ಭಾವ ಗೀತೆ -37

 



🌹 ನೋಡಿರಣ್ಣ ಕನ್ನಡದ ಜಾತ್ರೆ🌹


ಹೊರಟಿಹರು ನಮ್ಮವರು ಮಾಡಲು ಯಾತ್ರೆಯ

ನೋಡಿರಣ್ಣ ನಮ್ಮ ಕನ್ನಡಾಂಬೆಯ ಜಾತ್ರೆಯ

ಸಾಗಿದೆ ನಮ್ಮಯ ಕನ್ನಡದ ತೇರು

ಕನ್ನಡಿಗರ ಅಭಿಮಾನವು ಬಹಳ ಜೋರು //ಪಲ್ಲವಿ//


ಜ್ಞಾನಪೀಠಗಳು ಎಂಟು ನಮ್ಮ ಕನ್ನಡದ ನಂಟು

ಕವಿ ಸಾಹಿತಿಗಳು ಕನ್ನಡದಲ್ಲಿ ಬಹಳ ಉಂಟು

ಕವಿತೆಗಳು ಬಿಡಿಸಿವೆ ಕನ್ನಡದ ಚಿತ್ರ

ಸುಂದರ ಸೊಗಸಿನ ನಾಡು ಇದು ಮಿತ್ರ


ಕನ್ನಡ ಕಟ್ಟಲು ಸಂಸ್ಕೃತ ಮುಟ್ಟಲು

ಬೆಂದವರು ಎಷ್ಟೋ

ಆಂಗ್ಲರ ದಬ್ಬಾಳಿಕೆಗೆ ನೆತ್ತರು

ಕೊಟ್ಟವರು ಎಷ್ಟೋ


ಹೊರದೇಶಗಳ  ನಾಣ್ಯಕ್ಕೆ ನಾಟ್ಯಾಕೆ

ಕುಣಿದಿದೇ ಕನ್ನಡವು

ಸಂಸ್ಕೃತಿ ಇತಿಹಾಸವು ಮರೆತು

ಸೊರಗಿದೆ ಈ ಜಗವು


ಆಟೋರಿಕ್ಷಗಳ ಮೇಲೆ ಬರೆದದಿಹುದು 

ಕನ್ನಡದ ಕವಿಬರಹ

ಹುಡುಕುತ ಹೊರಟರೆ, ಬೆಂಗಳೂರಿನಲ್ಲಿ

 ಕನ್ನಡಕ್ಕೆ ವಿರಹ


ಕನ್ನಡ ಉಳಿಸಿರಿ ಕನ್ನಡ ಬೆಳಸಿರಿ 

ಕನ್ನಡ ನಾಡಲ್ಲಿ

ಹುಡುಕಲು ಬೇಡಿರಿ ಮುಂದೆ  ಕನ್ನಡವನ್ನು

 ಶಾಸನಗಳಲ್ಲಿ


********ರಚನೆ********* 

ಡಾ. ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35