ಭಾವ ಗೀತೆ -38

 



     🌹 ಕನ್ನಡದ ಮರ🌹


ಕನ್ನಡವೆಂಬ ಅಲದ ಮರವು

ಸುಂಟರಗಾಳಿಗೆ ನಲುಗೀತೆ

ಕನ್ನಡ ತಾಯಿಯ ಎದೆ ಹಾಲುಂಡು

ಮಕ್ಕಳು ಮರದಡಿ ಮಲಗೀವೆ //ಪಲ್ಲವಿ//


ಅಮ್ಮನ ತುತ್ತು ಅಮೃತದಂತೆ

ಸಂಜೀವಿನಿಯಾಗಿ ತಾಗಿತೆ

ನೂರು ಮಂದಿಯ ಹಸಿವು

ತಿನ್ನುವ ಅನ್ನವ ಬಯಸಿತೆ


ಉಂಡಾ ಮನೆಗೆ ದ್ರೋಹವು ತರವೇ

ಒಂದೇ ತಟ್ಟೆಯಲ್ಲಿ ತಿಂದು ಚಾಕು ಇರಿವುದು ಒಲವೆ

ನಾಟಕವಾಡತ ವಂಚಿಹರು ಜನರು ನರಿಯಂತೆ

ಧೈರ್ಯದಿ ಬಾಳಲಿ ಮುಂದೆ ಸಾಗು ನೀ ಹುಲಿಯಂತೆ


ಕಾಯಕವನ್ನು ಮಾಡದ ಮನುಜನಿಗೆ

ಅಂಗೈ ಲಿಂಗವ ಹಿಡಿದರೆ ಸಿಗುವುದೇ ಕೈಲಾಸ

ಕನ್ನಡವನ್ನು ನುಡಿಯದ ಮನುಜಗೆ

ಕನ್ನಡಾಂಬೆ ಕೊಡುತಿಹಳು ಕೈಕಾಸ


ಹಣದ ಕೊರತೆ ನೀಗಲೂ ಬೇಕು

ನಮಗೆ ಇಂಗ್ಲೀಷ

ಚಿನ್ನದ ಗಡಿಗೆಯಲ್ಲಿ ತುಂಬಿದರು

ಕನ್ನಡ ಬಾರದ ಜನರ ಮಾತು ಕಂಗ್ಲೀಷು


*********ರಚನೆ*******

ಡಾ.ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35