ಭಾವಗೀತೆ -26
🌹 ತುಟಿಯಂಚಲೆ ಕವನ🌹
ತುಟಿಯಂಚಲೆ ಮಿನುಗುತಿದೆ ಪ್ರೇಮದ ಕವನ
ಮುತ್ತಿಕಲೆ ಸವಿ ಇರಲಿ ಅಲುಗಾಡದೆ ನಯನ
ಹೃದಯದಿ ಹರಿಯಲಿ ಪ್ರೀತಿಯ ಹೊಸ ಕಾವ್ಯ
ಮನದಲ್ಲಿ ಮೂಡಿದೆ ಜೀವನದ ಸೃಷ್ಟಿಯ ಭವ್ಯ //ಪಲ್ಲವಿ//
ನಿನ್ನ ಹಾಡಿನ ಸ್ವರಕೆ ಮನದಲ್ಲಿ ಮಿಂಚು
ನಿನ್ನ ನವೀಲ ನರ್ತನ ಮಾಡಿದೆ ಬಲು ಸಂಚು
ಆಕಾಶವೇ ಖಾಲಿ ಹಾಳೆ ನಿ ಇರುವಾಗ
ಚಂದ್ರನೇ ಮರೆಯಾದಂತೆ ನೀ ಕಣ್ಣ ತೆರೆದಾಗ
ಕಾಮನಬಿಲ್ಲು ನಾಚಿದೆ ನಿನ್ನ ಹುಬ್ಬ ಅಂದಕ್ಕೆ
ರೆಪ್ಪೆಗಳು ಗರಿಬಿಚ್ಚಿ ಹಾರಾಡಿವೆ ಹಕ್ಕಿ ರಕ್ಕೆಯಂತೆ
ತುಟಿ ಬಿಚ್ಚಿ ನೀ ನಗಲು ನಕ್ಷತ್ರ ಮಿನುಗಿದಂತೆ
ಸವಿ ಮಾತು ಪ್ರಕೃತಿಯ ಜಲ ಹರಿದಂತೆ
ವರ್ಣಿಸಲು ಸಾಲದು ಈ ಕವನಗಳ ಸಾಲು
ರಸ ಕಾವ್ಯದ ಸವಿ ಹೊನಲು ನೀ ಬಳಿ ಇರಲು
ಕವಿಯಾಟವ ಬಣ್ಣಿಸಲು ಪದಗಳ ಮೋಡಿ
ಪ್ರೀತಿಯಲ್ಲಿ ಮನ ಕೂಗಿತು ನೀನೇ ನನ್ನ ಜೋಡಿ
*********ರಚನೆ********
ಡಾ. ಚಂದ್ರಶೇಖರ್ ಸಿ. ಹೆಚ್
ನಿಮ್ಮ ಒಳನೋಟವೆ ಅದ್ಭುತ ಗುರುಗಳೆ
ReplyDelete