ಭಾವ ಗೀತೆ -30
🌹 ಕವಿತೆಗಳ ಪುಸ್ತಕ🌹
ಬರೆದ ಕವಿತೆಗಳ ಪುಸ್ತಕದ ಉರಣ
ನಿನ್ನ ಕಣ್ಣಿನ ನೋಟ ಬಾಳಿನ ತೋರಣ
ನನ್ನೆದೆಯ ಮೇಲೆ ಗೀಚಿದೆ ನಿನ್ನ ಅಚ್ಚೆ
ನನ್ನುಸಿರ ಮರೆಸಿ ಹಿಡಿಸಿತು ನಿನ್ನ ಕೆನ್ನೆಯ ಮಚ್ಚೆ // ಪಲ್ಲವಿ//
ನೂರು ಹಾಡು ಬಂದರೇನು ಹೋದರೇನು
ನಿನ್ನ ಮಾತು ತಾನೆ ನನ್ನ ಕವನ
ನೂರು ನಾಟ್ಯವನ್ನು ನೋಡಿದರೆನು
ನಿನ್ನ ನಾಟ್ಯಾಕೆ ಸೋತಿತು ನಯನ
ನಂಬು ಗೆಳತಿ ನಿನ್ನ ನೋಡಿ ನಾ ಮರೆತೇ
ಬರೆಯಲೆಗೆ ಬಾಳ ಪಯಣದ ಭವ್ಯ ಕವಿತೆ
ನೋಟದಲ್ಲಿ ಕೊಲ್ಲಬೇಡ
ಮಾತಿನಲ್ಲಿ ಗೆಲ್ಲಬೇಡ
ಓದು ಒಮ್ಮೆ ಮೌನದ ಕವಿತೆ
ನನ್ನ ಎದೆಯ ಮೇಲೆ ನಿನ್ನ ಹೆಸರು ವನಿತೆ
ಪ್ರೀತಿ ಒಂದು ಗಾಯನ
ಮನಸು ಮಾಗಿದ ಹೂಬನ
********ರಚನೆ ********
ಡಾ. ಚಂದ್ರಶೇಖರ್ ಸಿ ಹೆಚ್
Comments
Post a Comment