ಭಾವಗೀತೆ -31
🌹ದಮ್ಮಯ್ಯ ಅಂತೀನೀ 🌹
ದಮ್ಮಯ್ಯ ಏನುತಿನಿ ಬಿಡು ನೀನು ಅಮ್ಮ್ಮಯ್ಯ
ನಕ್ಕರೆ ನಗಲಿ ನನ್ನವಳ ಮೊಗವು // ಪಲ್ಲವಿ//
ಬೊಗಸೆಯ ತುಂಬಾ ನೊರೆ ಹಾಲು
ಮೋಗೆದಿವ್ನಿ
ಕುಡಿದು ಕುಣಿಯಲಿ
ನೋವಾ ಮರೆತೂ ಜಗವ
ಭೂ ಒಡಲ ರಮಿಸಿ ಕಾಡು
ಕತ್ತಲೆ ಬೆಳೆದು ಹನಿ ನೀರು
ಇಳೆಯನ್ನು ತೊಳೆದು
ಹಸಿರು ಹುಡಿಸಯ್ತಿ ಹಸನ ಮಾಡಯ್ತಿ
ದಮ್ಮಯ್ಯ ಏನುತಿನಿ ಬಿಡು ನೀನು ಅಮ್ಮ್ಮಯ್ಯ
ನಕ್ಕರೆ ನಗಲಿ ನನ್ನವಳ ಮೊಗವು
ಮಾತೆಲ್ಲ ಮುತ್ತಾಗಿ ಹೋವಂತೆ
ಊದುರಲಿ ಮಲ್ಲಿಗೆಯೂ
ಮುಡಿಯೇರಿ ಕುಣಿಯಲಿ
ಮನವು ಮಂದಹಾಸ ಬೀರಲಿ
ತೆನೆ ಕೊಯ್ಲು ಭತ್ತವು ರಾಗಿಯ
ಕಣ ತುಂಬಿ ಸುಗ್ಗಿಯ ಪಸಲು
ಮನೆತುಂಬೀ ಕಣಜವು ಬೆಳಗಿ
ಸಂಕ್ರಾಂತಿ ಸಡಗರವ ತೋರಲಿ
ದಮ್ಮಯ್ಯ ಏನುತಿನಿ ಬಿಡು ನೀನು ಅಮ್ಮ್ಮಯ್ಯ
ನಕ್ಕರೆ ನಗಲಿ ನನ್ನವಳ ಮೊಗವು
*********ರಚನೆ*********
ಡಾ.ಚಂದ್ರಶೇಖರ್ ಸಿ.ಹೆಚ್
Comments
Post a Comment