ಭಾವ ಗೀತೆ -40

 



    🌹 ಕನ್ನಡ ನುಡಿ ನಮನ🌹


ತಿರುಪತಿಯಲ್ಲಿ ತಿಮ್ಮಪ್ಪನ ವೈಕುಂಠ

ಕರ್ನಾಟಕದಲ್ಲಿ ಕನ್ನಡ ನುಡಿ ಸವಿಕಂಠ

ಬಸವಣ್ಣನವರು ಸಾರಿದರು ಕಾಯಕವೇ ಕೈಲಾಸ

ದ್ವೇಷ ಅಸೂಯೆ ಮನೆ ಮಾಡಿರೆ ಎಲ್ಲಿಹುದು ಮಂದಹಾಸ //ಪಲ್ಲವಿ//


ಕನ್ನಡ ಕನ್ನಡ ಕನ್ನಡ ವೆನವುದೇ ಶಕ್ತಿ

ಕನ್ನಡಮ್ಮನ ಪಾದಕ್ಕೆ ಕೈಮುಗಿ ಸಿಗುವುದು ಮುಕ್ತಿ

ಪೂಜಿಸು ಕನ್ನಡಮ್ಮನ ತೋರಿ ನೀ ಭಕ್ತಿ

ಕನ್ನಡಾಂಬೆ ಕೊಡುವಳು ನಿನಗೆ ಮೆರೆವಾ ಯುಕ್ತಿ


ರಾಜರು ಕವಿಗಳು ದಾಸರು ಸಂತರು

ಹುಟ್ಟಿ ಬೆಳೆದ ನಾಡು ಕನ್ನಡ

ರನ್ನ ಪಂಪ ಲಕ್ಷ್ಮೀಶ ಜನ್ನಾರ

ಸಾಹಿತ್ಯದ ಒನಲು ಕನ್ನಡ


ನಮ್ಮಯ ನುಡಿಗೆ ಎಲ್ಲಿದೆ ಮಿಗಿಲು

ಸಿರಿಯ ನಾಡಿಗೆ ಏತಕೆ ದಿಗಿಲು

ವೈಜ್ಞಾನಿಕವಾಗಿ ನಾಡು ಮುಂದಿರಲು

ಅಜ್ಞಾನದ ಕೇಡು ಹಿಂದೆ ಸರಿದಿರಲು


ಕೃಷಿ ಕೈಗಾರಿಕೆ ಅಣೆಕಟ್ಟುಗಳು

ನಾಡಲ್ಲಿ ತುಂಬಿ ಜ್ಞಾನವ ಬೆಳೆದಿರಲು

ಏತಕೆ ನಮಗೆ ಭಯವು

ಕನ್ನಡ ನಾಡ ನುಡಿಯು ನಮ್ಮಯ ಗೆಲುವು


********ರಚನೆ********

ಡಾ. ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35