ಭಾವ ಗೀತೆ -35
🌹 ಕನ್ನಡ ಕೋಗಿಲೆ🌹
ಮಾಮರ ಚಿಗುರಿದೆ ಕೋಗಿಲೆ ಕೂಗಿದೆ
ವಸಂತ ಮಾಸದಲ್ಲಿ
ನವಿಲುಗರಿ ಬಿಚ್ಚಿ ಕುಣಿದಿದೆ
ಕನ್ನಡ ನಾಡಿನಲ್ಲಿ //ಪಲ್ಲವಿ//
ಅರಳುವ ಹೂವಿಗೆ ಹೃದಯವು ಮಿಡಿದಿದೆ
ಕನ್ನಡ ಭಾವದಲ್ಲಿ
ನಗುವ ಮೊಗ್ಗು ದುಂಬಿಯ ಮುತ್ತಿಗೆ
ನಾಚಿದೆ ಒಲುಮೆಯಲ್ಲಿ
ನೀಲಿಯ ಗಗನದಿ ಮೋಡದ ಚುಂಬನಕೆ
ಅರಳಿದೆ ಮೈಮನವು
ಸಹ್ಯಾದ್ರಿ ತಪ್ಪಲಲಿ ಮಳೆ ಸುರಿದಿದೆ
ಭಾನು ಹಗುರಾಗಿ
ಬೆಳದಿಂಗಳ ಚಂದ್ರನ ಹೊಳಪು ಕಂಡು
ನಾಚಿದಳು ರತಿಯು
ಅರಳಿದ ಕೆಂದಾವರೆಯು ನೀರಲ್ಲಿ ಮಿಂದು
ಬಾಗಿದಳು ಕೆಸರಾಗಿ
ಕನ್ನಡ ಮರೆಸಲು ಕವನವು ಬರೆದೆ
ನಾಡು ನುಡಿಯ ಸೊಬಗ ಬಣ್ಣಿಹೆ
ಹೃದಯದ ಮಾತಿಗೆ ಪದಗಳ ಹೂಡಿಹೆ
ಕವಿತೆ ರಾರಾಜಿಸಲಿ
*********ರಚನೆ *******
ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment