ಭಾವ ಗೀತೆ -34
🌹ಕನ್ನಡ ನುಡಿ 🌹
ಕನ್ನಡ ಒಂದು ಅರಳುವ ನುಡಿಮುತ್ತು
ಬಯಸಿ ಬಂದವಗೆ ನೀಡುವುದು ಸಿಹಿತುತ್ತು
ಕನ್ನಡವೆನ್ನುಲು ಕುಣಿಯುವುದು ಈ ದೇಹ
ಕನ್ನಡ ನುಡಿಯೊ ತೀರಿಸುವುದು ಸಂಗೀತದ ದಾಹ //ಪಲ್ಲವಿ//
ಕನ್ನಡ ಪದವು ನಮ್ಮ ಉಸಿರಿನ ಸೆಲೆ
ಬಯಸಿ ಬಂದವನಿಗೆ ನೀಡುವುದು ನೆಲೆ
ಕನ್ನಡ ಭಾಷೆ ನಾಡು ಬೀಡು ಸ್ವರ್ಗ
ಕಲಿತು ಬಾಳುವವಗೆ ತೋರುವುದು ಮಾರ್ಗ
ಕವಿಗಳು ಋಷಿಗಳು ನುಡಿದ ನುಡಿ ಕನ್ನಡ
ಹೃದಯದಿ ಅರಳುವ ಮಾತು ಸವಿಗನ್ನಡ
ಗಾನ ಕೋಗಿಲೆಗಳ ಕಂಠದಿ ನುಡಿ ಕನ್ನಡ
ಕೇಳಲು ಮನ ಸೋಲುವುದು ನಾದ ಸಿರಿಗನ್ನಡ
ದೈವದ ಸ್ವರ್ಗ ಬಾಳಿನ ಮಾರ್ಗವೇ ಕನ್ನಡ
ಕಾಡಿನ ತವರು ನದಿ ಜರಿಗಳ ನಾಡು ಕನ್ನಡ
ಭಾಷೆಗಳ ನಡುವೆ ಬೆಳೆದು ನಿಂತ ಸಿಹಿ ಕನ್ನಡ
ಮನಮನದಲಿ ಮಿಡಿದು ಚಿಗುರಿದ ಕನ್ನಡ
ಹುಟ್ಟಿದ ಊರು ಮೆಟ್ಟಿದ ನಾಡೆ ಕನ್ನಡ
ರಾಜರುಗಳು ಆಳಿದ ಶಿಲ್ಪ ಕಲೆಯ ನೆಲೆ ಕನ್ನಡ
ಕುಡಿವ ಜಲಕೆ ಚಿನ್ನ ಬೆಳವ ನೆಲಕ್ಕೆ
ಸರಿಸಾಟಿ ಇಲ್ಲದ ನಾಡು ನುಡಿಯೇ ಕನ್ನಡ
*********ರಚನೆ ********
ಡಾ. ಚಂದ್ರಶೇಖರ್ ಸಿ. ಹೆಚ್
Comments
Post a Comment