ಭಾವ ಗೀತೆ -36
🌹 ಕನ್ನಡದ ಹಣತೆ🌹
ಒತ್ತಿದ ಹಣತೆಯು ಹಾರುತಿದೆ
ನೋಡು ಕನ್ನಡಿಗ
ತಾಯ್ನಾಡು ಕತ್ತಲಲ್ಲಿ ಸೋರಗುತಿದೆ
ನೀಡು ಬೆಳಕಿಗ. // ಪಲ್ಲವಿ//
ಖಾಲಿ ಹಾಳೆಯ ಪುಟದಲ್ಲಿ
ಇತಿಹಾಸದ ನೆನಪು
ಆಳಿ ಹೋದವರ ನಡೆಯಲ್ಲಿ
ಪುಟವಿಗ ಹೊಳಪು
ಹರಿವ ಕಾವೇರಿಯ ನೊಂದು
ನೆಮ್ಮದಿ ಹುಡುಕಿಹಳು
ನಮ್ಮಯ ಮನವ ಇಂಗಿತ ಕಂಡು
ಪಕ್ಕದ ರಾಜ್ಯಕ್ಕೆ ಹೊರಟಿಹಳು
ಕನ್ನಡ ನೆಲದಲ್ಲಿ ಕನ್ನಡವನ್ನು
ಹುಡುಕಬೇಕು ನಾವು
ಇಂಗ್ಲೀಷ್ ಹಿಂದಿ ಬೇರೆ ಭಾಷೆಗಳ ಮಧ್ಯೆ
ಕನ್ನಡಕ್ಕೆ ಸಾವು
ಕನ್ನಡಾಂಬೆಯ ಬಾವುಟ ಹಾರಲಿ
ಕನ್ನಡ ನೆಲದಲ್ಲಿ
ಕನ್ನಡಿಗರ ಎಲ್ಲರೂ ಕನ್ನಡ ಬಳಸಲಿ
ಕನ್ನಡಾಂಬೆಯ ಋಣದಲ್ಲಿ
********ರಚನೆ********
ಡಾ.ಚಂದ್ರಶೇಖರ್ ಸಿ.ಹೆಚ್
Comments
Post a Comment