ಭಾವ ಗೀತೆ -39

 



🌹 ಭಾರತವೆ ಮಂದಿರ🌹


ಕನ್ನಡ ನುಡಿಯ ನುಡಿವ

ಕರ್ನಾಟಕವು ಸುಂದರ

ಭಾರತದ ಹೆಮ್ಮೆಯ ಪ್ರತಿಕ

ನಮ್ಮ ರಾಮ ಮಂದಿರ. //ಪಲ್ಲವಿ)//


ವಿಶ್ವದೆಲ್ಲಡೆ ಭಾರತದ

ದೇವರುಗಳ ಗುಡಿ ಗೋಪುರ

ದೇವನೊಬ್ಬ ನಾಮ ಹಲವು

ಎಂಬ ಪದವೇ ನಮ್ಮ ಮಂತ್ರ


ಭಾಷೆಗಳು ಹಲವು ಇದೇ ಗೆಲುವು

ಜಾತಿಗಳು ನೂರು ಬಿಟ್ಟಿವೆ ಬೇರು

ಭವ್ಯ ನಾಡು ಭಾರತವು ಸುಂದರ

ನಾಡು ನುಡಿಗಳು ಹಬ್ಬಿವೆ ಜಗದ ವಿಸ್ತಾರ


ಮನುಜ ಮತ ವಿಶ್ವಪಥ

ಭಾರತದ ಒಲವ ನಿಲುವು

ಪ್ರಜಾಪ್ರಭುತ್ವದ ಮೆರೆವು

ಭಾರತದ ಜನರ ಗೆಲುವು


ತಾಯಿ ಭಾರತಾಂಬೆಯ

ಕರುಳ ಕುಡಿಗಳು ನಾವು

ದೇಶಕ್ಕಾಗಿ ಭೇದ ಭಾವ

ಎಂದು ಮಾಡದ ಬಾಳುವೆವು


ಮಾತು ಒಂದು ಮುತ್ತಂತೆ

 ನುಡಿವ ಭಾಷೆ ತುತ್ತಂತೆ

ಮಾತಿಗಿಲ್ಲಿ ಬೆಲೆ ಉಂಟು

ಅನ್ಯಾಯಕಿಲ್ಲಿ ಸಾವುಂಟು


ಜೈ ಜೈ ಭಾರತಾಂಬೆ ಎನಲು

ತುಂಬುವುದು ತಾಯಿ ಮಡಿಲು

ನಗುತನಲಿವ ತಾಯಿಯ

ನಲಿಯುವುದು ಒಡಲು


ವೀರ ಯೋಧರಿಗಾಗಿ ನಮ್ಮ ಕಣ್ಣೀರು

ದೇಶ ಕಾಯುವ ಯೋಧನಿಗೆ ಸಿಗಲಿ ಸವಿ ನೀರು

ನೆತ್ತರ ಹರಿದರು ಸಾವೇ ಬಂದರೂ

ದೇಶವೇ ನಮ್ಮ ಹೆಸರು ಉಸಿರು


**********ರಚನೆ******* 

ಡಾ.ಚಂದ್ರಶೇಖರ್ ಸಿ.ಹೆ ಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35