ಭಾವ ಗೀತೆ -28

 



🌹 ನನ್ನ ಪ್ರೀತಿ ಹೇಳಲೆ 🌹


ಹೃದಯದ ಪ್ರೀತಿ ನಾ ಹೇಳಲೇ ನಿನಗೆ

ನನ್ನ ಹೃದಯವ ಚುಚ್ಚಿ ಕೊಲ ಬೇಡ ಕೊನೆಗೆ //ಪಲ್ಲವಿ//


ಕಾಮನಬಿಲ್ಲಂತೆ ಬಳುಕುವ  ಬಳ್ಳಿ ನನ್ನವಳು

ಬಣ್ಣಗಳು ಸಾರಿವೆ ಅವಳೇ ನಿನ್ನವಳು

ಬರೆವ ಕವನವು ನನ್ನವಳ ಹೆಸರ ಹೇಳಿದೆ

ನನ್ನ ಮನಸ್ಸು ನನ್ನವಳ ಬಯಸಿದೆ


       ಕಣ್ಣ ನೋಟದಿ ಪ್ರೀತಿ ಓದುವ ಜಾಣೆ

       ನನ್ನ ಬದುಕ ಖಾಲಿ ಪುಟ ಓದಲು ತಡವೇಕೊ ಕಾಣೆ


ನಿನ್ನ ಹೆಜ್ಜೆ ಸೋಕಿದರೆ

ಹೂವೊಂದು  ನಗುವುದು

ಗಮ್ಮನೆಯ ಪರಿಮಳ ಬೀರಿ

ನೋವು ಮರೆತು ಕುಣಿವುದು


    ನನ್ನ ಜೀವದ ಸಂಗಾತಿ

ಬಾಳೋಣ ಬಾ ಬದುಕು ಬೆರಗಿನ ರೀತಿ?



**********ರಚನೆ*******

 ಡಾ. ಚಂದ್ರಶೇಖರ್ ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35