಿನಲ್ಲಿ ನೋವು ನಲಿವು
ಸಾಗಿಸುವುದು ಬಾಳ ಬಂಡಿ
ಗೆಲ್ಲಬೇಕು ನಾವು ಪ್ರೀತಿ
ಅಂಚಿ ಗಂಡಾ ಗುಂಡಿ
*********ರಚನೆ *******
ಡಾ. ಚಂದ್ರಶೇಖರ್ ಸಿ.ಹೆ ಚ್
Comments
Post a Comment